ಆ ಸಿಂಹ ಘರ್ಜನೆಗೆ ಇಡೀ ಮೈಸೂರು ಪ್ರದೇಶ ಗಡ ಗಡ ನಡುಗುತ್ತದೆ, ಯಾರು ತಿಳಿಯರು ನನ್ನ ಭುಜ ಬಲದ ಪರಾಕ್ರಮ ಎಂದು 10ಪಥದ ರಸ್ತೆಯಲ್ಲಿ ಬಾಲ ಎತ್ತಿಕೊಂಡು ಓಡಾಡುತ್ತಿದ್ದ ಸಿಂಹವನ್ನು ಹಿಡಿದು ಬೋನಿಗೆ ಹಾಕಿ ಕೂಡಲಾಗಿದೆ ಎಂಬ ಮಾಹಿತಿ ಬರ ತೊಡಗಿದೆ.
ಮೈಸೂರು ಸಂಸದ ಪ್ರತಾಪ ಸಿಂಹ ಕಳೆದ ಹತ್ತು ವರ್ಷಗಳಿಂದ ತಾನು ಮಾಡಿದ ಕೆಲಸಗಳಿಗಿಂತ ವಿವಾದದ ಹೇಳಿಕೆಗಳಿಂದಲೇ ಹೆಸರು ಪಡೆದಿದ್ದರು, 10 ಪಥದ ಎಕ್ಸ್‍ಪ್ರೆಸ್ ಹೈವೇ ಕಳಪೆ ಕಾಮಗಾರಿಯಾಗಿದ್ದರು ಅದನ್ನು ಸಮರ್ಥಿಸಿಕೊಂಡು ಮಾತನಾಡಿದ್ದರಲ್ಲದೆ, ಹಲವಾರು ಸಲ ಕೇಂದ್ರ ಸರ್ಕಾರಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ನೀಡಿ ಇರಿಸುಮುರಿಸು ಮಾಡಿದ್ದರು.
ಅಲ್ಲದೆ ಜನ ಸಾಮಾನ್ಯರಿಗೆ ಸ್ಪಂದಿಸದೇ ಬರೀ ಪೇಪರ್ ಟೈಗರ್ ಆಗಿ ಬಿಂಬಿಸಿಕೊಂಡಿದ್ದರು, ಇದನ್ನೆಲ್ಲಾ ಗಮನಿಸುತ್ತಿದ್ದ ಕೇಂದ್ರದ ಗೃಹಸಚಿವ ಅಮಿತ್ ಶಾ ಅವರು ಪ್ರತಾಪ ಸಿಂಹನನ್ನು ದೊಡ್ಡ ಬೋನಿಗೆ ಕೂಡಿ ಬೀಗ ಜಡಿದಿದ್ದಾರೆ ಎನ್ನಲಾಗುತ್ತಿದೆ.
ಪ್ರತಾಪ ಸಿಂಹ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ಕಂಡಿದ್ದರಿಂದ ಪ್ರತಾಪ್ ಸಿಂಹರವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೂರವಿಟ್ಟದ್ದರು.
ಇಷ್ಟೇ ಅಲ್ಲದೆ ಬಿಜೆಪಿಯಲ್ಲಿ ಹೈಕಮಾಂಡ್ ಹೇಳಿದಂತೆ ಕೇಳಿದರೆ ಮಾತ್ರ ಟಿಕೆಟ್, ಬಾಲ ಬಿಚ್ಚಿದರೆ ಬಾಲ ಕಟ್ ಮಾಡಿ ಬೋನಿಗೆ ಕಳಿಸುವುದು ಗ್ಯಾರಂಟಿ, ಇಷ್ಟೆಲ್ಲಾ ಜೋರು ಜೋರಾಗಿ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ಪ್ರತಾಪ ಸಿಂಹ ಈಗ ಹೈಕಮಾಂಡ್ ಮುಂದೆ ಹೋಗಿ ಜೋರಾಗಿ ಮಾತನಾಡಲು ಸಾಧ್ಯವಾಗದೆ ಮಾಧ್ಯಮಗಳ ಮುಂದೆ ಬೇರೆಯವರಿಗೆ ಟಿಕೆಟ್ ಹೇಗೆ ಕೊಡುತ್ತಾರೆ ಎಂದು ಕೀರಲು ಧ್ವನಿಯಲ್ಲಿ ಘರ್ಜಿಸಿ, ಬಾಲ ಮುದುರಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದೇ ರೀತಿ ಶೋಭಾ ಕರಂದಾಜ್ಲೆಗೂ ಈ ಬಾರಿ ಟಿಕೆಟ್ ತಪ್ಪುವ ನಿರೀಕ್ಷೆ ಇದ್ದು, ಮಂಡ್ಯ ಲೋಕಸಭಾ ಸದಸ್ಯರಾದ ಸುಮಲತಾ ಅವರಿಗೂ ಈ ಬಾರಿ ಟಿಕೆಟ್ ನೀಡಿಲ್ಲ, ಈ ಹಿಂದೆಯೇ ಮಾಜಿ ಸಚಿವ ಸದಾನಂದಗೌಡ ಅವರಿಗೆ ಅರ್ಧಚಂದ್ರ ತೋರಿಸಲಾಗಿದೆ.
ಬಿಜೆಪಿಯಲ್ಲಿ ಯಾರೇ ಆಗಿರಲಿ ಮುಲಾಜಿಲ್ಲದೆ ಮನೆ ಕಡೆಗೆ ಕಳಿಸಲಾಗುತ್ತಿದೆ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅಪ್ಪ ಹಾಕಿದ ಆಲದ ಮರದಂತೆ ಅಲ್ಲೇ ನೇತಾಡಿಕೊಂಡು ಹೊಸ ಮುಖಗಳಿಗೆ ಅವಕಾಶವನ್ನೇ ನೀಡದೆ ಜೈ ಹುಜೀರ್ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಹಲವು ಹಾಲಿ ಸಂಸದರಿಗೆ ಮೈಸೂರಿನ ಸಿಂಹಕ್ಕೆ ಆದ ಗತಿಯೇ ಆಗಲಿದೆ ಎಂದು ಹೇಳಲಾಗುತ್ತಿದ್ದು, ಯಾರಾದರೂ ಗುಟುರು ಹಾಕಿದರೆ ದಂಡ ಮಂತ್ರಿಸುವುದು ಹೇಗೆ ಎಂಬುದನ್ನು ಸದಾನಂದಗೌಡ ಅಂತವರಿಗೆ ಮಂತ್ರಿಸಿ ತೋರಿಸಿದ್ದಾರೆ.
ನಳೀನ್ ಕುಮಾರ್ ಕಟೀಲ್ ಅವರಿಗೂ ಟಿಕೆಟ್ ನೀಡದೆ ಬೋನಿಗೆ ಕೂಡಲಿದ್ದಾರೆ ಎಂಬು ಸುದ್ದಿ ಇದೆ.