ತುಮಕೂರು:ಕರ್ನಾಟಕದಲ್ಲಿ ನಿರ್ಮಾಣವಾಗುವ ವಾಲ್ಡೋ ಟ್ರಾಕ್ಟರ್ ರೈತರ ಎಲ್ಲಾ ರೀತಿಯ ವ್ಯವಸಾಯಕ್ಕೆ ಉಪಯುಕ್ತವಾಗಿದ್ದು,ಕಡಿಮೆ ಬೆಲೆಗೆ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುವ ವಾಲ್ಡೋ ಟ್ರಾಕ್ಟರ್ ಖರೀದಿಸುವಂತೆ ವಾಲ್ಡೋ ಟ್ರಾಕ್ಟರ್‍ನ ಮಾಲೀಕ ವುಬೇದ್‍ವುಲ್ಲಾ ಷರೀಫ್ ತಿಳಿಸಿದರು.
ನಗರದ ರಿಂಗ್ ರಸ್ತೆಯಲ್ಲಿರುವ ವಾಲ್ಡೋ ಟ್ರಾಕ್ಟರ್ ಷೋ ರೂಂನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು,ಬೆಲೆಯಲ್ಲಿ ಇತರೆ ಕಂಪನಿಗಳಿಗಿಂತ ಶೇ15ರಷ್ಟು ಕಡಿಮೆ ಇರಲಿದೆ.ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಎಲ್ಲಾ ರೀತಿಯ ವ್ಯವಸಾಯದ ಕೆಲಸ ಮಾಡಲು ಈ ಟ್ರಾಕ್ಟರ್ ಬಳಸಬಹುದಾಗಿದೆ.ಮುಂದಿನ ದಿನಗಳಲ್ಲಿ ವಾಲ್ಡೋ ಆಟೋ ಇನ್ನಿತರ ಆಟೋ ಮೊಬೈಲ್ ವಹಿಕಲ್‍ಗಳನ್ನು ಉತ್ಪಾದಿಸುವ ಗುರಿ ಇದೆ ಎಂದರು.
ತುಮಕೂರಿನ ಗುಬ್ಬಿಗೇಟ್‍ನ ಸುಫ್ಹಾ ಟವರ್ ವಾಲ್ಡೋ ಟ್ರಾಕ್ಟರ್ ಕಂಪನಿಯ ಕೇಂದ್ರ ಕಚೇರಿಯಿದ್ದು,ಹಿರಿಯೂರಿನಲ್ಲಿ ಉತ್ಪಾಧನಾ ಘಟಕವಿದೆ.ರಾಜ್ಯ 14 ಜಿಲ್ಲೆಗಳಲ್ಲಿ ಪ್ರಾಂಚೇಸಿ ಹೊಂದಿದೆ.2022ರಲ್ಲಿ ಆರಂಭವಾದ ಕಂಪನಿ 18 ಹೆಚ್.ಪಿ.ಯಿಂದ 75 ಹೆಚ್.ಪಿ.ವರೆಗಿನ ವಿವಿಧ ರೀತಿಯ ಟ್ರಾಕ್ಟರ್‍ಗಳನ್ನು ಉತ್ಪಾಧಿಸುತಿದ್ದು, ಇದುವರೆಗು ಸುಮಾರು 750 ಟ್ರಾಕ್ಟರ್‍ಗಳನ್ನು ಸೇಲ್ ಮಾಡಲಾಗಿದೆ. ಎನ್.ಬಿ.ಎಫ್.ಸಿಗಳು ಸಹಕಾರ ನೀಡಿದರೆ ಮತ್ತಷ್ಟು ಯೂನಿಟ್‍ಗಳನ್ನು ಮಾರಾಟ ಮಾಡಬಹುದಾಗಿದೆ. ಈಗಾಗಲೇ ಶ್ರೀರಾಮ್ ಫೈನಾನ್ಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ದೊರೆಯುತ್ತಿದೆ. ಆದರೆ ಎನ್.ಬಿ.ಎಫ್.ಸಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ರೈತರಿಂದ ಕಂತು ಕಟ್ಟಿಸುವ ಜವಾಬ್ದಾರಿ ಕಂಪನಿಯದ್ದೇ ಎಂದು ತಿಳಿಸಿದ್ದರೂ ನಮ್ಮ ವಾಲ್ಡೋ ಟ್ರಾಕ್ಟರ್‍ಗಳಿಗೆ ಲೋನ್ ಮಂಜೂರು ಮಾಡಲು ಹಿಂದೇಟು ಹಾಕುತಿದ್ದಾರೆ. ಇದರಿಂದ ಟ್ರಾಕ್ಟರ್ ಮಾರಾಟ ನಿಗಧಿತ ವೇಗದಲ್ಲಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ವಾಲ್ಡೋ ಟ್ರಾಕ್ಟರ್‍ಗಳಿಗೆ ಏಷ್ಯಾದಲ್ಲಿಯೇ ನಂಬರ್ 1ನೇ ಸ್ಥಾನದಲ್ಲಿರುವ ಕ್ರಿರ್ಲೋಸ್ಕರ್ ಕಂಪನಿಯ ಡಿಸೀಲ್ ಎಂಜಿನ್ ಬಳಕೆ ಮಾಡುತ್ತಿದ್ದು,ಇದರಿಂದ ದಕ್ಷತೆ ಹೆಚ್ಚಿದೆ. ಎಂತಹ ಹವಾಮಾನದಲ್ಲಿಯೂ ಕೆಲಸ ಮಾಡಬಹುದಾಗಿದೆ.ಬೇರೆ ಇಂಜಿನ್‍ಗಳಿಗೆ ಹೊಲಿಕೆ ಮಾಡಿದರೆ ರಸ್ತೆಯಲ್ಲಿ ಒಂದು ಲೀಟರ್‍ಗೆ ಇತರೆ ಟ್ರಾಕ್ಟರ್‍ಗಳಿಗಿಂತ ಎರಡು ಕಿ.ಮಿ.ಹೆಚ್ಚಿಗೆ ಮೈಲೇಜ್ ನೀಡಲಿದೆ. ಉಳುಮೆಯಲ್ಲಿ 3 ಲೀಟರ್ ಡಿಸೇಲ್‍ಗೆ 1 ಗಂಟೆ ಕೆಲಸ ಮಾಡಬಹುದಾಗಿದೆ.ಮಾರುಕಟ್ಟೆಯ ಜೊತೆಗೆ, ಸರ್ವಿಸಿಂಗ ಸಹ ಉತ್ತಮವಾಗಿದ್ದು, ಪ್ರತಿ ಡೀಲರ್‍ಬಳಿಯೇ ಓರ್ವ ಮೆಕಾನಿಕಲ್ ಇಂಜಿನಿಯರ್‍ರನ್ನು ಕಂಪನಿ ನೇಮಕ ಮಾಡಿದ್ದು, ರೈತರಿಂದ ಬರುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ದೊರಕಿಸಿಕೊಡಲಿದ್ದಾರೆ. ತುಮಕೂರಿನ ನಾಗವಲ್ಲಿ,ಗುಬ್ಬಿ ಬೈಪಾಸ್ ರಸ್ತೆಯಲ್ಲಿ ಷೋರೂಮ್‍ಗಳಿದ್ದು, ರೈತರು ಖುದ್ದು, ವಾಲ್ಡೋ ಟ್ರಾಕ್ಟರನ ಕಾರ್ಯವನ್ನುಪರಿಶೀಲಿಸಿ,ಬೇರೆ ಕಂಪನಿಗಳ ಟ್ರಾಕ್ಟರ್‍ಗಳಿಗೆ ಹೊಲಿಕೆ ಮಾಡಿ, ನಮ್ಮ ವಾಲ್ಡೋ ಟ್ರಾಕ್ಟರ್ ಖರೀದಿ ಮಾಡಬಹುದಾಗಿದೆ ಎಂದು ವಾಲ್ಡೋ ಟ್ರಾಕ್ಟರ್‍ನ ಮಾಲೀಕರಾದ ವುಬುದುಲ್ಲಾ ಷರೀಫ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೋಲ್ಡಾ ಟ್ರಾಕ್ಟರ್‍ನ ಕಂಪನಿ ನಿರ್ದೇಶಕರಾದ ಮನ್ಸೂರ್ ಅಹಮದ್, ಮೆಕಾನಿಕಲ್ ಇಂಜಿನಿಯರ್ ಆಲಿ, ಮುಸಾಪರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.