ತುಮಕೂರು : ಬಿಜೆಪಿಯಿಂದ ತುಮಕೂರು ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿರುವ ವಿ.ಸೋಮಣ್ಣ ತುಮಕೂರು ನಗರಕ್ಕಷ್ಟೇ ಪರಿಚಿತರಾಗಿದ್ದು, ಇತರೆ ತಾಲ್ಲೂಕುಗಳಿಗೆ ಅಷ್ಟಾಗಿ ಪರಿಚಿತರಲ್ಲ, ಹಾಗಾದರೆ ಈ ವಿ.ಸೋಮಣ್ಣ ಯಾರು? ತುಮಕೂರಿಗೂ ಇವರಿಗೂ ಏನು ನಂಟು.

ದೊಡ್ಡಮರುಳವಾಡಿಯವರಾದ ವೀರಣ್ಣ ಮತ್ತು ತಾಯಿ ಕೆಂಪಮ್ಮರವರ ಮಗನಾಗಿ ವಿ.ಸೋಮಣ್ಣನವರ 1950ರ ಜುಲೈ 20ರಂದು ಜನಿಸಿದ ಇವರು, ಬೆಂಗಳೂರಿನ ವಿ.ವಿ.ಪುರಂನ ಇಂಜಿನಿಯರ್ ಕಾಲೇಜಿನಲ್ಲಿ ಆಗಿನ ಕಾಲಕ್ಕೆ ಆಟ್ರ್ಸ್ ಮತ್ತು ಕಾಮರ್ಸ್ ಪದವಿಯನ್ನು ಪಡೆಯುತ್ತಾರೆ. ಪ್ರಸ್ತುತ ಬೆಂಗಳೂರು ವಿಜಯನಗರದ ವಾಸಿಯಾಗಿರುವ ವಿ.ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು ವಿ. ಸೋಮಣ್ಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ವಸತಿ ಸಚಿವರು. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಐದು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಬೆಂಗಳೂರು ನಗರದ ರಾಜಕೀಯದ ಮೇಲೆ ಭಾರೀ ಹಿಡಿತ ಹೊಂದಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿದ್ದ ಸೋಮಣ್ಣ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸೇರಿದರು.
ಬೆಂಗಳೂರು ನಗರಾಭಿವೃದ್ಧಿ, ಆಹಾರ, ತೋಟಗಾರಿಕೆ, ಬಂದೀಖಾನೆ, ಸೈನಿಕ ಕಲ್ಯಾಣ, ವಸತಿ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆಯೂ ಮತ್ತೆ ಸಚಿವರಾಗಿ ಅದೇ ಖಾತೆಯನ್ನು ಪಡೆದರು.
ಕಾಲೇಜು ದಿನಗಳಲ್ಲಿಯೇ ವಿದ್ಯಾರ್ಥಿ ಸಂಘಟನೆಗಳ ನಾಯಕರಾಗಿದ್ದ ವಿ. ಸೋಮಣ್ಣ 1983ರಲ್ಲಿ ಬೆಂಗಳೂರಿನ ವಿಜಯನಗರದಿಂದ ಮಹಾನಗರ ಪಾಲಿಕೆ ಸದಸ್ಯರಾಗಿ, ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಘಟನಾ ಚತುರ ಎಂದು ಅವರು ಹೆಸರು ಪಡೆದಿದ್ದಾರೆ.
ವಿ. ಸೋಮಣ್ಣ 1994ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ದಾಖಲೆ ಬಹುಮತದಿಂದ ಶಾಸಕರಾಗಿ ಆಯ್ಕೆಯಾದರು. 1996ರಲ್ಲಿ ಬಂದೀಖಾನೆ ಸಚಿವರಾಗಿ ಹಾಗೂ 1999ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.
1999ರ ಚುನಾವಣೆಯಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ, 2008ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿ ಆಯ್ಕೆಯಾದರು.
ಬಳಿಕ ಬಿಜೆಪಿ ಸೇರಿದ ವಿ. ಸೋಮಣ್ಣ ವಸತಿ ಮತ್ತು ಮುಜರಾಯಿ ಸಚಿವರಾದರು. ಜೂನ್ 2010ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡರು. ಬಳಿಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ, 2010 ರಿಂದ 2013ರ ತನಕ ವಸತಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.
2012ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಳಿಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು.
ಇವರು ಸಿದ್ಧಗಂಗಾ ಮಠದ ಪರಮಭಕ್ತರಾಗಿದ್ದು, ಮಠದಲ್ಲಿ ನಡೆಯುವ ಕಾರ್ಯಕ್ರಗಳ ಉಸ್ತುವಾರಿಯನ್ನು ವಹಿಸಿಕೊಂಡು ಕಾರ್ಯಕ್ರಮಗಳ ಯಶಸ್ಸಿಗೆ ಕಾರಣಿಭೂತರಾಗಿರುತ್ತಾರೆ. ರಾಜಕೀಯದ ಹೊರತಾಗಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿ. ಸೋಮಣ್ಣ ಅಪಾರ ಆಸಕ್ತಿ ಹೊಂದಿದ್ದಾರೆ. ಆರ್ಯಸೇವಾಶ್ರಮದ ಟ್ರಸ್ಟಿಯಾಗಿದ್ದಾರೆ. ಜನಸ್ಪಂದನ ಟ್ರಸ್ಟ್ನ ಗೌರವಾಧ್ಯಕ್ಷರು.
ವಿ. ಸೋಮಣ್ಣ ರಾಜಕೀಯ ಟೈಮ್ಲೈನ್
2021 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆ. ವಸತಿ ಇಲಾಖೆ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಹೊಣೆ
2019 ವಸತಿ ಸಚಿವರಾಗಿ ವಿ. ಸೋಮಣ್ಣ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರಿದರು.
2019 – 2020 ತೋಟಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಣೆ
2019 – 2020 ಕರ್ನಾಟಕ ಸರ್ಕಾರದಲ್ಲಿ ರೇμÉ್ಮ ಸಚಿವರಾಗಿ ಕಾರ್ಯ ನಿರ್ವಹಣೆ
2018 ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
2010 – 2010 ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿ ಕರ್ತವ್ಯ
2010 – 2018ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಣೆ
2009 – 2009 ಕರ್ನಾಟಕ ಸರ್ಕಾರದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಣೆ
2023ರಲ್ಲಿ ತಮ್ಮ ಕ್ಷೇತ್ರವಾದ ಗೋವಿಂದರಾಜ ನಗರವನ್ನು ಬಿಟ್ಟು ವರುಣ ಮತ್ತು ಚಾಮರಾಜನಗರದಲ್ಲಿ ವಿಧಾನಸಭಾ ಚುನಾವಣೆಗೆ ನಿಂತು ಸೋಲನನುಭಿವಿಸಿದ್ದರು.
ತದ ನಂತರ ಯಡಿಯೂರಪ್ಪ ಮತ್ತು ಸೋಮಣ್ಣನವರ ನಡುವೆ ವೈಮನಸ್ಸು ಉಂಟಾಗಿತ್ತು, ಮಧ್ಯ ಪ್ರವೇಶಿಸಿದ ಅಮಿತ್ ಶಾ ಮತ್ತು ನರೇಂದ್ರಮೋದಿ ಅವರ ಕೃಪಕಟಾಕ್ಷದಿಂದ ಇದೀಗ ಸ್ಥಳೀಯರ ವಿರೋಧದ ನಡುವೆಯೂ ಹಾಲಿ ಸಂಸದ ಜಿ.ಎಸ್.ಬಸವರಾಜು ಅವರ ಬೆಂಬಲದಿಂದ ಬಿಜೆಪಿಯಿಂದ ಟಿಕೆಟ್ ಪಡೆದು ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.