Raging ಮುಕ್ತ ವಿಶ್ವವಿದ್ಯಾನಿಲಯಗಳಿಗೆ ಕುಲಪತಿ ಕರೆ

ತುಮಕೂರು: ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವ, ವಿದ್ಯಾರ್ಥಿಗಳಿಗೆ ಸುರಕ್ಷತೆಯ ಪರಿಸರವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿರುವ ವಿಶ್ವವಿದ್ಯಾನಿಲಯಗಳು Raging, ತಂಬಾಕು, ಡ್ರಗ್ಸ್ ಮುಕ್ತ ಆವರಣಗಳಾಗಬೇಕು ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ Raging ವಿರೋಧಿ ಕೋಶವು ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ Raging ವಿರೋಧಿ ದಿನ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

Raging ಶಿಕ್ಷಾರ್ಹ ಅಪರಾಧವೆಂದು ಭಾರತ ಸರ್ವೋಚ್ಚ ನ್ಯಾಯಲಯವು ಪರಿಗಣಿಸಿದ ನಂತರ 2011ರಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಭಾರತದ ವಿಶ್ವವಿದ್ಯಾನಿಲಯಗಳಿಗೆ ಅನ್ವಯಿಸಿ ರ್ಯಾಗಿಂಗ್ ವಿರೋಧಿ ಕಾಯಿದೆಯನ್ನು ಜಾರಿಗೊಳಿಸಿತು ಎಂದು ತಿಳಿಸಿದರು.

ನಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಾಮಾಜಿಕ ಕಾರ್ಯ ವಿಭಾಗದ ಡಾ. ಜನಾರ್ದನ ಎನ್. ಮಾತನಾಡಿ, ಪ್ರಸ್ತುತ ಪೀಳಿಗೆಯು ಬಹಳ ಸಂರಕ್ಷಿತ ಮತ್ತು ಸೂಕ್ಷ್ಮವಾಗಿದೆ. Raging ಆರೋಗ್ಯಕರವಾಗಿರಬೇಕು, ಹಾಸ್ಯಮಯವಾಗಿರಬೇಕು ಮತ್ತು ಸಂಬಂಧವನ್ನು ನಿರ್ಮಿಸಬೇಕು. ಅಂತವ್ರ್ಯಕ್ತೀಯ ಕೌಶಲ್ಯಗಳನ್ನು ನಿರ್ಮಿಸಬೇಕು. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ Raging ಹೆಚ್ಚು ಕಾಣಬಹುದು. Raging ಆಘಾತದಿಂದ ಚೇತರಿಸಿಕೊಳ್ಳಲು ಸಾಮಾಜಿಕ ಬೆಂಬಲ ಬಹಳ ಅವಶ್ಯಕ ಎಂದು ತಿಳಿಸಿದರು.

ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಅಮನ್ Raging ಮೊಕದ್ದಮೆಯ ತಪ್ಪಿತಸ್ತ ಹಿರಿಯ ವಿದ್ಯಾರ್ಥಿಗಳಿಗೆ 2010ರಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜಾತಿ, ಧರ್ಮ, ಸಾಮಾಜಿಕ-ಆರ್ಥಿಕ ಹಿನ್ನೆಲೆ ಕುರಿತು ಅಸಭ್ಯವಾಗಿ ಹೀಯಾಳಿಸುವುದು, ವರ್ಣಭೇದ ಮಾಡುವುದು, ಬಾಡಿ ಶೇಮಿಂಗ್, ಟ್ರೋಲ್ ಮಾಡುವ ವಿಕೃತ ಮನಸ್ಥಿತಿಯ ಕೃತ್ಯಗಳು ಶಿಕ್ಷಾರ್ಹ ಅಪರಾಧ ಎಂದರು.

ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ. ಮಾತನಾಡಿ, ಯುಜಿಸಿಗೆ ಪ್ರತಿ ವರ್ಷ ಸುಮಾರು 1200 ಪ್ರಕರಣಗಳು Raging ವಿರುದ್ಧ ವರದಿಯಾಗುತ್ತವೆ. ರ್ಯಾಗಿಂಗ್ ಪರಿಣಾಮ ಸಾವು, ಮಾನಸಿಕವಾಗಿ ತೊಂದರೆ, ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರು.

ತುಮಕೂರು ವಿವಿಯ ರ್ಯಾಗಿಂಗ್ ವಿರೋಧಿ ಕೋಶದ ಸಂಯೋಜಕಿ ಡಾ. ಜ್ಯೋತಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *