ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಸಿಸಿ ಕ್ಯಾಮರ ಅಳವಡಿಕೆ ಖಂಡಿಸಿ ಮು.ಮಂ.ಗೆ ಲೋಕೇಶ್ ತಾಳಿಕಟ್ಟೆ  ಪತ್ರ

ತುಮಕೂರು : ಯಾವುದೇ ದೊಡ್ಡ ದೊಡ್ಡ ಪರೀಕ್ಷೆಗಳಿಗೆ ಇಲ್ಲದ ಸಿ,ಸಿ ಕ್ಯಾಮರಾ ಮತ್ತು ವೆಬ್ ಕ್ಯಾಮರಾ ಗಳು           ಎಸ್ ಎಸ್.ಎಲ್.ಸಿ ಪರೀಕ್ಷಾ ಕೊಠಡಿಗಳಲ್ಲಿ  ಕಡ್ಡಾಯವಾಗಿ ಮಾಡಿರುವುದು ಏಕೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರುಪ್ಸದ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ.

ಶಿಕ್ಷಣ ಇಲಾಖೆ ಹಾಗೂ ಪ್ರೌಢಶಾಲಾ ಪರೀಕ್ಷಾ ಮಂಡಳಿ ಇತ್ತೀಚಿನ ದಿನಗಳಲ್ಲಿ ವಿಚಿತ್ರ ಹಾಗೂ ಆಶ್ಚರ್ಯ ಕರವಾಗಿ ನಡೆದುಕೊಳ್ಳುತ್ತಿದೆ. 

ಎಸ್ ಎಸ್ ಎಲ್ ಸಿ ಪರೀಕ್ಷಾ ಮೇಲ್ವಚಾರಕರಾಗಿ ಪ್ರಾಥಮಿಕ ಶಿಕ್ಷಕರನ್ನು ನೇಮಿಸಿ ಅವರಿಗೆ ತರಬೇತಿ ಸಹ ನೀಡಲಾಯಿತು. ನಂತರ
ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅವಮಾನಿಸಲಾಯಿತು.
ಈಗ ತರಾತುರಿಯಲ್ಲಿ ಹೊಸದಾಗಿ ಸರ್ಕಾರಿ, ಅನುದಾನಿತಾ ಶಾಲಾ ಶಿಕ್ಷಕರನ್ನು ಮಾತ್ರ ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿದ್ದೀರಿ, ಆದರೆ ಅನುದಾನ ರಹಿತ ಶಾಲಾ ಶಿಕ್ಷಕನ್ನು ದೂರ ಇಟ್ಟಿದ್ದೀರಾ.ತರಬೇತಿ ಹೆಸರಿನಲ್ಲಿ         ಸಾರ್ವಜನಿಕರ ಹಣ ಪೋಲು ಮಾಡಲಾಗಿದೆ ಎಂದಿದ್ದಾರೆ.

  ಪ್ರತೀ ಕೊಠಡಿಗೂ ಸಿ. ಸಿ ಕ್ಯಾಮರಾ ಅಳವಡಿಸಿ ಅವುಗಳನ್ನು ವೆಬ್ ಲಿಂಕ್ ಗೆ ಜೋಡಿಸಿ ಸ್ಥಳೀಯ ಪೊಲೀಸ್ ಸ್ಟೇಷನ್, ಜಿಲ್ಲಾ ಪಂಚಾಯಿತಿ, ಹಾಗೂ ಸಾರ್ವಜನಿಕರಿಗೂ ನೇರ ಸಂಪರ್ಕಕ್ಕೆ ಸಿಗುವಂತೆ ಮಾಡುವ ನಿರ್ಧಾರ ಮಾಡಿ, ಮೂರು ದಿನದಲ್ಲಿ ಪರೀಕ್ಷೆ ನಡೆಯುವ ಎಲ್ಲಾ ಕಛೇರಿಗಳಿಗೆ ಸಿ ಸಿ ಕ್ಯಾಮರಾ ಅಳವಡಿಸಲೇ ಬೇಕು ಎಂಬ  ಹುಚ್ಚು ಹಾಗೂ ಮಕ್ಕಳಿಗೆ ಭಯ ಹುಟ್ಟಿಸುವಂತಹ ದುಬಾರಿ ನಿರ್ಣಯ ಮಾಡಲಾಗಿದೆ. ಈ ಬೆಳವಣಿಗೆ ಪರೀಕ್ಷೆ ಬರೆಯುವ ಮಕ್ಕಳಲ್ಲಿ ಭಯ ಸೃಷ್ಟಿಯಾಗಿ ಗಮನವನ್ನು ಕ್ಯಾಮರಾ ಕೇಂದ್ರೀಯ ವಾಗಿಸಿ ಬೇರೆಯವರು ತನ್ನನ್ನು ಗಮನಿಸುತ್ತಿದ್ದಾರೆ ಎಂದುಕೊಂಡು ನೆನಪಿರುವ ಉತ್ತರವೂ ಬರದಿದ್ದರೆ ಯಾರು ಹೊಣೆ❓

ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ.  ಪರೀಕ್ಷಾ ಕೊಠಡಿಗಳಲ್ಲಿ ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತಹ ವಾತಾವರಣ ಸೃಷ್ಟಿ ಮಾಡುವ ಬದಲು ಮಕ್ಕಳನ್ನು ಕಳ್ಳರಂತೆ, ದೊಡ್ಡ ಅಪರಾಧ ತಡೆಯುವವರಂತೆ ಈ ರೀತಿ ಅನುಮಾನಿಸುವುದು ಖಂಡನೀಯ. *ಐಎಎಸ್, NEET, JEE, PUC,* ಇತ್ಯಾದಿ ಯಾವುದೇ ಪರೀಕ್ಷೆಗೆ ಇಲ್ಲದ  ಕಣ್ಗಾವಲು *ಎಸ್. ಎಸ್. ಎಲ್. ಸಿ.* ವಿದ್ಯಾರ್ಥಿ ಗಳಿಗೆ ಯಾಕೆ ಈ ರೀತಿಯ ಶಿಕ್ಷೆ❓. ಇಂತಹ ಕೆಟ್ಟ, ಅಸಾಂಪ್ರದಾಯಿಕ  ಪದ್ಧತಿಗಳನ್ನು ರೂಪಿಸುವ ವಿಕೃತ ಅಧಿಕಾರಿ ಅಥವಾ ಇನ್ನಾರೇ ಆದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *