ವಿ.ಸೋಮಣ್ಣ ಅಭಿಮಾನಿಗಳಿಂದ ವಿಕಲಚೇತನರಿಗೆ ನೆರವು

ತುಮಕೂರು: ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಸಿದ್ಧಲಿಂಗ ಸ್ವಾಮೀಜಿಗಳ ದರ್ಶನ ಮಾಡಿ ಆಶೀರ್ವಾದ ಪಡೆದರು.

ಇದೇ ವೇಳೆ ಸಚಿವರು ವಿ.ಸೋಮಣ್ಣ ಅಭಿಮಾನಿ ಬಳಗದವರು ಅಂಧ ಮಕ್ಕಳಿಗೆ, ವಿಕಲಚೇತನ ಮಹಿಳೆಯರಿಗೆ ಕೊಡುಗೆ ಕೊಟ್ಟ ವಿವಿಧ ಪರಿಕರಗಳನ್ನು ವಿತರಿಸಿದರು. ಸಿದ್ಧಗಂಗಾ ಮಠದ ಅಂಧ ಮಕ್ಕಳ ಶಾಲೆ ಕುಡಿಯುವ ನೀರಿನ ಕ್ಯಾನ್‍ಗಳು, ಈ ಶಾಲೆ ಮಕ್ಕಳಿಗೆ ವಾಕಿಂಗ್ ಸ್ಟಿಕ್, ನೀರಿನ ಬಾಟೆಲ್, ಕಲಿಕಾ ಸಾಮಗ್ರಿ, ವಿಕಲಚೇತನ ಮಹಿಳೆಯರಿಗೆ ಎಲೆಕ್ಟ್ರಿಕ್ ಹೊಲಿಗೆ ಯಂತ್ರಗಳನ್ನು ಸಚಿವ ವಿ.ಸೋಮಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಸೋಮಣ್ಣ ಅಭಿಮಾನಿ ಬಳಗದ ಧನಿಯಾಕುಮಾರ್ ವಿತರಿಸಿದರು.

ಅಂಧರಿಗೆ, ವಿಕಲಚೇತನರಿಗೆ ಅನುಕಂಪ ತೋರುವ ಬದಲು ಸಹಾಯ ಮಾಡಬೇಕು ಎಂದ ಸಚಿವ ವಿ.ಸೋಮಣ್ಣ ಅವರು, ಅಭಿಮಾನಿ ಬಳಗದ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಸಚಿವರ ಭೇಟಿ ಸಂದರ್ಭದಲ್ಲಿ ಶಾಸಕ ಬಿ.ಸುರೇಶ್‍ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಮುಖಂಡರಾದ ಎಸ್.ಶಿವಪ್ರಸಾದ್, ಬ್ಯಾಟರಂಗೇಗೌಡ, ಬಿ.ಎಸ್.ನಾಗೇಶ್, ಡಾ.ಪರಮೇಶ್, ಭೈರಣ್ಣ, ವಿ.ಸೋಮಣ್ಣ ಅಭಿಮಾನಿ ಬಳಗದ ಕೊಪ್ಪಳ್ ನಾಗರಾಜು, ಹಕ್ಕೊತ್ತಾಯ ಬಸವರಾಜು, ವಿನಯ್‍ಕುಮಾರ್, ಡಿ.ಎಂ.ಸತೀಶ್, ಸೊಗಡು ಕುಮಾರಸ್ವಾಮಿ, ಪುಷ್ಪ ಉದಯಕುಮಾರ್, ನಂದಿ ಪ್ರಭಾಕರ್, ಸಿದ್ಧಗಂಗಾ ಅಂಧ ಮಕ್ಕಳ ಶಾಲೆಯ ಮುಖ್ಯಸ್ಥರಾದ ಬಿ.ಸಿ.ಚಂದ್ರಶೇಖರ್ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *