ವಿ.ಸೋಮಣ್ಣ ಸಿದ್ದರಾಮಯ್ಯ ವಿರುದ್ದ ನಿಂತು ಗೆದ್ದರೆ ಸಿ.ಎಂ.ಆಗ್ತಿನಿ ಎಂಬ ಭ್ರಮೆಯಲ್ಲಿ ಸ್ಪರ್ಧೆಗೆ ಒಪ್ಪಿದ್ದರು-ಎಂ.ಪಿ.ರೇಣುಕಾಚಾರ್ಯ

ತುಮಕೂರು: ವಿ.ಸೋಮಣ್ಣ ಸಿದ್ದರಾಮಯ್ಯ ವಿರುದ್ದ ನಿಂತು ಗೆದ್ದರೆ ಸಿ.ಎಂ.ಆಗ್ತಿನಿ ಎಂಬ ಭ್ರಮೆಯಲ್ಲಿ ಸ್ಪರ್ಧೆಗೆ ಒಪ್ಪಿಕೊಂಡಿದ್ದರು.ಅವತ್ತೇ ಈ ಮಾತು ಹೇಳಬೇಕಾಗಿತ್ತು.ನಾವು ಸೋತ್ತಿದ್ದೇವೆ.ಸೋತ ತಕ್ಷಣ ಯಡಿಯೂರಪ್ಪ ವಿರುದ್ದ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಸಚಿವರ ಎಂ.ಪಿ.ರೇಣುಕಾಪ್ರಸಾದ್ ಹೇಳಿದರು.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ,ಕಿರಿಯ ಶ್ರೀಗಳ ಆಶೀರ್ವಾದ ಪಡೆದು,ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನನ್ನನ್ನೂ ಸೇರಿದಂತೆ ಪಾರ್ಟಿ ಕಟ್ಟಿದ ಎಲ್ಲಾ ಹಿರಿಯ ಶಾಸಕರಿಗೂ ಅನ್ಯಾಯವಾಗಿದೆ.ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರೆ ಮಂತ್ರಿಯಾಗಿರುತ್ತಿದ್ದೆ ಎಂದು ಕೆಲವರ ಬಳಿ ಸೋಮಣ್ಣ ಮಾತನಾಡಿದ್ದಾರೆ.ಕಾಂಗ್ರೆಸ್ ನವರು ಇವರಿಗೆ ಏನು ಸ್ಥಾನಮಾನ ಕೊಟ್ಟಿದ್ದರು.ಸೋಮಣ್ಣ ಹಿಂದೆ ಬಂಧಿಖಾನೆ ಸಚಿವರಾಗಿದ್ದರು. ಯಡಿಯೂರಪ್ಪ ಎಲ್ಲಾ ಸ್ಥಾನಮಾನ ನೀಡಿ ಗೌರವ ನೀಡಿದ್ದಾರೆ.ಎರಡು ಕಡೆ ಸ್ಪರ್ಧಿಸಿ ಎಂದು ಯಡಿಯೂರಪ್ಪ ಹೇಳಿದ್ದರೇ,ಮೇಲಿನವರು ಹೇಳಿದ್ದು.ನೀವು ಸೋತು ಎಲ್ಲೋ ಇದ್ದಾಗ, ನಿಮ್ಮ ಕಣ್ಣೀರು ಒರೆಸಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ, ಕೇಳಿದ ಖಾತೆ ಕೊಟ್ಟಿದ್ದು ಅಪರಾಧವೇ ?ಯಾವ ನೈತಿಕತೆ ಇಟ್ಟುಕೊಂಡು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಿರೀ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ಸಂಘಟನೆ ಮಾಡುವ ಶಕ್ತಿ ಇಲ್ಲವೇ ? ಅವರು ಯಡಿಯೂರಪ್ಪ ಅವರ ಮಗನಾಗಿ ಹುಟ್ಟಿದ್ದೇ ತಪ್ಪೇ, ಎಲ್ಲಾ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ.ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.ವಿಜಯೇಂದ್ರ ಆಯ್ಕೆ ಟೀಕಿಸುವುದು ಅಮಿತ್ ಷಾ, ನಡ್ಡಾಗೆ ಅಪಮಾನ ಮಾಡಿದಂತೆ,ದಾವಣಗೆರೆಯಲ್ಲಿ ಸರ್ವೆ ನಡೆಸಲಿ, ಮತದಾರರು ಯಾರ ಹೆಸರು ಹೆಚ್ಚಿಗೆ ಹೇಳುತ್ತಾರೋ ಅವರಿಗೆ ಟಿಕೇಟ್ ನೀಡಲಿ ಎಂದ ಅವರು,ಮಠದಲ್ಲಿ ಕಟ್ಟಡ ಕಟ್ಟಿದರೆ ಅದರ ಉದ್ಘಾಟನೆ ಮಾಡಲಿ, ಅದನ್ನು ಬಿಟ್ಟು ರಾಜಕೀಯ ಮಾಡುವುದನ್ನು ಬಿಡಲಿ ಎಂದು ಸೋಮಣ್ಣ ಅವರಿಗೆ ಸಲಹೆ ನೀಡಿದರು.

ರಾಜ್ಯದಲ್ಲಿ ಕೆಲವರು ಸಚಿವ ಸ್ಥಾನಕ್ಕಾಗಿ ವಿಶ್ವವೇ ಮೆಚ್ಚಿರುವ ಪ್ರಧಾನಿ ನರೇಂದ್ರಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುತಿ ದ್ದಾರೆ.ಪುಲ್ವಾಮ ದಾಳಿಗೆ ಪ್ರಧಾನಿಯವರೇ ನೇರ ಹೊಣೆ ಎಂಬಂತೆ ಶಾಸಕ ಸಿ.ಎಸ್.ಬಾಲಕೃಷ್ಣ ಮಾತನಾಡಿರುವುದು ಖಂಡನೀಯ. ಪುಲ್ವಾಮ ದಾಳಿಗೆ ಬದಲಾಗಿ,ನಡೆದ ಸರ್ಜಿಕಲ್ ಸ್ಟ್ರೈಕ್‍ನ್ನು ಇಡೀ ವಿಶ್ವವೇ ನೋಡಿದೆ.ಈ ರೀತಿ ಮಾತನಾಡುವುದರಿಂದಲೇ ಜನತೆ 2014ರಲ್ಲಿ ಕಾಂಗ್ರೆಸ್ 33 ಸೀಟು,2019ರಲ್ಲಿ 44 ಸೀಟು ಕೊಟ್ಟಿದ್ದರು. ಈ ಬಾರಿ ಅದಕ್ಕಿಂತಲೂ ಕಡಿಮೆ ಬರಲಿದೆ.ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಯೋಧರಿಗೆ ಸ್ವಾತಂತ್ರ ನಿರ್ಧಾರ ಕೈಗೊಳ್ಳುವ ಅವಕಾಶ ಇರಲಿಲ್ಲ.ಆದರೆ ಮೋದಿ ಅವರಿಗೆ ಸೇನಾ ದಂಡನಾಯಕರಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದಾರೆ.ಸಿ.ಎಸ್.ಬಾಲಕೃಷ್ಣ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು,ಪ್ರಧಾನಿಗಳ ಕ್ಷಮೆ ಕೇಳಬೇಕೆಂದು ರೇಣುಕಾಚಾರ್ಯ ಆಗ್ರಹಿಸಿದರು.

ನೆಹರು, ಇಂದಿರಾಗಾಂಧಿ ಕಾಲದಲ್ಲಿ ದೇಶದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.ಬ್ರಿಟಿಷರಿಗೆ ಹೊಲಿಕೆ ಮಾಡುವುದು ಎಷ್ಟು ಸರಿ ಎಂಬುದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ಮುಖಂಡರಿಗೆ ತೀರುಗೇಟು ನೀಡಿದರು.

.

Leave a Reply

Your email address will not be published. Required fields are marked *