1,69,378 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಸ್ಥಾಪಿಸಿದ ವಿ.ಸೋಮಣ್ಣ

ತುಮಕೂರು : ತುಮಕೂರು ಲೋಕಸಭೆಯ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 1,69,378 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರನ್ನು ಪರಾಭವಗೊಳಿಸಿ ಜಯಗಳೀಸಿದ್ದಾರೆ.
ತುಮಕೂರು ಲೋಕಸಭಾ ಇತಿಹಾಸದಲ್ಲೇ ಇಷ್ಟು ಮತಗಳ ಅಂತರದಿಂದ ಜಯಗಳಿಸಿದ ಉದಾಹಣೆಯಿಲ್ಲ, ವಿ.ಸೋಮಣ್ಣ 7,11,992 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ 5,42,614 ಪತಗಳನ್ನು ಪಡೆದಿದ್ದಾರೆ.

ವಿ.ಸೋಮಣ್ಣನವರು 1,69,378 ಮತಗಳ ಅಂತರದಿಂದ ಗೆದ್ದಿರುವುದು ತುಮಕೂರು ಲೋಕಸಭಾ ಚುನಾವಣೆಯ ಫಲಿತಾಂಶ ಇತಿಹಾಸದಲ್ಲಿ ದಾಖಲಾಗಿ ಉಳಿಯುವಂತಾಗಿದ್ದು, ಮತ ಎಣಿಕೆ ಪ್ರಾರಂಭವಾಗುವತನಕ ಸ್ವತಃ ಸೋಮಣ್ಣನವರೇ ಇಷ್ಟೊಂದು ಮತಗಳ ಅಂತರದಿಂದ ಗೆಲುವು ಸಿಗಲಿದೆ ಎಂದುಕೊಂಡಿರಲಿಲ್ಲ.

ಬಹುತೇಕರು ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಹೊರಗಿನ ಅಭ್ಯರ್ಥಿ ಗೆಲ್ಲುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಗೆಲುವು ಸಾಧಿಸಿರುವುದು ಜಿಲ್ಲೆಯ ಜನತೆಗೆ ಅಶ್ಚರ್ಯವಾಗಿದೆ. ಯಾರು ಕೂಡ 1,69,378ಮತಗಳನ್ನು ಸೋಮಣ್ಣ ಮುನ್ನಡೆ ಸಾಧಿಸಿ ಗೆಲ್ಲುತ್ತಾರೆ ಅಂತ ಊಹಿಸಿರಲಿಲ್ಲ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹತ್ತರಿಂದ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು, 7,11,992 ಮತಗಳನ್ನು ಪಡೆದು ಹೊರಗಿವನು ಎಂಬ ಹಣೆ ಪಟ್ಟಿಯನ್ನು 1,69,378ಮತಗಳ ಮುನ್ನಡೆಯಿಂದ ಜಯಗಳಿಸಿ ತಮ್ಮ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ.

8ವಿಧಾನ ಸಭಾ ಕ್ಷೇತ್ರದಲ್ಲೂ ವಿ.ಸೋಮಣ್ಣ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ, ತುರುವೇಕೆರೆಯಲ್ಲಿ 43,964 ಅತಿ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದರೆ, ತುಮಕೂರು ನಗರದಲ್ಲಿ 2,292 ಕಡಿಮೆ ಮತಗಳ ಮುನ್ನಡೆ ಸಾಧಿಸಿರುವ ವಿ.ಸೋಮಣ್ಣ, ಗೃಹ ಸಚಿವ ಕೊರಟಗೆರೆ ಕ್ಷೇತ್ರದಲ್ಲಿ 25,451 ಮತಗಳ ಮುನ್ನಡೆ ಸಾಧಿಸಿದ್ದರೆ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ ಮಧುಗಿರಿ ಕ್ಷೇತ್ರದಲ್ಲಿ 12,802 ಮತಗಳ ಮುನ್ನಡೆಯನ್ನು ಸಾಧಿಸಿದ್ದಾರೆ.

ಯಾವ ಅಭ್ಯರ್ಥಿಯನ್ನು ಹೊರಗಿನವನು ಎಂದು ಕಾಂಗ್ರೆಸ್‍ನವರು ಮೊದಲಿಸಿದರೋ ಅದೇ ಅಭ್ಯರ್ಥಿ 1ಲಕ್ಷದ 69ಸಾವಿರದ 378 ಮತಗಳನ್ನು ಪಡೆದು ಜಯ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಗ್ಯಾರಂಟಿಗಳು ಕಾಂಗ್ರೆಸ್ ಕೈ ಹಿಡಿಯಲಿವೆ ಎಂಬುದನ್ನು ಮತದಾರ ಸುಳ್ಳು ಮಾಡಿದ್ದಾನೆ. ಕೇವಲ ಒಂದು ವರ್ಷದಲ್ಲೇ ಮತದಾರ ಬದಲಾವಣೆಯನ್ನು ಬಯಸಿದ್ದಾನೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾನೆ.

ವಿ.ಸೋಮಣ್ಣನವರು ತುಮಕೂರನ್ನು ವಾರಣಾಸಿ ಮಾಡುತ್ತೇನೆ ಎಂದು ಹೇಳಿದ್ದು, ಈ ಮಾತನ್ನು ಅವರು ಉಳಿಸಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *