ತುಮಕೂರಿನಲ್ಲಿ ವಿ.ಸೋಮಣ್ಣ ರೋಡ್ ಶೋ

ತುಮಕೂರು: ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರು ಬುಧವಾರ ಸಂಜೆ ನಗರದಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರೊಂದಿಗೆ ರೋಡ್ ಶೋ ನಡೆಸಿ ವ್ಯಾಪಕ ಪ್ರಚಾರ ನಡೆಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಲೋಕಸಭಾ ಚುನಾವಣೆ ಉಸ್ತುವಾರಿ, ಮಾಜಿ ಸಚಿವ ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಜೆಡಿಎಸ್ ನಗರ ಅಧ್ಯಕ್ಷ ವಿಜಯ್‍ಗೌಡ ಮತ್ತಿತರರು ತೆರೆದ ವಾಹನದಲ್ಲಿ ರೋಡ್ ಶೋನಲ್ಲಿ ಸೋಮಣ್ಣನವರಿಗೆ ಜೊತೆಯಾಗಿದ್ದರು.

ರ್ಯಾಲಿಯಲ್ಲಿ ಸಾವಿರಾರು ಜನ ಪಾಲ್ಗೊಂಡು ಚುನಾವಣಾ ಪ್ರಚಾರದ ಸಂಭ್ರಮ ಹೆಚ್ಚಿಸಿದರು. ದೇಶದ ಅಭಿವೃದ್ಧಿ, ಸುರಕ್ಷತೆ, ನಮ್ಮ ಸಂಸ್ಕøತಿ ರಕ್ಷಣೆಗೆ, ದೇಶವನ್ನು ಸಮರ್ಥವಾಗಿ ಮುನ್ನಡೆಸಲು ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಮತ ನೀಡಿ ಚುನಾಯಿಸಿ, ಸುಭದ್ರ ಭಾರತ, ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕರಿಸಿ ಎಂದು ರೋಡ್‍ನಲ್ಲಿ ಕಾರ್ಯಕರ್ತರು ಪ್ರಚಾರ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ರ್ಯಾಲಿಯುದ್ದಕ್ಕೂ ಸಾರ್ವಜನಿಕರಿಗೆ ಕರಪತ್ರ ವಿತರಿಸಿ, ಕ್ರಮ ಸಂಖ್ಯೆ 3ರ ಕಮಲದ ಗುರುತಿಗೆ ಮತ ನಿಡುವಂತೆ ಕೋರಿದರು.

ಹೊರಪೇಟೆ ವೃತ್ತದಿಂದ ಆರಂಭಗೊಂಡ ರೋಡ್ ಶೋ ಗುಂಚಿ ಸರ್ಕಲ್, ಚರ್ಚ್ ಸರ್ಕಲ್, ಮಂಡಿಪೇಟೆ ಮುಖ್ಯರಸ್ತೆ, ಚಿಕ್ಕಪೇಟೆ, ಆಯಿಲ್‍ಮಿಲ್ ರಸ್ತೆ, ಮಾರುತಿ ಸರ್ಕಲ್‍ವರೆಗೆ ಸಾಗಿತು.

Leave a Reply

Your email address will not be published. Required fields are marked *