ಹೃದಯ ಕಲಕಿದ ಅಪ್ಪು ಹಾಡು- ಬಿಕ್ಕಿ ಬಿಕ್ಕಿ ಅತ್ತ ಮಹಿಳೆ-ಮಳೆ

ತುಮಕೂರು : ಆ ಹಾಡು ಪ್ರಾರಂಭವಾದ ಕೂಡಲೇ ಆಕಾಶದಲ್ಲಿ ಮೋಡ ಮುಸುಕಿತು, ಇಡೀ ಜನಸ್ತೋಮ ಎದ್ದು ನಕ್ಷತ್ರಗಳನ್ನು ಸೃಷ್ಠಿಸಿ ಹೃದಯದ ನೋವನ್ನು ಕಣ್ಣೀರು ಸುರಿಸುವ ಮೂಲಕ ಪ್ರೀತಿಯ ಅಪ್ಪುಗೆಯನ್ನು ಆ ಹಾಡಿಗೆ ಅಪ್ಪಿಕೊಳ್ಳಲಾಯಿತು.

ಅದೇ ನಮ್ಮೊಂದಿಗಿರದ ಜೀವ ಎಂದೆಂದೂ ಬದುಕಿರುತ್ತದೆ ಎಂಬುದಕ್ಕೆ ಅಲ್ಲಿ ಆ ಹಾಡಿಗೆ ಜನ-ಮೋಡ ಸುರಿಸಿದ ಕಣ್ಣೀರೆ ಸಾಕ್ಷಿ.

ಅಕ್ಟೋಬರ್ 11ರಂದು ನಡೆದ ತುಮಕೂರು ದಸರಾದ ರಸಸಂಜೆ ಕಾರ್ಯಕ್ರಮದಲ್ಲಿ ಕಂಬದರಂಗಯ್ಯ ಅವರು ಅಪ್ಪುವಿನ ಹಾಡನ್ನು ಹಾಡು ಪ್ರಾರಂಭಿಸಿದ ಕೂಡಲೇ ಇಡೀ ಜೂನಿಯರ್ ಕಾಲೇಜು ಮೈದಾದಲ್ಲಿ ಸೇರಿದ್ದ ಹತ್ತು ಸಾವಿರಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್ ಮೂಲಕ ಲೈಟ್ ಆನ್ ಮಾಡುವ ಮೂಲಕ ನಕ್ಷತ್ರಗಳನ್ನು ಸೃಷ್ಠಸಿ ಒಂದು ಸ್ವರ್ಗ ಲೋಕವನ್ನೇ ಸೃಷ್ಠಿ ಮಾಡಿದರೆ ಅಪ್ಪು ಹಾಡನ್ನು ಹೃದಯ ತುಂಬಿಕೊಂಡು ಹಾಡಿದರೆ, ಕೆಲ ಯುವಕರು, ಮಹಿಳೆಯರು ಅಪ್ಪು ಭಾವಚಿತ್ರ ತೆರೆಯ ಮೇಲೆ ಮೂಡಿದ ಕೂಡಲೇ ಬಿಕ್ಕಿ ಬಿಕ್ಕಿ ಅತ್ತರು.

ಪತ್ರಕರ್ತರ ಗ್ಯಾಲರಿಯಲ್ಲಿದ್ದ ಮಹಿಳೆಯೊಬ್ಬರು ಮೊಬೈಲ್ ಲೈಟ್ ಆನ್ ಮಾಡಿ ಕೈ ಬೀಸುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದದ್ದು ಮನ ಕಲಿಕಿತು.

ಸಂತೋಷದ ಅಲೆಯಲ್ಲಿ ತೇಲುತ್ತಿದ್ದ ಸಂಗೀತ ರಸಸಂಜೆ ಕ್ಷಣಮಾತ್ರದಲ್ಲಿ ಅಪ್ಪುವಿಗಾಗಿ ಕಣ್ಣೀರು ಸುರಿಸಿದ್ದನ್ನು ಕಂಡರೆ, ಅಪ್ಪು ಎಂಬ ಪುನೀತ್ ರಾಜಕುಮಾರ್ ಎಂಬ ಒಬ್ಬ ಈ ಕರ್ನಾಟಕದಲ್ಲಿ ತನ್ನ ಛಾಪನ್ನು ಮೂಡುಸಿ ಕಣ್ಮರೆಯಾದರೂ ಆತನನ್ನು ಪ್ರೀತಿಸುತ್ತಿರುವುದಕ್ಕೆ ನಾನಾ ಕಾರಣಗಳಿವೆ.

ಅಪ್ಪು ಹಾಡು ಮುಗಿಯುವ ಹಂತಕ್ಕೆ ಮೋಡಗಳೂ ಸಹ ಮಳೆಯ ಸಿಂಚನ ಮಾಡಿದ್ದನ್ನು ಕಂಡರೆ ಅಪ್ಪು ಸಾವನ್ನು ಪ್ರಕೃತಿಯು ಒಪ್ಪಿಲ್ಲ, ಆತನಿಗಾಗಿ ಮೋಡಗಳೂ ಕಣ್ಣೀರು ಸುರಿಸಿದ್ದು ವಿಸ್ಮಯ. ಅಪ್ಪು ಎಂಬ ಧೃವತಾರೆ ಈಗ ಇಲ್ಲದಿರಬಹುದು, ಆದರೆ ಅಲ್ಲಿ ನೆರೆದಿದ್ದ ಸಾವಿರಾರು ಜನ ಅಪ್ಪುಗಾಗಿ ತಾರೆಗಳನ್ನು ಸೃಷ್ಠಿಸಿ ಮನ ಮಿಡಿದದ್ದು ಇದೆಯಲ್ಲ ಅದನ್ನು ಯಾವ ಮಾತುಗಳಲ್ಲಿ ವರ್ಣಿಸಲು ಸಾಧ್ಯ.

ಅಷ್ಟೆಲ್ಲಾ ಹಾಡುಗಳನ್ನು ಹಾಡಿದರು ಬಾರದ ಮಳೆ ಅಪ್ಪು ಹಾಡು ಆಡುವಾಗಲೇ ಜೂನಿಯರ್ ಕಾಲೇಜಿಗೆ ಸೀಮಿತವಾಗಿ ಮಳೆ ಬಂದಿದ್ದು, ಅಪ್ಪುವಿಗಾಗಿ ಮೋಡಗಳು ಕಣ್ಣೀರು ಸುರಿಸಿದವು ಎಂದು ಸಂಗೀತ ರಸಸಂಜೆ ಮುಗಿಸಿಕೊಂಡು ಬರುತ್ತಿದ್ದ ಜನರ ಮಾತುಗಳಾಗಿದ್ದವು.

ಕಾರ್ಯಕ್ರಮವನ್ನು ಡಾ.ಶಿವರಾಜಕುಮಾರ್ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಜೊತೆಗೂಡಿ ಉದ್ಘಾಟಿಸಿ, ನಮ್ಮ ತಂದೆಯವರಿಗೆ ತುಮಕೂರು ಎಂದರೆ ತುಂಬಾ ಪ್ರೀತಿ, ಅವರು ತುಮಕೂರಿಗೆ ಬಂದಾಗಲೆಲ್ಲಾ ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದು, ನಮ್ಮ ತಂದೆಯವರಿಗೆ ಬಣ್ಣದ ಬದುಕು ಕೊಟ್ಟ ತವರೂರು, ತಿಪಟೂರಿನಲ್ಲಿ ನಮ್ಮ ತಂದೆಯವರ ಗೆಳೆಯರಿದ್ದರು, ನಾನು ಬಂದರೂ ತುಮಕೂರು ಇಡ್ಲಿಯನ್ನು ಸವಿದೇ ಹೋಗುವುದು, ನಮ್ಮ ಚಿತ್ರಗಳು ಬಿಡುಗಡೆಯಾದರೆ ಮೊದಲು ನೋಡುವುದೇ ತುಮಕೂರಿನ ಜನ ಎಂದು ಹೇಳಿದರು.

ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ಅವರು ನಮಗೆ ತುಂಬಾ ಪ್ರೀತಿ ಪಾತ್ರರು ಅವರು ಕರೆದ ಮೇಲೆ ಬಾರದಿರಲು ಆಗುತ್ತದೆಯೇ, ಅದೂ ತುಮಕೂರು ಎಂದರೆ ಬರಲೇ ಬೇಕು, ಮೊದಲ ಬಾರಿಗೆ ದಸರಾ ಉತ್ಸವವನ್ನು ಚೆಂದವಾಗಿ, ಅಂದವಾಗಿ ಆಚರಿಸುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.

ಹಾಡುಗಾರ ಗುರುಕಿರಣ್ ಅವರು ತಮ್ಮ ಹಾಡಿನ ಮಧ್ಯೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಇನ್ನೂ ಹೆಚ್ಚಿನ ಉನ್ನತ ಸ್ಥಾನ ದೊರಯಲಿ ಎಂದು ಆಶಿಸಿದರು.

ಗುರುಕಿರಣ್, ಕಂಬದರಂಗಯ್ಯ ಮತ್ತು ತಂಡ ರಸಸಂಜೆ ಕಾರ್ಯಕ್ರಮವನ್ನು ಒಂದು ರಸವತ್ತಾದ ಕಾರ್ಯಕ್ರಮವನ್ನಾಗಿ ನಡೆಸಿಕೊಟ್ಟಿದ್ದು ತುಮಕೂರು ಜನರಿಗೆ ಮರೆಯಲಾಗದ ಕ್ಷಣವಾಯಿತು.

Leave a Reply

Your email address will not be published. Required fields are marked *