ತುಮಕೂರು: ಕನ್ನಡ ನಾಡಿಗಾಗಿ ಹಾಗೂ ಕನ್ನಡ ನಾಡಿನ ಏಕೀಕರಣಕ್ಕಾಗಿ ದುಡಿದಿರುವವರನ್ನು, ತನು ಮನ ಧನವನ್ನು ತ್ಯಾಗ ಮಾಡಿದವರನ್ನು ನಾವು ಈ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ನೆನೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ. ಸಿದ್ದಲಿಂಗಯ್ಯ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರದಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು, ಕನ್ನಡ ನಾಡು ಸ್ವಾತಂತ್ರ ನಂತರ ಹರಿದು ಹಂಚಿಹೋಗಿದ್ದ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳ ಜೊತೆ ಕನ್ನಡ ನಾಡಿನ ಭೂಪ್ರದೇಶಗಳು ಸೇರಿ ಅನ್ಯ ಭಾಷೆಗಳ ಪ್ರಭಾವದಿಂದ ನಲುಗುತ್ತಿದ್ದಂತಹ ವೇಳೆ ಸಾವಿರಾರು ನಾಡ ಪ್ರೇಮಿಗಳು ಕನ್ನಡ ಭೂಪ್ರದೇಶಗಳ ಏಕೀಕರಣಕ್ಕೆ ದುಡಿದಿದ್ದಾರೆ. ಇಂತಹ ಹೋರಾಟಗಾರರನ್ನು ನಾವು ನೆನೆಪಿಸಿಕೊಳ್ಳಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡಲು ನಮ್ಮ ಕನ್ನಡಿಗರು ಕೀಳರಿಮೆಯನ್ನು ಹೊಂದಿದ್ದಾರೆ. ಇದನ್ನು ಮೊದಲು ಹೋಗಲಾಡಿಸಬೇಕು. ಕನ್ನಡ ಅನ್ನ ಕೊಡವ ಭಾಷೆ. ಈ ಭಾಷೆಯನ್ನು ಪ್ರತಿಯೊಬ್ಬ ಕನ್ನಡಿಗನೂ ಗೌರವಿಸಬೇಕು. ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ಮೊದಲ ಆದ್ಯತೆ ಮಾತ್ರ ಕನ್ನಡ ಭಾಷೆಗೆ ಇರಬೇಕ. ಆಗ ಮಾತ್ರ ಕನ್ನಡ ಭಾಷೆ ಉಳಿದು-ಬೆಳೆಯುತ್ತದೆ. ನಾಡು ನುಡಿ ನೆಲ ಜಲಗಳಿಗೆ ಗೌರವಿಸಬೇಕು. ಕನ್ನಡ ಪರಿಸರವನ್ನು ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತು ಹೇಳಿದರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ನಂಜುಡಪ್ಪನವರು ಮಾತನಾ, ಜಗತ್ತಿನ ಆರು ಸಾವಿರ ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆ 27ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ಕನ್ನಡಿಗರದ ನಾವೆಲ್ಲರೂ ಇದಕ್ಕಾಗಿ ಗರ್ವಪಡಬೇಕು ಹಾಗೂ ಸಂವಿಧಾನದಲ್ಲಿ 8ನೇ ಅಧಿಸೂಚನೆಯಲ್ಲಿ 22 ಭಾರತೀಯ ಭಾಷೆಗಳನ್ನು ಧಾಖಲಿಸಿದ್ದಾರೆ. ಇದರಲ್ಲಿ ಕನ್ನಡವೂ ಸಹ ಒಂದು. 22 ಭಾಷೆಗಲ್ಲಿ ನಮ್ಮ ಭಾಷೆಗೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯು ದೊರೆತಿದೆ. ಜಗತ್ತಿನ ಭಾಷೆಗಳಲ್ಲಿ ಲೋಪವಿಲ್ಲದೆ ಉಚ್ಚರಿಸಿದಂತೆ ಬರೆಯುವ ಬರೆದಂತೆ ಉಚ್ಚರಿಸುವ ಜಗತ್ತಿನ ಮೊಟ್ಟಮೊದಲ ಭಾಷೆ ಕನ್ನಡವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಗೌರವಿಸಿ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಎಸ್‍ಎಸ್‍ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿಪ್ರಕಾಶ್ ಮಾತನಾಡಿ ಕನ್ನಡವನ್ನು ಕಲಿಸೋಣ ಕನ್ನಡವನ್ನು ಬೆಳೆಸೋಣ. ಕನ್ನಡ ಸಾಹಿತ್ಯವನ್ನು ಓದೋಣ ಕನ್ನಡ ಪರಿಸರವನ್ನ ಬೆಳೆಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಕ್ ಡೀನ್ ರೇಣುಕಾಲತಾ, ರಾಜ್ಯೋತ್ಸವ ಆಚರಣಾ ಸಮಿತಿಯ ಸಂಯೋಜಕರಾದ ಡಾ.ಪ್ರದೀಪ್, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಸಂಘಟನೆಯ ಪಧಾದಿಕಾರಿಗಳು ಹಾಜರಿದ್ದರು.