ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿ ಗೆದ್ದಿಲ್ಲ ಎಂಬ ಮಾತನ್ನು ವಿ.ಸೋಮಣ್ಣ ಸುಳ್ಳು ಮಾಡುವತ್ತಾ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರನ್ನು ಭಾರೀ ಹಿನ್ನಡೆಯೊಂದಿಗೆ ಮುನ್ನಡೆಯನ್ನು ಸಾಧಿಸಿದ್ದಾರೆ.
ಈಗಾಗಲೇ ವಿ.ಸೋಮಣ್ಣನವರು 1ಲಕ್ಷದ 20ಸಾವಿರ ಮತಗಳಿಂದ ಮುನ್ನಡೆಯನ್ನು ಸಾಧಿಸಿದ್ದು, 20ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಇನ್ನ ಕೇವಲ 9 ಸುತ್ತಿನ ಮತ ಎಣಿಕೆ ಬಾಕಿ ಇದೆ.
ವಿ.ಸೋಮಣ್ಣನವರಿಗೆ ಟಿಕೆಟ್ ಘೋಷಣೆಯಾದ ದಿನವೇ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ನಾನು ತುಮಕೂರಿನ ಮಗನಾಗಿದ್ದು, ಗೆದ್ದು ತುಮಕೂರನ್ನು ವಾರಣಾಶಿ ಮಾಡುತ್ತೇನೆ ಎಂದು ಹೇಳಿದ್ದರು.
ವಿ.ಸೋಮಣ್ಣನವರಿಗೆ ಟಿಕೆಟ್ ನೀಡಿದ್ದಕ್ಕೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಟುವಾಗಿ ವಿರೋಧಿಸಿ, ಅವರ ಪರ ಪ್ರಚಾರವನ್ನೂ ಸಹ ಕೈಗೊಳ್ಳದೆ ಹೊರಗಿನ ಅಭ್ಯರ್ಥಿ ಗೆದ್ದ ಇತಿಹಾಸ ತುಮಕೂರು ಲೋಕಸಭಾ ಕ್ಷೇತ್ರದಲ್ಲಿಲ್ಲ ಎಂದು ಹೇಳಿದ್ದರು.
ಆದರೆ ಈಗ ವಿ.ಸೋಮಣ್ಣನವರು ಜೆ.ಸಿ.ಮಾಧುಸ್ವಾಮಿಯವರಿಗೂ ಸೆಡ್ ಹೊಡೆದು ಗೆಲುವು ಸಾಧಿಸುವತ್ತಾ ಭಾರೀ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಉಳಿದಿರುವ 9 ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಮುನ್ನಡೆಯನ್ನು ಪಡೆಯುವ ಯಾವ ಲಕ್ಷಣಗಳೂ ಕಾಣೀಸುತ್ತಿಲ್ಲ, ಈ ಹಿನ್ನಲೆಯಲ್ಲಿ ವಿ.ಸೋಮಣ್ಣ ಭಾರೀ ಮತಗಳ ಅಂತರದಿಂದ ಗೆಲುವು ಸಾಧೀಸುವ ಲಕ್ಷಣ ಕಂಡು ಬರುತಾ ಇದೆ.
ತುಮಕೂರಿನ ಲೋಕಸಭಾ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿ ಗೆದ್ದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಜಯ ಪಡೆಯುವತ್ತ ಸೋಮಣ್ಣ ಮುನ್ನಡೆ ಸಾಧಿಸುತ್ತಿದ್ದು, ಹೊಸ ಇತಿಹಾಸವನ್ನು ವಿ.ಸೋಮಣ್ಣ ಈ ಮೂಲಕ ಬರೆಯಲಿದ್ದಾರೆ.