ಕೆ.ಲಕ್ಕಪ್ಪ ನಿವಾಸಕ್ಕೆ ವಿ.ಸೋಮಣ್ಣ ಭೇಟಿ

ತುಮಕೂರು: ಮಾಜಿ ಲೋಕಸಭಾ ಸದಸ್ಯ ದಿ.ಕೆ.ಲಕ್ಕಪ್ಪ ಅವರ ನಗರದ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರು ಕೆ.ಲಕ್ಕಪ್ಪನವರ ಪತ್ನಿ ಬಿ.ಜಿ.ಪುಟ್ಟಮ್ಮ ಅವರ ಆರೋಗ್ಯ ವಿಚಾರಿಸಿದರು. ಅನಾರೋಗ್ಯದಲ್ಲಿರುವ ಪುಟ್ಟಮ್ಮನವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ದಿ.ಕೆ.ಲಕ್ಕಪ್ಪನವರು, ಎರಡು ಬಾರಿ ಶಾಸಕರಾಗಿದ್ದರು. ತುಮಕೂರಿನಲ್ಲಿ ಹೆಚ್.ಎಂ.ಟಿ ಕಾರ್ಖಾನೆ ಸ್ಥಾಪನೆಯಾಗಲು ಪ್ರಮುಖ ಕಾರಣರಾಗಿದ್ದರು. ದಿ.ಕೆ.ಲಕ್ಕಪ್ಪ ್ಣನವರ ಪತ್ನಿ ಬಿ.ಜಿ.ಪುಟ್ಟಮ್ಮ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣನವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ದಿ.ಕೆ.ಲಕ್ಕಪ್ಪನವರ ಪುತ್ರ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಲಕ್ಕಪ್ಪ (ದೇವು) ಅವರು, ಕಾಂಗ್ರೆಸ್‍ನವರು ನಮ್ಮ ತಂದೆಯನ್ನು ಮರೆತೇಬಿಟ್ಟಿದ್ದಾರೆ. 32 ವರ್ಷದ ನಂತರ ಈಗ ನಮ್ಮ ತಂದೆ ಫೋಟೊ ಹಾಕಿಕೊಂಡು ಕಾಂಗ್ರೆಸ್ ಮುಖಂಡರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *