ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ ಸುಬ್ಬಾರೆಡ್ಡಿ ಆಯ್ಕೆ

ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷರಾಗಿ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಸತತ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ವಿವೇಕ್‌ 6,820 ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

4,518 ಮತ ಪಡೆಯುವ ಮೂಲಕ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಅವರು ವಿವೇಕ್‌ಗೆ ತೀವ್ರ ಪೈಪೋಟಿ ನೀಡಿದ್ದರು.

ಉಳಿದಂತೆ ಆರ್‌ ರಾಜಣ್ಣ ಅವರು 1,473 ಮತ ಪಡೆದಿದ್ದು, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಕೇವಲ 378 ಮತ ಪಡೆದಿದ್ದಾರೆ. 123 ಮತ ಪಡೆದಿರುವ ನಂಜಪ್ಪ ಕಾಳೇಗೌಡ ಮತ್ತು 90 ಮತ ಪಡೆದಿರುವ ಟಿ ಎ ರಾಜಶೇಖರ್‌ ಸ್ಪರ್ಧೆ ಔಪಚಾರಿಕವಾಗಿತ್ತು.

ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ವಿವೇಕ್‌ ಸುಬ್ಬಾರೆಡ್ಡಿ ಅವರು ಅಂತಿಮವಾಗಿ ಗೆಲುವಿನ ನಗೆ ಬೀರಿದ್ದಾರೆ.

Leave a Reply

Your email address will not be published. Required fields are marked *