ತುಮಕೂರು: ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗತಿಕವಾಗಿ ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಪ್ಟೆಂಬರ್ 29ರಂದು ವಿಶ್ವ ಹೃದಯ ದಿನ ಆಚರಣೆ ಮಾಡುತ್ತಿದ್ದು ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಹೆಸರಾಂತ ಶ್ರೀ ಸಿದ್ದಾರ್ಥ ಹೈಯರ್ ಆಫ್ ಎಜುಕೇಶನ್ ಶ್ರೀ ಸಿದ್ದಾರ್ಥ ಕಾರ್ಡಿಯಾಕ್ ಪ್ರಾಂಟಿಡಾ ವತಿಯಿಂದ ಸೆಪ್ಟೆಂಬರ್ 29ರಿಂದ ಒಂದು ತಿಂಗಳುಗಳ ಕಾಲ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ತಪಾಸಣೆ ಮತ್ತು ರಕ್ತ ಪರೀಕ್ಷೆಗಳನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ ಪ್ರಭಾಕರ್ ಅವರು ತಿಳಿಸಿದ್ದಾರೆ.
ವಿಶ್ವ ಹೃದಯ ದಿನದ ಅಂಗವಾಗಿ ಹೃದಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾಹೇ ವಿಶ್ವವಿದ್ಯಾಲಯದ ವತಿಯಿಂದ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ್ ಅವರ ಆಶಯದಂತೆ ಹೃದಯ ಸಾವಿನ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ವಿಶ್ವ ಹೃದಯ ದಿನದಂದು ಹೃದಯ ಸಂಬಂಧಿತ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಮತ್ತು ಸಲಹೆ ನೀಡಲಾಗುವುದು ಜೊತೆಗೆ ಸಾರ್ವಜನಿಕರಿಗಾಗಿ ಕೇವಲ ಒಂದು ಸಾವಿರಗಳಿಗೆ 9ಕ್ಕೂ ಹೆಚ್ಚು ಪರೀಕ್ಷೆಗಳನ್ನ ಅಕ್ಟೋಬರ್ 1ರಂದು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಲಭ್ಯವಿರುವ ಪರೀಕ್ಷೆಗಳ ವಿವರ: ಫ್ರೀ ಕನ್ಸಲ್ಟೇಶನ್ (ಉಚಿತ ಸಲಹೆ,) ಯಕೋ (Echo test), ಇಸಿಜಿ(Electrocardiogram)ಟಿಎಂಟಿ (Treadmill Tes) ಆರ್ಬಿಎಸ್(Random Blood Sugar), ಬ್ಲಡ್ಯೂರಿಯ(Blood Urea Nitrogen) , ಎಲ್ಎಫ್ಟಿ(Liver Function Tests),ಲಿಫಿಡ್ ಪ್ರೊಪೈಲ್ (Lipid Profile Test), ಸೇರಿದಂತೆ ಸೀರಂಕ್ರೀಯೆಟ್ನೈನ್ Serum Creatinine(ಕಿಡ್ನಿ ಸಂಬಂಧಿತ ರಕ್ತ ಪರೀಕ್ಷೆ)
ವಿಶ್ವ ಹೃದಯ ದಿನದ ಅಂಗವಾಗಿ ಒಂದು ತಿಂಗಳುಗಳ ಕಾಲ ಸಿದ್ದಾರ್ಥ ಕಾಡಿಯಾಕ್ ಪ್ರಾಂಟಿಡಾ ವತಿಯಿಂದ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 30ರವರೆಗೂ ಉಚಿತ ಹೃದ್ರೋಗ ಚಿಕಿತ್ಸೆ ಮತ್ತು ತಪಾಸಣೆಯನ್ನು ಆಯೋಜನೆ ಮಾಡಲಾಗಿದ್ದು ಇದರ ಸದುಪಯೋಗವನ್ನು ಕೂಡಾ ಸಾರ್ವಜನಿಕರು ಮತ್ತು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಎಲ್ಲಾ ನೌಕರರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.