
ಡಿಸೆಂಬರ್ 21 ಸೀರೆ ದಿನವಂತೆ,ಇದು ನನಗೆ ಮಲ್ಲಿಕಾ ಬಸವರಾಜು ಮೇಡಂ ಅವರ ಪೋಸ್ಟ್ ನೋಡಿದ ನಂತರ ತಿಳಿಯಿತು
ಸೀರೆ , ಸಾರಿ, ಸ್ಯಾರಿ ಇತ್ಯಾದಿ ಪ್ರಚಲಿತ ಪದಗಳು ಇದ್ದರೂ ಸೀರೆ ಅಂದಾಗ ಅದರ ಜೊತೆ ನಾವು ಹೆಂಗಸರ ಭಾವನಾತ್ಮಕ ಸಂಬಂಧ ಜಾಗೃತ ಗೊಳ್ಳುತ್ತದೆ…
ಸೀರೆ ಅದರ ರಂಗು,ಸೀರೆ ಮೇಲಿನ ಚಿತ್ತಾರಗಳು ಆಯಾ ರಾಜ್ಯದ ವಿವಿಧ ಭಾಗಗಳಲ್ಲಿ ಅಡಗಿರೋ ಸಂಸ್ಕೃತಿ, ಆಚರಣೆ ಗಳು , ನಂಬುಗೆಗಳು ವ್ಯಕ್ತ ವಾಗುವುದು ಸರಿಯಷ್ಟೆ…
Ikkat, ಸಂಭಲ್ಪೂರ್,ಜೈಪುರ್,banarasi,ಕಾಂಚೀಪುರಂ,ಖಾದಿ,ಕಾಶ್ಮೀರಿ,ಹೇಗೆ ಹಲವು ಬಗೆಯ ಸೀರೆಗಳು..ಎಲ್ಲ ರೀತಿಯ ಸೀರೆಗಳು ನನ್ನ ಬಳಿ ಇರ್ಬೇಕು ಅನ್ನೋದೇ ಹೆಂಗಸರ ಮಹದಾಸೆ …ಆದರೆ ಎಲ್ಲಾ ಹೆಂಗಸರಿಗೂ ಆರ್ಥಿಕ ಸ್ಥಿತಿ ಒಂದೇ ರೀತಿ ಇರೋಲ್ಲ ಅನ್ನೋದೇ ದುರದೃಷ್ಟ ಕರ…ಒಮ್ಮೊಮ್ಮೆ ಇದು ನಮ್ ಸೋಶಿಯಲ್ ಸ್ಟೇಟಸ್ ಅನ್ನು ಅಳೆದು ಬಿಡುತ್ತದೆ..
ಈ ವಿಚಾರದಲ್ಲಿ ನನ್ನದೇ ವಿಷಯ ಹೇಳುವೆ ನನ್ನ ತಂಗಿ ದುಬಾರಿ ಬೆಲೆಯ ಸೀರೆ ಕೊಳ್ಳುವುದು ರೂಢಿ ನಾನು ಹಾಗೆ ದುಂದು ವೆಚ್ಚ madolla ನನ್ನ ಆರ್ಥಿಕ ಪರಿಸ್ಥಿತಿ ಅದಕ್ಕೆ ಸಪೋರ್ಟ್ ಮಾಡೋಲ್ಲ ಜೊತೆ ಗೆ ಅಪ್ಪ ನನಿಗೆ ಸಿಂಪಲ್ ಆಗಿರಬೇಕು ಅಂತ ಪಾಠ ಮಾಡಿದ್ದಾರೆ… ಆದರೆ ನಮ್ಮ ಅಮ್ಮ ನಾನು ಕಮ್ಮಿ ಬೆಲೆ ಸೀರೆ uttaga ನನ್ನ ಸಹೋದರಿ ಜೊತೆ compare ಮಾಡಿ ನನಗೆ ಸಿಟ್ಟು ತರಿಸಿ ಕೊನೆಗೆ ನಾನು iste ಕನಮ್ಮ ನನ್ capacity ಅಂದು ಅತ್ತಿದ್ದು ಉಂಟು…
ನಾನು ನನ್ನ ಫ್ರೆಂಡ್ ರೇಖಾಳ ದ್ದು ಬಟ್ಟೆಗಳ ವಿಚಾರದಲ್ಲಿ ಒಂದೇ ತರದ ಮನೋಭಾವ ಅನಗತ್ಯ ದುಂದು ಬೇಡ ಅನ್ನೋದು… ಸರಿ ತಾನೇ ?
ಸೀರೆ ಗಳ ವಿಚಾರದಲ್ಲಿ ನಮಗೆ ಗೊತ್ತಿರೋ ಹಾಗೆ ಮಹಿಳಾ ಮಣಿಗಳ ಜೋರು, ದರ್ಪ, ಆಯ್ಕೆ, ನಾಜೂಕು, ಮಾನವೀಯತೆ ಎಲ್ಲವೂ ಸೀರೆಗಳ ಮುಖೇನ ವ್ಯಕ್ತ ವಾಗುತ್ತೆ ಅಂದರೆ ತಪ್ಪಾಗದು
ಕೆ.ಬೀ.ಸಿದ್ಧಯ್ಯ ನವರು ತಮ್ಮ ಬರಹಗಳಲ್ಲಿ “ಅವ್ವನ ಸೆರಗಿನ ತುದಿ ಯನ್ನು ಬಾಯಲ್ಲಿ ಜಗಿ ಯುವಾಗ ಉಪ್ಪಿನ ರುಚಿ” ಆಗುವ ಅನುಭವ ಅದೆಷ್ಟು ಆಪ್ಯಾಯ …ಅದೇ ಅವ್ವ ಅಂದರೆ ನನ್ನ ಅಜ್ಜಿ ಸೀರೆ ಯ ಹಿಂಭಾಗ ದ ಸೊಂಟದ ಭಾಗಕ್ಕೆ ಕಳೆ ಕುಡ್ಲು ಸಿಕ್ಕಿಸಿ ಹೊಲ ಗದ್ದೆ ತೋಟ ದ ಕಡೆ ಬಿರುಸಾಗಿ ನಡೆಯಿತಿದ್ದದ್ದು
ಕಣ್ಣಿಗೆ ಕಟ್ಟಿದಂತೆ ಇದೆ….ಅದೇ ಸೆರಗಿನ ತುದಿಯಲ್ಲಿ ಕೆಲವೊಮ್ಮೆ ಕಾಸು ಗಂಟು ಹಾಕಿಕೊಳ್ಳುತ್ತಿದ್ದ ಅಜ್ಜಿ ಇನ್ನೊಮ್ಮೆ ಬೆವರು ಒರೆಸಿಕೊಂಡು ಉಸ್ಸಪ್ಪ ಎಂದು ನಿಂತದ್ದು ಕೂಡ…
ಇನ್ನು ನಮ್ಮ ಅಮ್ಮ ನೋ ..ಇದು ನನ್ ಮೊದಲನೇ ಸಂಬಳದಲ್ಲಿ ತಗೊಂಡೆ….avag ತಗೊಂಡೆ ಇವಾಗ ತಗೊಂಡೆ ಅವ್ರು ಉಡಿಸಿದ್ರು ಇವ್ರು ಉಡಿಸಿದ್ದು…ಹಿಂಗೆಪ ನಾವು ಹೆಂಗಸರು ಸೀರೆ ಅಂದ್ರೆ..
ಇನ್ನು ರಾಜಕೀಯ dalli ಇರೋ ಮಹಿಳೆಯರ ಸೀರೆ ಬಗ್ಗೆ ಹೇಳ್ಬೇಕು ಅಂದ್ರೆ ನನಗೆ ಫಸ್ಟ್ ಕಣ್ ಮುಂದೆ ಬರೋದೇ ಇಂದಿರಾ ಗಾಂಧೀ…
ಇಂದಿರಾ ಗಾಂಧಿ ಸ್ವಾತಂತ್ರ ಹೋರಾಟದಲ್ಲಿ ಇರೋವಾಗ ಲೆ ಖಾದಿ ಸೀರೆ ಉಡುವುದು ಅವರ ಫೋಟೋ ಗಳ ಮೂಲಕ ಗೊತ್ತಾಗುತ್ತೆ ನಂತರ ದ ದಿನಗಳಲ್ಲಿ ಅದರಲ್ಲೂ ಅವರು ಪ್ರಧಾನಿ ಆದ ಮೇಲೆ udutidda ಸೀರೆ ಗಳು ಅವರ ಸ್ಟೈಲ್ ಸ್ಟೇಟ್ಮೆಂಟ್ ಆಗಿದ್ದು ಅಷ್ಟೇ ಅಲ್ಲ ಅವರು ಅದನ್ನು ಒಂದು ಆಯುಧದಂತೆ ವ್ಯಕ್ತ ಪಡಿಸುತ್ತಿದ್ದರು ಎಂದು ಒಮ್ಮೆ ಓದಿದ್ದು ನೆನಪು..ಯಾಕಂದ್ರೆ ಸೀರೆ ತನ್ನ ಹೆಣ್ತನವನ್ನು ತೋರಲು ಅಲ್ಲ ಬದಲಿಗೆ ತಮ್ಮ ಪ್ರಭಲ ಅಧಿಕಾರ, ಜ್ಞಾನ ಹಾಗೂ ಸರಳ ವ್ಯಕ್ತಿತ್ವ ಅವರು ಸೀರೆ uduttidda reetyinda ಅವರ ವ್ಯಕ್ತಿತ್ವ ಹೊರಬಿಳು ತಿತ್ತು ಅಂಥ ಎಲ್ಲೋ ಓದಿದ್ದೆ..
ಜೊತೆ ವಿಶೇಷ ಪ್ರಿಂಟ್ ಗಳ ನ್ನು ಜೈಪುರ್ ನಲ್ಲಿ ನೈಸಿ ತರಿಸುತ್ತಿದ್ದರಂತೆ…ಒರಿಸ್ಸಾದ ಸಂಭಾಲ್ಪೂರ್ ಸೀರೆಗಳು ರಾಜ್ಯಕ್ಕೆ ಅಷ್ಟೇ ಸೀಮಿತ ಆಗಿದ್ದು ಇಂದಿರಾ ಗಾಂಧಿ ಆ ಸೀರೆ ಗಳನ್ನ ಉಟ್ಟ ಮೇಲೆಯೇ ಅವು ಬೇರೆಡೆಗೆ ಬೆಳಕಿಗೆ ಬಂತು ಎನ್ನುವುದು ಇದೆ ಹಾಗೆ ಈ ಸೀರೆಗಳಿಗೆ Govt of ಇಂಡಿಯಾ ದ GI tag ಸಿಕ್ಕಿರೋದು ವಿಶೇಷ…
ಸೋನಿಯಾ ಗಾಂಧಿ ಯವರಿಗೆ ಇಂದಿರಾ ಗಾಂಧಿ ತಮ್ಮ ಮದುವೆಯ ಬನಾರಸ್ ಸಿಲ್ಕ್ ಸೀರೆ ಯನ್ನೂ ಮದುವೆ ಸಂದರ್ಭ ಸಲ್ಲಿ ಸೋನಿಯಾ ಅವರಿಗೆ ಕೊಟ್ಟರಂತೆ
ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕ ಗಾಂಧೀ ಕೂಡ ತನ್ನ ಅಜ್ಜಿ ಯ ಸೀರೆ uttu U P ಕ್ಯಾಂಪೇನ್ ಗೆ ಹೋಗಿದ್ದು ನಾವೂ ನೋಡಿದ್ದೇವೆ ..
ಹಾಗೆ ಮದರ್ ತೆರೆಸಾ ಉಡು ತಿದ್ದ ಹತ್ತಿ ಯ ಬಿಳಿ ಸೀರೆ ಅದರ ನೀಲಿ border ತಾಯ್ತನ ಮತ್ತು ಸರಳ ಸೇವಾ ಮನೋಭಾವ ತೋರಿಸು ತದೆ ಲ್ಲವೆ..
ಇನ್ನು ಜಯಲಲಿತಾ ಮೇಡಂ ಅವರ ಸೀರೆಗಳು ಹೆಚ್ಚು ಪ್ಲೈನ್ ಇದ್ದು ವಿಶೇಷ ಎಂಬ್ರಾಯ್ಡರ್ ಇರೋ ಸಣ್ಣ ಬಾರ್ಡರ್ ಗಳು ಲವ್ಲಿ…
ಒಮ್ಮೆ ಬೆಂಗಳೂರಿನ ಗಾಂಧೀ ಭವನಕ್ಕೆ ಮೇಧಾ ಪಾಟ್ಕರ್ ಬಂದಿದ್ರು ಎಲ್ರೂ ಫೋಟೋ ತೆಗೆಸಿಕೊಳ್ಳಲು ತರಾತುರಿಯಲ್ಲಿ ಇದ್ದರೆ ನಾನು ಒಂದ್ ಮೂಲೆಯಲ್ಲಿ ನಿಂತು ಅವರು ಉಟ್ಟಿದ್ದ ಶುಭ್ರ ಬಿಳಿ ಸೀರೆ ವಿತ್ ಸಣ್ಣ ನೀಲಿ ಬಾರ್ಡರ್ , ಹವಾಯ್ ಸ್ಲಿಪ್ಪರ್ ಕುತ್ತಿಗೆ ಯಲ್ಲಿನ ಒಂದು ಕಪ್ಪು ದಾರ ಇಸ್ಟನ್ನೆ ನೋಡುತ್ತಾ ನಿಂತೆ ಎಸ್ಟೊಂದು ಸರಳ…ಫೋಟೋ ತೆಗೆಸಿಕೊಳ್ಳಲು ಹೋಗಲೇ ಇಲ್ಲ…
ಹಾಗೆ ಸಿನೆಮಾದಲ್ಲಿ ಎವರ್ಗ್ರೀನ್ ತಾರೆ ರೇಖಾ ಉಡುವ ಕಂಚಿ ರೇಷ್ಮೆ ಸೀರೆ ನಂಗಂತೂ ದುರಾಸೆ ಮೂಡಿಸುತ್ತೆ..
ಇತ್ತೀಚೆಗೆ ವೈವಿಧ್ಯಮಯ ಸೀರೆಗಳು ಕೈಗೆಟುಕುವ ದರದಲ್ಲಿ ಲಭ್ಯ ಜೊತೆಗೆ ಯೂಟ್ಯೂಬ್ ನಲ್ಲಿ ಸಾರೀ draping tutorials ಕೂಡ
ಮತ್ತೂ ಕೆಲವು ಸಲ ಅಸಯ್ಯ ಅನ್ನಿಸೋ ರೀತಿ ಸೀರೆ ಉಡುವುದು ಟ್ರೆಂಡ್ ಆಗಿದೆ…
ಮೊನ್ನೆ ನಮ್ಮ ಅಮ್ಮನಿಗೆ ಅವರ ತಮ್ಮ ಒಂದು ಸೀರೆ kodisibittiddane ನಾನು ನನ್ನ ತಂಗಿ ನನ್ನ ಮಗಳು ಎಲ್ರೂ ಕೂತಿರುವಾಗ ನಮ್ ಅಮ್ಮ noodre ನನ್ ತಮ್ಮ ಕೊಡ್ಸಿದ್ದು ಅಂತ ಪದೇ ಪದೇ ಹೇಳಿ ನಮ್ಮನ್ನು ರೆಗಿಸುತ್ತಿತ್ತು
ನಂಗೂ ಕೋಪ ಬಂದು ನಾವ್ ಎಸ್ಟ್ ಸೀರೆ kossidru ನಿಂಗ್ ಅದ್ರ ನೆನಪೇ ಆಗೋಲ್ಲ ನಿನ್ ತಮ್ಮ ಅಪರೂಪಕ್ಕೆ kodsiro e ಸೀರೇನೆ ಹೆಚ್ಚಾಯ್ತು ಅಂತ ವಾಪಸ್ ರೇಗಿಸಿ ಸುಮ್ ಮಾಡಬೇಕಾಯಿತು…
ಅಲ್ವಾ ಫ್ರೆಂಡ್ಸ್ ಹೆಣ್ಮಕ್ಳು ಸೀರೆ ವ್ಯಾಮೋಹ ಅದರಲ್ಲೂ ಭಾಗಿನ ಅಂಥ ತವರು ಮನೆ ಇಂದ ಕೊಟ್ಟಾಗ ಎಸ್ಟ್ ಭೀಗ್ತಿವಿ
ಅದೇ ಗಂಡನ ಅಕ್ಕನಿಗೆ ಅತ್ವ ತಂಗಿಗೆ ಭಗಿನ ಕೊಡೋ ಸೀರೆ ಅಷ್ಟಾಗಿ ಅವ್ರಿಗೆ ತೃಪ್ತಿ ಕೊಡೋಲ್ಲ…ಒಟ್ನಲ್ಲಿ ಗೌರಿ ಹಬ್ಬಕ್ಕೆ ಭಾಗೀನ ತಲುಪಿದರೆ ಖುಷಿ ಆಗುತ್ತೆ ಅವರಿಗೂ…
ಸೀರೆ ಕಥೆ ಮುಗಿಯಲ್ಲ ಪ್ಪ ನಮ್ದು..
-ಪಲ್ಲವಿ ಕಲ್ಮನೆ
ಮೈತ್ರಿ news ನಲ್ಲಿ ನನ್ನ ಮಹಿಳೆ ಸೀರೆಯ ಸ್ಟೇಟಸ್ – ಇಂದಿರಾ ಉಡುತ್ತಿದ್ದ ಸೀರೆಗಳ್ಯವು ಆರ್ಟಿಕಲ್ ನೋಡಿ ಕುಶಿ ಆಯ್ತು….
– ಪಲ್ಲವಿ ಕಲ್ಮನೆ.