ಕುರುಡು ಕಾಂಚಾಣ ಕುಣಿಯುತಲಿತ್ತು-ಹಾಲಿಗೆ ಬಿದ್ದವರಿಗೆ ಪೇಡವ ತಿನ್ನಿಸುತಲಿತ್ತು—!—?

ವಿಡಂಬನೆ(ಹಾಸ್ಯ ನೋಟ)

ಮೋಟಣ್ಣ : ಏಮ್ರ ಅದಿ ಅಟ್ಲ ಕೂಸುತಾ ಉಂಡಾವು (ಏನ್ಲಾ ಹಂಗೆ ಕೂಗ್ತಾ ಇದ್ದೀಯ)

ಕಾಟಣ್ಣ : ಅನ್ನ ಪೇಡ ಚೆಚ್ಚಿನಾನು ಬಿರನಾ ರಾ (ಪೇಡ ತಂದಿದ್ದೇನೆ ಬೇಗ ಬಾರಣ್ಣೋ)

ಮೋಟಣ್ಣ : ಏಮಿಟಕ್ರಾ ಪೇಡ ( ಯಾಕೋ ಪೇಡ)

ಕಾಟಣ್ಣ : ಅನ್ನಡು ಪಾಲುಲೋಕಿ ಪಡುಪೀನಾಡು ದಾನುಕು (ಅಣ್ಣ ಹಾಲಿನೊಳಗೆ ಬಿದ್ದು ಹೋಗಿದ್ದಾನೆ ಅದ್ಕೆ)

ಮೋಟಣ್ಣ : ಅರೆ ದೊಂಗ ನಾ ಕೊಡ್ಕ ಯಾವನ್ನ ಪಾಲುಲೋಕಿ ಪಡಿಡ್ಡೇದಿ ( ಅಯ್ಯೋ ಕಳ್ಳ ನನ್ಮಗನೆ ಯಾವ ಅಣ್ಣ ಹಾಲಿನೊಳಗೆ ಬಿದ್ದಿರೋದು)

ಕಾಟಣ್ಣ : ಮನ ಎಮ್ಮೇಲ್ಲೇ ವೆಂಕಟೇಶನ್ನ ( ನಮ್ಮ ಎಂಎಲ್‍ಎ ವೆಂಕಟೇಶಣ್ಣ)

ಮೋಟಣ್ಣ : ಅಟ್ಲೈತೆ ಪಾಲು ತರಮು ತೆಲ್ಲಗ ಅವುನಾಡ ( ಹಂಗಾರೆ ಹಾಲು ತರಹ ಬೆಳ್ಳಗೆ ಆಗಿದ್ದಾರ)

ಕಾಟಣ್ಣ : ರಾವನ್ನ ತಮಾಸಿ ಸೇಯದ್ದು ( ಬಾರಣ್ಣೋ ತಮಾಸೆ ಮಾಡಬೇಡ)

ಮೋಟಣ್ಣ : ಅದೇನು ಸರಿಯಾಗಿ ಹೇಳಯ್ಯ, ಹಾಲನೊಳಗೆ ಬಿದ್ರು ಅಂದ್ರೆ ಏನಯ್ಯ ಅರ್ಥ

ಕಾಟಣ್ಣ : ಅದೇ ಕಣಣ್ಣ ಹಾಲು ಒಕ್ಕೂಟದ ಸಂಘಕ್ಕೆ ಅಧ್ಯಕ್ಷರಾದ್ರಂತೆ

ಮೋಟಣ್ಣ : ಹೌದಾ ಪರವಾಗಿಲ್ಲ ಕಣಯ್ಯ ಪಾವಗಡದಲ್ಲೂ ಹಾಲು-ಹಸ ಎಲ್ಲಾ ಇದ್ದಾವೆ ಅಂತ ಆತು

ಕಾಟಣ್ಣ : ಹೌದಣ್ಣೋ ನಂದೂ ಒಂದು ಗೊಡ್ಡು ಹಸ ಐತೆ

ಮೋಟಣ್ಣ : ಅಯ್ಯೋ ನಿಂದು ಗೊಡ್ಡು ಹಸ ಅಂತ ಜಗತ್ತಿಗೆಲ್ಲಾ ತಿಳಿದೈತೆ ತಕಾ

ಕಾಟಣ್ಣ : ಅಣ್ಣ ಈ ಹಾಲು ಒಕ್ಕೂಟಕ್ಕೆ ಎಲೆಕ್ಷನ್ ಆತಲ್ಲ ಗೆದಿದ್ದೋರು ಯಾರು ಕಂಟೆಸ್ಟು ಮಾಡಿರಲಿಲ್ವ

ಮೋಟಣ್ಣ : ಲೇ ಅಣ್ಣ ಗೆದ್ದ ಅಂತ ಪೇಡ ತಂದೋನು ನೀನು, ಈಗ ನನಗೆ ಹ್ಯಂಗಲಾ ಕೇಳ್ತೀಯ

ಕಾಟಣ್ಣ : ಹಂಗಲಣ್ಣ ಮೊನ್ನೆ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಾಗ ಸಾನೆ ದುಡ್ಡು ಖರ್ಚಾತು ಅಂದ್ರು ಅದ್ಕೆ ಕೇಳಿದೆ.

ಮೋಟಣ್ಣ : ಊ ಕಣೋ ಆಗುತ್ತೆ, ಮೊನ್ನೆ ಆ ಪೆಕರ ನನ್ನ ಮಗನೊಬ್ಬ್ಬ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಗಿ ಬಿಡ್ತೀನಿ ಅಂತ ಅಡಿಕೆ ತ್ವಾಟ ಮಾರಿ ಸೋತು ಅಂಗಿ ಎಲ್ಲಾ ಹರಕೊಂಡು ತಿರುಗುತ್ತಿಲ್ವ.

ಕಾಟಣ್ಣ : ಅಲ್ಲಣ್ಣೋ ಗ್ರಾಮ ಪಂಚಾಯಿತಿಗೇ ಅಂಗಿ ಹರಕಂಡ ಅಂದ್ರೆ, ಹಾಲಿನ ಪಂಚಾಯಿತೆ ಏಟಂಗಿ ಹರಕ ಬೇಕಣ್ಣ

ಮೋಟಣ್ಣ : ನಿರ್ದೇಶಕರಾಗಾಕೆ ಹಸಿನ ಸಗಣಿ ತಿಂದಷ್ಟು ಏಗಿ ಗೆದ್ದಿರಬೇಕಾದ್ರೆ, ಹಾಲಿನ ಅಧ್ಯಕ್ಷ ಆಗೋಕೆ ಏಟು ಗಂಜಲ ಕುಡಿಬೇಕಲಾ.

ಕಾಟಣ್ಣ : ಹಂಗಾರೆ ಹಾಲು ಅಧ್ಯಕ್ಷ ಆಗುಬೇಕಂದ್ರೆ ಏಟೊಂದು ಹಾಲು ಕರಿ ಬೇಕಾಣ್ಣ.

ಮೋಟಣ್ಣ : ತುಮಕೂರು ಡೇರಿ ತುಂಬಿ ಉಕ್ಕಂಗೆ ಹಾಲು ಕರಿಬೇಕು ಕಣೋ.

ಕಾಟಣ್ಣ : ಹಂಗಾರೆ ನಮ್ಮ ಕಡಿ ನಾಟಿ ಹಸ ಆದ್ರೆ ಆಗಲ್ಲ ಬಿಡಣ, ಜವಾರಿ ಸೀಮೆ ಹಸಾನೆ ಬೇಕು.

ಮೋಟಣ್ಣ : ಅದ್ಕೆ ಕಣ್ಲಾ ಪಾವಗಡದ ರಾಯಲ ಸೀಮೆ ಹೋರಿನಾ ಈಗ ಹಾಲು ಕರಿಯಾಕೆ ಬಿಟ್ಟಿರೋದು

ಕಾಟಣ್ಣ : ಹಂಗಾರೆ ಈ ಹಾಲಿನಾಗೆ ಆಟೊಂದು ನೊರೆ ಉಕ್ಕಂಗಿದ್ರೆ ನಾನು ಒಂದು ಕೈ ನೋಡ್ತಾ ಇದ್ದೆ.

ಮೋಟಣ್ಣ : ಮೊದ್ಲು ನಿನ್ನ ಗೊಡ್ಡ ಹಸಾನ ಮರಿ ಈಯೋ ಹಸ ಮಾಡು ಹಾಲು ಕರಿವಂತೆ

ಕಾಟಣ್ಣ : ಬಿಡಣ ಈ ಬಾರಿ ಹಸಿಗೆ ಮಧುಗಿರಿ ಸೀಮೆ ಹೋರಿ ತಂದು ಈಟ್ ಹೊಡಿಸಿ ಬಿಡಾನ

ಮೋಟಣ್ಣ : ನೋಡ್ಲಾ ನೀನು ಹಸ ಕರ ಹಾಕಿಸಿ ಹಾಲು ಕರಯೋ ಹೊತ್ತಿಗೆ ಇನ್ನಾರೋ ಪೇಡ ತಿಂತಾರೆ ಬಿಡೋ.

ಕಾಟಣ್ಣ : ಈಗ ಅರ್ಥ ಆಯಿತು ಬಿಡಣ್ಣ ನಮ್ಮ ಧಾರವಾಡದ ಬೇಂದ್ರೆ ಅಜ್ಜನ ಹಾಡು

ಮೋಟಣ್ಣ : ಅದೇನು ಸರಿಯಾಗಿ ಹೇಳೋ ಇಲ್ಲಂದ್ರೆ ನಿನ್ನೂ ಗೆದ್ದ ನಿರ್ದೇಶಕರು ಹಿಂಗು ತಿಂದ ಮಂಗ ಆಗ್ಯಾರಲ್ಲ ಹಂಗೆ ನೀನು ಆದೀಯ.

ಕಾಟಣ್ಣ : ಅದೆ ಕಣಣ್ಣ ಕುರುಡು ಕಾಂಚಾಣ ಕುಣಿಯುತಲಿತ್ತು ಹಾಲಿಗೆ ಬಿದ್ದೊರಿಗೆ ಪೇಡ ತಿನ್ನಿಸುತಲಿತ್ತು ಅಂತ.

ಮೋಟಣ್ಣ : ನೀ ಹಿಂಗೆ ಹಾಡು ಹೇಳ್ತಾ ಇರು ನಾಳಿಕ್ಕೆ ಕಾಂಚಾಣ ಹೋಗಿ ಬಾ ಜಾಣ ಅಂತ ತಿಗದ ಮ್ಯಾಲೆ ಬರೆ ಹಾಕ್ತಾರೆ.

ಕಾಟಣ್ಣ : ಬಿಡಣ ಅಣ್ಣಂಗೆ ಬೆಳಿಗ್ಗೇನೆ ಹೋಗಿ ಬಾಯಿಗೆ ಪೇಡ ಇಟ್ರೆ ರಾ ರಾ ರಾ ಇಕ್ಕಡ ರಾ ರಾ ಅನ್ನಲ್ವ—

ಮೋಟಣ್ಣ : ಓಹೋ ಈಗ ದಾರಿಗೆ ಬಂದೆ ನೋಡು, ನೋಡೋ ಕಾಂಚಾಣವಿಲ್ಲದೆ ನಮ್ಮ ರಾಯಲು ಸೀಮೆಲಿ ಒಂದು ಕಲ್ಲು ಅಲ್ಲಾಡಲ್ಲ, ಇಲ್ಲ ಹಾಲಿನ ಪೇಡ ತಿನ್ನಬೇಕು ಅಂದ್ರೆ ಕಾಂಚಾಣ ಕುಣಿಬೇಕು, ಹಾಲಲ್ಲಿ ಬೀಳಲೇ ಬೇಕು, ತಂಬಾ ಪೇಡ ತಿಂದು ಖುಷಿ ಪಡಾನ.

ಕಾಟಣ್ಣ : ತಗಾ ನಾಳೆ ವೆಂಕಟೇಶಣ್ಣ ಬರತೈತೆ ಒಂದು ದೊಡ್ಡ ಹಾರ ಹಾಕಾನ.

ಮೋಟಣ್ಣ : ಥೂ ನಿನ್ನ ಮಡಕಶಿರಾಕ್ಕೋಗಿ ಒಂದು ಒಳ್ಳೆ ಹಾಲು ಕರೆಯೋ ಹಸ ತರಾನ ನಡಿ

ಕಾಟಣ್ಣ : ಕಾಂಚಾಣ ಯಾರು ಕೊಡುತಾರಣ್ಣೋ

ಮೋಟಣ್ಣ : ನಮ್ಮ ವೆಂಕಟರಮಣ್ಣ ಕೊಡ್ತಾರೆ ನಡಿಯೋ, ತಿರುಪತಿ ವೆಂಕಟರಮಣ ಅಂದ್ರೆ ಕಡಿಮೇನಾ ಹಸನಾ ತರಾನಾ…

ಕಾಟಣ್ಣ : ಬಿಡಣ್ಣ ಪೇಡ ಮಕ್ಕಳಿಗೆ ಒಂದೆರಡು ಇರಲಿ.

ಮೋಟಣ್ಣ : ಬಿಡೋ ಪಾವಗಡ ಬಸ್ ಸ್ಟಾಂಡ ಒಂದೆರಡು ದಿನಾ ಪೇಡ ಸ್ಟಾಲ್ ಮಾಡೋಣ

ಕಾಟಣ್ಣ : ಜೈ ಹಾಲು ಅಧ್ಯಕ್ಷರಿಗೆ, ಜೈ ಜೈ ಹಾಲು ಅಧ್ಯಕ್ಷರಿಗೆ—-

ಮೋಟಣ್ಣ : ಪೋರಾ ಅಕ್ಕಡ ರೋಡಿಕಿ, ಡ್ಯಾನ್ಸ್ ಸೇಯಿ—-( ಹೋಗೋ ಆ ಕಡೆ ರೋಡಿಗೆ ಹೋಗಿ ಡ್ಯಾನ್ಸ್ ಮಾಡು)

-ವೆಂಕಟ್

Leave a Reply

Your email address will not be published. Required fields are marked *