ಹಿರಿಯ ಸಾಹಿತಿ, ಕವಿ, ಹೆಚ್.ಎಸ್.ವೆಂಕಟೇಶಮೂರ್ತಿ ನಿಧನ

ಕಿರಿಕ್ ಪಾರ್ಟಿ, ಅಮೆರಿಕಾ ಅಮೆರಿಕಾ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಕನ್ನಡದ ಖ್ಯಾತ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ(81) ನಿಧನರಾಗಿದ್ದಾರೆ.

ಎಚ್.ಎಸ್. ವೆಂಕಟೇಶಮೂರ್ತಿ (ಎಚ್ಎಸ್ವಿ ) ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಮತ್ತು ಪ್ರಾಧ್ಯಾಪಕರಾಗಿ ದುಡಿದಿದ್ದಾರೆ.
2019 ಡಿಸೆಂಬರ್ ನಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಹಬ್ಬದ ಅಧ್ಯಕ್ಷತೆಯನ್ನು ಎಚ್.ಎಸ್. ವೆಂಕಟೇಶ್ ಮೂರ್ತಿ ವಹಿಸಿದ್ದರು.

ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಮೊದಲಾದ ಪ್ರಕಾರಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

ಪರಿಚಯ:

1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ್ದರು. ಬಾಲ್ಯದ ಹೆಸರು ಶ್ರೀನಿವಾಸ ಎಂಬುದಾಗಿತ್ತು. ತಂದೆ ನಾರಾಯಣ ಭಟ್, ತಾಯಿ ನಾಗರತ್ನಮ್ಮ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.

ನರಸಿಂಹ ಶಾಸ್ತ್ರಿಗಳು ವೆಂಕಟೇಶಮೂರ್ತಿಯವರಿಗೆ ಕುವೆಂಪು, ಬೇಂದ್ರೆ, ಗೊರೂರು, ಮಾಸ್ತಿ, ಕಾರಂತ ಮೊದಲಾದವರ ಕೃತಿಗಳನ್ನು ಪರಿಚಯಿಸಿದ್ದರು. ಹೀಗೆ ತಮ್ಮ ಚಿಂತನಾ ಕ್ರಮ ಬದಲಾಯಿಸಿಕೊಂಡ ಎಚ್ ಎಸ್ ಹೊಸ ಸಾಹಿತ್ಯ ಪ್ರಪಂಚಕ್ಕೆ ಪ್ರವೇಶಿಸಿದ್ದರು.

ಎಚ್ ಎಸ್ ತಮ್ಮ ಮೊದಲ ಕವನ ಸಂಕಲನ “ಪರಿವೃತ್ತ”ವನ್ನು ನರಸಿಂಹ ಶಾಸ್ತ್ರಿಗಳಿಗೆ ಅರ್ಪಿಸಿದ್ದಾರೆ. ಹೀಗೆ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರು ಎಚ್ ಎಸ್ ಅವರನ್ನು ಗಮನಿಸಿದ್ದ ನಂತರ ಅವರ ಒಡನಾಟ, ಪೆÇ್ರೀತ್ಸಾಹ ಮೂರ್ತಿಯವರಲ್ಲಿ ಹೊಸ ವಿಶ್ವಾಸ ಮೂಡಿಸಿತ್ತು. ನಿಸಾರ್ ತಮ್ಮ ಮೊದಲ ಕಾವ್ಯ ಗುರು ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ.

ಮೂರ್ತಿಯವರು ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ಬಹುಬೇಗ ಜನಪ್ರಿಯರಾದರು. ಇಲ್ಲಿಯೇ ಅವರ ಸಾಹಿತ್ಯದ ಓದಿಗೂ, ರಚನೆಗೂ ಉತ್ತಮ ಪರಿಸರವಿತ್ತು. ಹಿರಿಯ ಅಧ್ಯಾಪಕರಾಗಿದ್ದ ಜಿಎಲ್ ರಾಮಪ್ಪನವರು ಕಥೆಗಾರ ಎನ್.ಎಸ್ ಚಿದಂಬರ ರಾವ್ ಅವರೂ ಗಂಭೀರ ಸಾಹಿತ್ಯ ಚರ್ಚೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಷ್ಟು ಅಧ್ಯಯನ ಶೀಲರಾಗಿದ್ದರು.

ಎಚ್ ಎಸ್ ವಿ ರಚಿಸುತ್ತಿದ್ದ ಕವನಗಳನ್ನು ಓದಿ ಅಧ್ಯಾಪಕರು ಪೆÇ್ರೀತ್ಸಾಹಿಸುತ್ತಿದ್ದರು. ತಾಯಿಯ ತವರು ಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ ಎಂಬುದು ಎಚ್ ಎಸ್ ನೆನಪಿಸಿಕೊಂಡಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಪದವಿ, ಬೆಂಗಳೂರು ವಿವಿಯಿಂದ ಎಂಎ ಪದವಿ ಪಡೆದಿರುವ ಎಚ್ ಎಸ್ ವೆಂಕಟೇಶಮೂರ್ತಿಯವರು ಕನ್ನಡದಲ್ಲಿ ಕಥನ ಕವನಗಳು ಮಹಾಪ್ರಬಂಧ ಮಂಡಿಸಿ, ಪಿಎಚ್ ಡಿ ಪಡೆದಿದ್ದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.

ಬಿಡುವಿಲ್ಲದ ಬರವಣಿಗೆಯ ನಡುವೆಯೂ ಚಲನಚಿತ್ರ ಮತ್ತು ರಂಗಭೂಮಿ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ಎಚ್.ಎಚ್ ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು, ಕ್ರೌರ್ಯ, ಕೊಟ್ಟ, ಮತದಾನ ಸಿನಿಮಾಗಳಿಗೆ ಹಾಡುಗಳ ರಚನೆ, ಕೆಲವಕ್ಕೆ ಸಂಭಾಷಣೆ, ದೂರದರ್ಶನ ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಕ್ಕೆ ಶೀರ್ಷಿಕೆ ಗೀತೆ ಬರೆದಿದ್ದರು. ಅನಂತ ನಮನ, ತೂಗು ಮಂಚ, ಸುಳಿಮಿಂಚು, ಅಪೂರ್ವ ರತ್ನ, ಭಾವಭೃಂಗ-ಭಾವಗೀತೆಗಳ ಧ್ವನಿಸುರುಳಿಗಳು.

Leave a Reply

Your email address will not be published. Required fields are marked *