ಗೆದ್ದ ಅಭ್ಯರ್ಥಿಗಳ ಗೆಲುವಿನ ಅಂತರ ಎಷ್ಟು

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ : ಜನತಾ ದಳ ಜಾತ್ಯಾತೀತ ಪಕ್ಷದ ಸಿ.ಬಿ. ಸುರೇಶ್ ಬಾಬು ಅವರು 71036 ಮತಗಳನ್ನು ಪಡೆದು, ಬಿಜೆಪಿಯ ಜೆ.ಸಿ.ಮಾಧುಸ್ವಾಮಿ-(60994) ವಿರುದ್ಧ 10,042 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.ಕಾಂಗ್ರೆಸ್ ಪಕ್ಷದ ಕೆ.ಎಸ್. ಕಿರಣ್ ಕುಮಾರ್ ಇವರು 50996 ಮತ ಪಡೆದಿರುತ್ತಾರೆ.

ತಿಪಟೂರು ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ. ಷಡಾಕ್ಷರಿ ಅವರು 71999 ಮತಗಳನ್ನು ಪಡೆದು, ಭಾರತೀಯ ಜನತಾ ಪಕ್ಷದ ಬಿ.ಸಿ. ನಾಗೇಶ್-(54347)ವಿರುದ್ಧ 17,652 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಜನತಾದಳ(ಜಾತ್ಯತೀತ) ಪಕ್ಷದ ಕೆ.ಟಿ. ಶಾಂತಕುಮಾರ್-26014 ಮತಗಳನ್ನು ಪಡೆದಿದ್ದಾರೆ.

ತುರುವೇಕೆರೆ ವಿಧಾನಸಭಾ ಕ್ಷೇತ್ರ: ಜನತಾದಳ(ಜಾತ್ಯತೀತ) ಪಕ್ಷದ ಎಂ.ಟಿ.ಕೃಷ್ಣಪ್ಪ ಅವರು 68163 ಮತಗಳನ್ನು ಪಡೆದು, ಭಾರತೀಯ ಜನತಾ ಪಕ್ಷದ ಮಸಾಲ ಜಯರಾಮ್-(58240)ವಿರುದ್ಧ 9923 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಮಲ್ ಕಾಂತರಾಜ್ ಅವರು 30536 ಮತ ಪಡೆದಿರುತ್ತಾರೆ.

ಕುಣಿಗಲ್ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಂಗನಾಥ್ ಹೆಚ್.ಡಿ. ಅವರು 74724 ಮತಗಳನ್ನು ಪಡೆದು ಭಾರತೀಯ ಜನತಾ ಪಕ್ಷದ ಡಿ.ಕೃಷ್ಣಕುಮಾರ್ (48151) ವಿರುದ್ಧ 26,572 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಜನತಾದಳ(ಜಾತ್ಯತೀತ) ಪಕ್ಷದ ಡಾ: ರವಿ ನಾಗರಾಜಯ್ಯ ಅವರು 46974 ಮತಗಳನ್ನು ಪಡೆದಿದ್ದಾರೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಭಾರತೀಯ ಜನತಾ ಪಕ್ಷದ ಜಿ.ಬಿ.ಜ್ಯೋತಿಗಣೇಶ್ ಅವರು 59165 ಮತಗಳನ್ನು ಪಡೆದು ಜನತಾದಳ(ಜಾತ್ಯತೀತ) ಪಕ್ಷದ ಎನ್. ಗೋವಿಂದರಾಜು(55967) ವಿರುದ್ಧ 3198 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇಕ್ಬಾಲ್ ಅಹ್ಮದ್-46900 ಮತಗಳನ್ನು ಮತ್ತು ಸೊಗಡು ಶಿವಣ್ಣ-8954ಮತಗಳನ್ನು ಪಡೆದಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ : ಭಾರತೀಯ ಜನತಾ ಪಕ್ಷದ ಬಿ.ಸುರೇಶ್ ಗೌಡ ಅವರು 89191 ಮತಗಳನ್ನು ಪಡೆದು ಜನತಾದಳ(ಜಾತ್ಯತೀತ) ಪಕ್ಷದ ಡಿ.ಸಿ.ಗೌರಿಶಂಕರ್ (84597) ಅವರ ವಿರುದ್ಧ 4594 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿ.ಎಚ್.ಷಣ್ಮುಖಪ್ಪ ಅವರು 4066 ಮತ ಪಡೆದಿರುತ್ತಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ: ಜಿ.ಪರಮೇಶ್ವರ ಅವರು 79099 ಮತಗಳನ್ನು ಪಡೆದು ಜನತಾದಳ(ಜಾತ್ಯಾತೀತ) ಪಕ್ಷದ ಪಿ.ಆರ್.ಸುಧಾಕರ್‍ಲಾಲ್(64752) ವಿರುದ್ಧ 14,347ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ., ಭಾರತೀಯ ಜನತಾ ಪಕ್ಷದ ಬಿ.ಹೆಚ್. ಅನಿಲ್ ಕುಮಾರ್-24091 ಮತಗಳನ್ನು ಪಡೆದಿದ್ದಾರೆ.

ಗುಬ್ಬಿ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಸ್.ಆರ್.ಶ್ರೀನಿವಾಸ್ ಅವರು 60520 ಮತಗಳನ್ನು ಪಡೆದು ಭಾರತೀಯ ಜನತಾ ಪಕ್ಷದ ಎಸ್.ಡಿ.ದಿಲೀಪ್ ಕುಮಾರ್ (51979) ಅವರ ವಿರುದ್ಧ 8,541 ಮತಗಳ ಅಂತರದಿಂದ ಜಯಶೀಲರಾಗಿರುತ್ತಾರೆ. ಜೆಡಿಎಸ್ ಪಕ್ಷದ ನಾಗರಾಜು ಬಿ.ಎಸ್.-43046 ಮತ ಪಡೆದಿರುತ್ತಾರೆ.

ಶಿರಾ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ ಅವರು 86084 ಮತಗಳನ್ನು ಪಡೆದು ಜನತಾದಳ(ಜಾತ್ಯಾತೀತ) ಪಕ್ಷದ ಆರ್.ಉಗ್ರೇಶ್(56834) ವಿರುದ್ಧ 29,250 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಸಿ.ಎಂ.ರಾಜೇಶ್ ಗೌಡ-42329 ಮತಗಳನ್ನು ಪಡೆದಿರುತ್ತಾರೆ.

ಪಾವಗಡ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ವಿ.ವೆಂಕಟೇಶ್ ಅವರು 83062 ಮತಗಳನ್ನು ಪಡೆದು ಜನತಾದಳ(ಜಾತ್ಯಾತೀತ) ಪಕ್ಷದ ಕೆ.ಎಂ.ತಿಮ್ಮರಾಯಪ್ಪ(72181) ಅವರ ವಿರುದ್ಧ 10,881 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಕೃಷ್ಣನಾಯಕ್-7206 ಮತಗಳನ್ನು ಪಡೆದಿದ್ದಾರೆ.

ಮಧುಗಿರಿ ವಿಧಾನಸಭಾ ಕ್ಷೇತ್ರ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ
ಕೆ ಎನ್.ರಾಜಣ್ಣ ಅವರು 91166 ಮತಗಳನ್ನು ಪಡೆದು ಜನತಾದಳ(ಜಾತ್ಯಾತೀತ) ಪಕ್ಷದ ಎಂ.ವಿ.ವೀರಭದ್ರಯ್ಯ(55643) ಅವರ ವಿರುದ್ಧ 35,523 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜಯಶೀಲರಾಗಿರುತ್ತಾರೆ. ಭಾರತೀಯ ಜನತಾ ಪಕ್ಷದ ಎಲ್.ಸಿ.ನಾಗರಾಜ-15612 ಮತಗಳನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *