ತುಮಕೂರು ಲೋಕಸಭಾ ಸದಸ್ಯರಾದ ವಿ.ಸೋಮಣ್ಣನವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ವಿ.ಸೋಮಣ್ಣ ಅವರು ತುಮಕೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಬೆನ್ನಲ್ಲೇ ಅವರಿಗೆ ಸಚಿವ ಸ್ಥಾನ ಒಲಿದಿದೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ 25 ವರ್ಷಗಳ ನಂತರ ಕೇಂದ್ರ ಸಚಿವ ಸ್ಥಾ. ದೊರೆತಿದೆ.
ತುಮಕೂರಿನಿಂದ ಆಯ್ಕೆಯಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ ಅವರು ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಲೋಕಸಭಾ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.
ವಿ ಸೋಮಣ್ಣ ಅವರು ತುಮಕೂರು ಲೋಕಸಭೆಗೆ ಸ್ಪರ್ಧಿಸಿ ದಾಗ ಅವರು ಗೆಲ್ಲುತ್ತಾರೆ ಎಂಬುದೇ ಬಹುದೊಡ್ಡ ಪ್ರಶ್ನೆ ಆಗಿತ್ತು, ಆದರೆ ಅವರು 1,75,000 ಅಂತರದಿಂದ ಗೆದ್ದು ಇದೀಗ ಸಚಿವರಾಗುತ್ತಿರುವುದು ತುಮಕೂರಿಗೆ ಸಂತಸ ತಂದಿದೆ .
ಸೋಮಣ್ಣನವರು ಟಿಕೆಟ್ ಘೋಷಣೆಯಾದ ನಂತರ ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ದಿನವೇ ತುಮಕೂರನ್ನು ವಾರಣಾಸಿಯನ್ಮಾಗಿ ಮಾಡುವುದಾಗಿ ವಾಗ್ದಾನ ಮಾಡಿದ್ದರು.
ಕಾಂಗ್ರೆಸ್ ಪಕ್ಷವು ವಿ.ಸೋಮಣ್ಣನವರನ್ನು ಹೊರಗಿನವರು ಎಂದು ಪದೇ ಪದೇ ಹೇಳಿದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಸೋಮಣ್ಣನವರು ನಾನು ತುಮಕೂರಿನ ಮಗನೇ ಎಂದು ಹೇಳಿದ್ದರು.
ಬಿಜೆಪಿಯ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ವಿ. ಸೋಮಣ್ಣನವರಿಗೆ ಟಿಕೆಟ್ ನೀಡಿದ್ದಕ್ಕೆ ಪ್ರಬಲವಾಗಿ ವಿರೋಧಿಸಿ, ಹೊರಗಿನಿಂದ ಬಂದೋರು ಗೆದ್ದಿಲ್ಲ ಎಂದು ಹೇಳಿದ ಮಾತು ಈಗ ಸುಳ್ಳಾಗಿದ್ದು, ಸೋಮಣ್ಣ ಗೆದ್ದು ಹೊರಗಿನವರು ಗೆಲ್ಲುವುದಿಲ್ಲ ಎಂಬುದನ್ನು ಅಳಿಸಿ ಹಾಕಿದ್ದಾರೆ.
ಆದರೆ ವಿ.ಸೋಮಣ್ಣನವರು ಎಲ್ಲರ ನಿರೀಕ್ಷೆಯನ್ನು ಸುಳ್ಳು ಮಾಡಿ ಈಗ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿ ಸೋಮಣ್ಣನವರು ಕೇಂದ್ರ ಸಚಿವರಾಗಿರುವುದರಿಂದ ಕಲ್ಪತರು ನಾಡು ಎಂದು ಕರೆಸಿಕೊಳ್ಳುವ ತುಮಕೂರು ಜಿಲ್ಲೆ ತೆಂಗಿಗೆ ಪ್ರಸಿದ್ಧಿ ಪಡೆದಿದ್ದು, ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ತೀವ್ರ ಸಂಕಟ ಎದುರಿಸುತ್ತಿದ್ದು, ಇದೀಗ ವಿ.ಸೋಮಣ್ಣನವರು ಕೇಂದ್ರ ಸಚಿವರಾಗಿರುವುದರಿಂದ ಕೊಬ್ಬರಿಗೆ ಬೆಲೆ ಸಿಗಬಹುದೆಂದು ಜಿಲ್ಲೆಯ ರೈತರು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
ಸೋಮಣ್ಣನವರು ಸಚಿವರಾಗುತ್ತಾರೆಂದು ಯಾರು ನಿರೀಕ್ಷೆ ಮಾಡಿರಲಿಲ್ಲ, ತುಮಕೂರು ನೆಲ ಸೋಮಣ್ಣನವರಿಗೆ ಅದೃಷ್ಟದ ನೆಲವಾಯಿತು ಎಂದು ಹೇಳಬಹುದು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ನಿಂತು ಸೋತಿದ್ದ ವಿ. ಸೋಮಣ್ಣನವರು ಇದೀಗ ತುಮಕೂರು ಲೋಕಸಭೆಯಿಂದ ಸಂಸದರಾಗಿ ಆಯ್ಕೆಯಾಗಿ ಸಚಿವರಾಗಿರುವುದು ಜಿಲ್ಲೆಯ ಜನತೆಗೆ ಸಂತೋಷವನ್ನುಂಟು ಮಾಡಿದೆ.
ಒಟ್ಟಿನಲ್ಲಿ ತುಮಕೂರು ಜಿಲ್ಲೆಯವರೇ ಆಯ್ಕೆಯಾದ ಸಂದರ್ಭದಲ್ಲಿ ಸಚಿವ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ, ಆದರೆ ಹೊರಗಿನಿಂದ ಬಂದು ಆಯ್ಕೆಯಾದ ವಿ ಸೋಮಣ್ಣನವರಿಗೆ ಸಚಿವ ಸ್ಥಾನ ದೊರಕಿರುವುದು ಈ ಜಿಲ್ಲೆಯ ಋಣ ತೀರಿಸುವ ಜವಾಬ್ದಾರಿ ಸೋಮಣ್ಣನವರ ಮೇಲೆ ಹೆಚ್ಚಿದೆ.
3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ಹಾಗೂ ಸೋಮಣ್ಣ ಸಚಿವರಾಗಿದ್ದಕ್ಕೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಸ್ವತಃ ಸೋಮಣ್ಣನವರೇ ನನಗೆ ಸಚಿವ ಸ್ಥಾನ ಸಿಗಬಹುದೆಂದು ನಿರೀಕ್ಷೆಯನ್ನು ಮಾಡಿರಲಿಲ್ಲ. ಒಟ್ಟಿನಲ್ಲಿ ತುಮಕೂರು ಜಿಲ್ಲೆಗೆ ಬಂದು ಆಯ್ಕೆಯಾಗಿದ್ದು ಒಂದು ಇತಿಹಾಸವಾದರೆ, ಸಚಿವರಾಗಿದ್ದು ಮತ್ತೊಂದು ಇತಿಹಾಸ.