ತುಮಕೂರು : ಪರಿಶ್ರಮ ದಿವ್ಯಾಂಗ ಸ್ಪೋಟ್ರ್ಸ್ ಅಕಾಡೆಮಿ ವತಿಯಿಂದ ಡ್ರೀಮ್ ಫೌಂಡೇಶನ್ ಟ್ರಸ್ಟ್ ಮತ್ತು ಆಕ್ಸಿಜನ್ ಸ್ಪೋರ್ಟ್ ಕ್ಲಬ್ ಹಾಗೂ ನಿಧಿ ಟ್ರಸ್ಟ್ ನ ಸಹಕಾರದೊಂದಿಗೆ ತುಮಕೂರು ನಗರದ ಶ್ರೀ ಸಿದ್ದಗಂಗಾ ತಾಂತ್ರಿಕ ವಿಶ್ವವಿದ್ಯಾಲಯದ ಡಾ||ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸ್ಟೇಡಿಯಂನಲ್ಲಿ ಎರಡು ದಿನದ ವ್ಹೀಲ್ ಚೇರ್ ಕ್ರಿಕೆಟ್ ತರಬೇತಿಯನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಡಿ ಹೆಚ್ ಎಸ್ ಜಯಣ್ಣ, ಡೀನ್ ಅಕಾಡೆಮಿ ಯೋಗೀಶ್ ಡಿ ಎಸ್,ಫಿಸಿಕಲ್ ಎಜುಕೇಷನಲ್ ಡೈರೆಕ್ಟರ್ ಗೋಪಿನಾಥ್, ಪರಿಶ್ರಮ ದಿವ್ಯಂಗ ಸ್ಪೋಟ್ರ್ಸ್ ಅಕಾಡೆಮಿ ಅಧ್ಯಕ್ಷರು, ಮಾದೇಶ್ ಚಂದ್ರ, ಕರ್ನಾಟಕ ವ್ಹೀಲ್ ಚೇರ್ ರಗ್ಬಿ ಫೆಡೆರೇಷನ್ ಅಧ್ಯಕ್ಷರು, ಶ್ರೀಹರ್ಷ ವಿ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು, ಸುಮಧುರ ಫೌಂಡೇಶನ್,ಸಿಲ, ಕಾಶಿನಾಥ್ ಕುಮಾರ್ ಶೆಟ್ಟಿ ಪ್ರಖ್ಯಾತ ನಿರ್ಮಾಪಕರು, ಶಿವಕುಮಾರ್ ಗೌಡ್ರು ರೈತ ಸಂಘದ ಅಧ್ಯಕ್ಷರು, ವರ್ಷಿಣಿ ಯೂಟ್ಯೂಬರ್, ಮಂಜುನಾಥ್ ಪರಿಶ್ರಮ ದಿವ್ಯಂಗ ಸ್ಪೋಟ್ರ್ಸ್ ಅಕಾಡೆಮಿ ಸಂಸ್ಥಾಪಕರು ಮತ್ತು ವ್ಹೀಲ್ ಚೇರ್ ರೇಸ್ ನಲ್ಲಿ ಚಿನ್ನದ ಪದಕ ವಿಜೇತರು, ತಿಪ್ಪೇಸ್ವಾಮಿ ಇಂಡಿಯನ್ ವ್ಹೀಲ್ ಚೇರ್ ಕ್ರಿಕೆಟರ್. ಹಾಗೂ ತುಮಕೂರು ಪರಿಶ್ರಮ ದಿವ್ಯಾಂಗ್ ಸ್ಪೋಟ್ರ್ಸ್ ಅಕಾಡೆಮಿ ಅಧ್ಯಕ್ಷರಾದ ಚಾಂದ್ ಪಾಷ, ಉಪಾಧ್ಯಕ್ಷರಾದ ದೇವರಾಜು, ತಂಡದ ನಾಯಕರಾದ ಜಾಪೇಕ್ಸ್ ಉಪನಾಯಕ ಮುಜಾಹಿದ್ ಮತ್ತು ನಿರ್ದೇಶಕರಾದ ಸೈಯದ್ ಜಬಿಉಲ್ಲಾ, ಮಂಜುನಾಥ್, ಸೈಯದ್ ಅಜ್ಗರ್ ಪಾಷ(ಆದಿಲ್) ಈ ಕಾರ್ಯಕ್ರಮದಲ್ಲಿ ಭಾಗಿಯಾಗದ್ದರು…