ತುಮಕೂರು :ಬಿಜೆಪಿ ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ನಾಮಪತ್ರ ಸಲ್ಲಿಸಲು ಆಗಮಿಸಿದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಶಾಸಕ ಗೋಪಾಲಯ್ಯ ಜಿಲ್ಲಾಧಿಕಾರಿಗಳ ಕಛೇರಿ ಬಳಿ 100 ಮೀಟರ್ ಆಚೆ ನಿಂತು ನಾಯಕರು ಬರುವಿಕೆಯನ್ನು ಕಾಯುತ್ತಿದ್ದರು.

ನೂರಾರು ಬಸ್ಸುಗಳಲ್ಲಿ ಆಗಮಿಸಿದ ಕಾರ್ಯ ಕರ್ತರು ವಿವಿಧ ರಸ್ತೆಗಳಲ್ಲಿ ಟ್ರಾಫಿಕ್ ಜಾಮಿಗೆ ಕಾರಣವಾದರು. ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದ ರಿಂದ ಪತ್ರಕರ್ತರು ಸೇರಿದಂತೆ ಸಾಮಾನ್ಯ ಜನರು ಪರದಾಡುವಂತಾಯಿತು.
ಜಿಲ್ಲಾಧಿಕಾರಿಗಳ ಬಳಿ ಸ್ವತಃ ಎಸ್ಪಿ ಅಶೋಕ್.ಕೆ.ವಿ.ಅವರೇ ಬಿಗಿ ಬಂದೋಬಸ್ತ್ ಮುಂದಾಳತ್ವ ವಹಿಸಿದ್ದರು.
ಯಡಿಯೂರಪ್ಪ ಮತ್ತು ಹೆಚ್.ಡಿ.ಕುಮಾರಸ್ವಾಮಿ ತಡವಾಗಿ ಬಂದಿದ್ದರಿಂದ ನಾಮಪತ್ರ ಸಲ್ಲಿಕೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಗಳ ಕಛೇರಿ ಬಳಿ ಪೋಸ್ಟ್ ಆಫೀಸ್ ತನಕ ಬ್ಯಾರಿಕೇಡ್ ಹಾಕಿ ತಡೆ ಒಡ್ಡಕಾಗಿತ್ತು. ಒಟ್ಟಿನಲ್ಲಿ ಜಿಲ್ಲಾಧಿಕಾರಿ ಗಳ ಕಛೇರಿ ಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.