ತುರುವೇಕೆರೆ- ಮುಂಬೈ ಜಿಯೋ ವರ್ಡ್ ಸೆಂಟರ್‍ನಲ್ಲಿ ನಡೆದ ವೇವ್ಸ್-2025 ವಿಶ್ವ ಆಡಿಯೋ ವಿಶುವಲ್ ಮತ್ತು ಮನರಂಜನ ಶೃಂಗಸಭೆಗೆ ಆಯ್ಕೆಯಾದ ತುರುವೇಕೆರೆ ತಾಲ್ಲೂಕಿನ ಅಬಲಕಟ್ಟೆ ಗ್ರಾಮದ ಎಂ.ಟಿ ಭವ್ಯ ಬಸವರಾಜು ಅವರು ಡೋನ್ ಕಂಟೆಂಟ್ ಕ್ರಿಯೇಟರ್‍ಗಳ ವಿಭಾಗದಲ್ಲಿ ಭಾರತದಿಂದ ಭಾಗವಹಿಸಿ 2ನೇ ಸ್ಥಾನ ಪಡೆದಿದ್ದಾರೆ.
ವೇವ್ಸ್-2025 ಮನರಂಜನ ಕಾರ್ಯಕ್ರಮದಲ್ಲಿ ಪ್ರಮುಖ ತಾರೆಯರು ಜಗತ್ತಿನ ಜಾಗತಿಕ ನಾಯಕರು ಭಾಗಿಯಾಗಿದ್ದು, ನಾಲ್ಕು ದಿನಗಳ ಈ ಕಾರ್ಯಕ್ರಮಗಳಲ್ಲಿ ಮನರಂಜನಾ ಉದ್ಯಮದ ಇತರ ಅನೇಕ ಪ್ರಭಾವಿ ವ್ಯಕ್ತಿಗಳೊಂದಿಗೆ ಚಲನಚಿತ್ರ ಮತ್ತು ಡಿಜಿಟಲ್ ವಿಷಯದ ಭವಿಷ್ಯದ ಕುರಿತು ಪ್ರಮುಖ ಚರ್ಚೆಗಳು ನಡೆದವು.
2029 ರ ವೇಳೆಗೆ 50 ದಶಕೋಟಿ ಡಾಲರ್ ಮೌಲ್ಯದ ಮಾರುಕಟ್ಟೆಯನ್ನು ತೆರೆಯುವ ಗುರಿಯನ್ನು ಹೊಂದಿರುವ ಈ ಶೃಂಗ ಸಭೆಯು ಜಾಗತಿಕ ಮನರಂಜನಾ ಆರ್ಥಿಕತೆಯಲ್ಲಿ ಭಾರತದ ಹೆಜ್ಜೆ ಗುರುತನ್ನು ವಿಸ್ತರಿಸುವ ಗುರಿ ಹೊಂದಿದೆ.
ಈ ಶೃಂಗಸಭೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ನನಗೆ ತುಂಬಾ ಖುಷಿ ತಂದಿದೆ. ಇದಕ್ಕೆ ಸಹಕರಿಸಿದ ಪೆÇೀಷಕರು ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಭವ್ಯ ಬಸವರಾಜು ಹೇಳಿದ್ದಾರೆ.