ತಿಗಳ ಸಮುದಾಯದ ಬೆಂಬಲ ಕೋರಿದ ವಿ.ಸೋಮಣ್ಣ

ತುಮಕೂರು:ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ನಗರದಲ್ಲಿರುವ ತಿಗಳ ಸಮುದಾಯದ ಮುಖಂಡರುಗಳ ಮನೆಗಳಿಗೆ ಭೇಟಿ ನೀಡಿ, ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವಂತೆ ಮನವಿ ಮಾಡಿದ್ದಾರೆ.

ಸೋಮವಾರ ಸಂಜೆ 4:30ರ ಸುಮಾರಿಗೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಹಾಗು ಇತರೆ ಮುಖಂಡರಗಳೊಂದಿಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಯೋಗಾನಂದಕುಮಾರ್ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ Pಮಲಮ್ಮ ಅವರುಗಳ ಮನೆಗೆ ಭೇಟಿ ನೀಡಿ, ಅಲ್ಲಿ ನೆರೆದಿದ್ದ ನೂರಾರು ತಿಗಳ ಸಮುದಾಯದ ಮುಖಂಡರುಗಳೊಂದಿಗೆ ಚುನಾವಣಾ ವಿಚಾರವಾಗಿ ಮಾತುಕತೆ ನಡಸಿ, ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ನಗರಸಭೆಯ ಮಾಜಿ ಅಧ್ಯಕ್ಷೆ ಕಮಲಮ್ಮ, ವಿ.ಸೋಮಣ್ಣನಂತಹ ವ್ಯಕ್ತಿಗೆ ತುಮಕೂರು ಲೋಕಸಭಾ ಟಿಕೇಟ್ ಸಿಕ್ಕಿರುವುದು ನಮ್ಮ ಪುಣ್ಯ. ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು, ಅವರಲ್ಲಿ ಉಪಕಾರ ಸ್ಮರಣೆ ಇದೆ.ಜನರ ಅದರಲ್ಲಿಯೂ ತಿಗಳ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈ ಹಿಂದೆ ಅಧಿಕಾರದಲ್ಲಿದ್ದಾಗಲು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾಎ. ಹಾಗಾಗಿ ಜಿಲ್ಲೆಯ ಸಮಸ್ತ ತಿಗಳ ಜನಾಂಗದ ಸೋಮಣ್ಣ ಅವರ ಕೈಬಲಪಡಿಸುವ ಕೆಲಸ ಮಾಡಬೇಕಾಗಿದೆ.ಈಗ ನಾವು ಅವರ ಕೈ ಬಲಪಡಿಸುವುದರಿಂದ ಮುಂಬರುವ ಜಿ.ಪಂ., ತಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳ ಅವರು ನಮಗೆ ಅಧಿಕಾರ ದೊರೆಯುವಂತೆ ಮಾಡಲಿದ್ದೇ ಎಂಬಂಬ ನಂಬಿಕೆ ನಮ್ಮದು ಎಂದರು.

ತಿಗಳ ಜನಾಂಗದ ಮುಖಂಡರಾದ ಆನಂತರಾಜು ಮಾತನಾಡಿ,ಈ ಬಾರಿ ದೇಶದಲ್ಲಿ ಬಿಜೆಪಿ ಅಲೆಯಿದೆ.ಹಾಗಾಗಿ ಸೋಮಣ್ಣ ಅವರ ಗೆಲುವು ನಿಶ್ಚಿತ. ನಾವು ಕೊಟ್ಟ ಮಾತಿಗೆ ತಪ್ಪುವವರಲ್ಲ. ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ. ಹಾಗೆಯೇ ನೀವು ಸಹ ನೆನೆಗುದಿಗೆ ಬಿದ್ದಿರುವ ತಿಗಳ ಅಭಿವೃದ್ದಿ ನಿಗಮಕ್ಕೆ ಚಾಲನೆಯ ಜೊತೆಗೆ, ಜಿಲ್ಲೆಯಲ್ಲಿ ಎರಡನೇ ಹಂತದ ನಾಯಕರಾಗಿ ನಮ್ಮ ಸಮುದಾಯದ ಜನರನ್ನು ಬೆಳೆಸಿ, ಅವರು ಸಹ ಬಿಧಾನಸಭೆ, ವಿಧಾನಪರಿಷತ್ ಹೋಗುವಂತಹ ವಾತಾವರಣ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ಮಾತನಾಡಿ,ಸೋಮಣ್ಣ ಅವರು ಒರ್ವ ಸಜ್ಜನ ರಾಜಕಾರಣಿ,ದೇಶದ ಭದ್ರತೆಯ ದೃಷ್ಟಿಯಿಂದ ನಾವೆಲ್ಲರೂ ಮೋದಿ ಅವರ ಕೈ ಬಲಪಡಿಸಬೇಕಿದೆ.ಇಲ್ಲದಿದ್ದಲ್ಲಿ ಉಳಿಗಾಲವಿಲ್ಲ.ಬಿಜೆಪಿ ಈ ದೇಶಕ್ಕೆ ಅನಿವಾರ್ಯವಾಗಿದೆ.ಹಾಗೆಯೇ ತಿಗಳ ಸಮಾಜಕ್ಕೆ ಬಿಜೆಪಿ ಬೇಕಾಗಿದೆ.ಸೋಮಣ್ಣ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಕೈ ಬಲಪಡಿಸಿ,ನಾವು ಸಹ ರಾಜಕೀಯ ಅಧಿಕಾರ ಪಡೆಯಲು ಹೆಜ್ಜೆ ಇರಿಸೋಣ ಎಂದರು.

ಜಿ.ಪಂ.ಮಾಜಿ ಸದಸ್ಯ ಭೀಮಸಂದ್ರ ಕೃಷ್ಣಪ್ಪ ಮಾತನಾಡಿ,ಜಿಲ್ಲೆಯಲ್ಲಿ ತಿಗಳ ಸಮುದಾಯ ಸುಮಾರು 1.50 ಲಕ್ಷ ಮತದಾರರಿದ್ದಾರೆ. ನಮ್ಮ ಸಮುದಾಯದ ಬೆನ್ನೆಲುಬು ಎಂದರೆ ಮಾಜಿ ಸಚಿವರಾದ ದಿವಂಗತ ಲಕ್ಷ್ಮಿ ನರಸಿಂಹಯ್ಯ, ಮತ್ತು ಹಾಲಿ ಸಂಸದ ಜಿ.ಎಸ್.ಬಸವರಾಜು, ವಿ.ಸೋಮಣ್ಣ ಹೊರಗಿನವರು ಎಂಬುದು ಸರಿಯಲ್ಲ. ಸಿದ್ದಗಂಗಾ ಮಠದ ಬೆಳವಣಿಗೆಯಲ್ಲಿ ಸೋಮಣ್ಣ ನವರ ಪಾತ್ರವಿದೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸುಮಾರು 8.04 ಲಕ್ಷ ಮತದಾರರಿದ್ದಾರೆ ಇವೆಲ್ಲರೂ ಓಗ್ಗೂಡಿಸುವುದರ ಜೊತೆಗೆ, ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆದರೆ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಲೋಕಸಭಾ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ,ನಾನು ತುಮಕೂರನ್ನು ಬಯಸಿದವನಲ್ಲ. ವಿಧಿ ನನ್ನನ್ನು ಸಿದ್ದಗಂಗಾ ಸ್ವಾಮೀಜಿಗಳ ಪಾದಗಳಿಗೆ ಅರ್ಪಿಸಿದೆ.ನನ್ನ ರಾಜಕೀಯ ಜೀವನದಲ್ಲಿ ದ್ವನಿ ಇಲ್ಲದ ಸಮುದಾಯಗಳಿಗೆ ದ್ವನಿಯಾಗಿ ಕೆಲಸ ಮಾಡಿದ್ದೇನೆ.ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ. ತಿಗಳ ಸಮುದಾಯದ ಕರ್ಮಯೋಗಿ ಸಮುದಾಯ. ಇಂತಹವರಿಗಾಗಿಯೇ ಪ್ರಧಾನಿ ನರೇಂದ್ರಮೋದಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ಅವಕಾಶ ವಂಚಿತ ಸಮುದಾಯಗಳ ಪರವಾಗಿ ನಿಂತು ಕೆಲಸ ಮಾಡಲಿದ್ದೇನೆ. ನಿಮ್ಮನ್ನು ಬಲಪಡಿಸುವ ಕೆಲಸವನ್ನು ನಾನು ಮಾಡುತ್ತೇನೆ.ಶೀಘ್ರದಲ್ಲಿಯೇ ತಿಗಲ ಸಮುದಾಯದ ಸಮಾವೇಶವನ್ನು ಹಮ್ಮಿಕೊಳ್ಳಲಿದ್ದೇನೆ.ಎಲ್ಲರೂ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಸಹಕರಿಸುವಂತೆ ಮನವಿ ಮಾಡಿದರು.

ಈ ವೇಳೆ ಶಾಸಕರಾದ ಜಿ.ಬಿ.ಜೋತಿಗಣೇಶ್,ಮುಖಂಡರಾದ ಟಿ.ಜಿ.ಹನುಮಂತರಾಜು ಪಟೇಲ್,ನಿವೃತ್ತ ಶಿಕ್ಷಣಾಧಿಕಾರಿ ರಾಜಶೇಖರ್,ಆನಂತರಾಜು, ಕೇಶವ ಕುಲದೀಪ್, ಲಕ್ಷ್ಮಯ್ಯ,ಮಾಜಿ ಕಾರ್ಪೋರೇಟರ್ ರಾಮಕೃಷ್ಣ ಸೇರಿದಂತೆ ಹಲವಾರು ತಿಗಳ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *