ಪಶುವಿನಿಂದ ಪಶುಪತಿಯೆಡೆಗಿನ ಪಯಣವೇ ಯೋಗ

ತುಮಕೂರು: ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಶ್ರೀ ಹೆಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದ ಆವರಣದಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಈ ಯೋಗ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪುನೀತ್.ಕೆ ಮತ್ತು ತುಮಕೂರಿನ ಶ್ರೀ ರಂಗ ಅಕಾಡೆಮಿ ಆಫ್ ಯೋಗದ ವೈಯಕ್ತಿಕ ತರಬೇತಿಗಾರ್ತಿ ಗೀತಾ ಟಿ.ಎನ್ ಸೇರಿ ಯೋಗದ ಆಸನಗಳ ಮಹತ್ವ ತಿಳಿಸುತ್ತ ಕೆಲವು ಪ್ರಮುಖ ಆಸನಗಳನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.

ಶ್ರೀ ರಂಗ ಅಕಾಡೆಮಿ ಆಫ್ ಯೋಗದ ಅಡ್ವಾನ್ಸ್ ಟ್ರೈನರ್ ಹರ್ಷಿತಾ .ಎ ಮತ್ತು ಅವರ ಮಗಳು ಲೋಹಿನಿ ಸಿಂಚನ ಇಬ್ಬರೂ ಜೊತೆಗೂಡಿ ಹಾಡಿಗೆ ಯೋಗಾಸನದ ಮೂಲಕ ವಿಶೇಷ ಪ್ರದರ್ಶನ ನೀಡಿದರು.
ಡಾ.ಪುನೀತ್.ಕೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗ ಎಂಬುದು ಪಶುವಿನಿಂದ ಪಶುಪತಿಯೆಡೆಗೆ ಸಾಗುವ ಪಯಣವಾಗಿದೆ. ಪ್ರತಿದಿನ ಯೋಗ ಮಾಡುವುದರಿಂದ ನಮ್ಮ ಶರೀರದಲ್ಲಿ ಸಾಕಷ್ಟು ಬದಲಾವಣೆಗಳಾಗಿ ನಮ್ಮ ಮೇಲೆ ನಾವು ನಿಯಂತ್ರಣ ಸಾಧಿಸಬಹುದಾಗಿದೆ. ಇದರಿಂದ ಅಹಂ ಬ್ರಹ್ಮಾಸ್ಮಿ ಎಂಬಂತೆ ನಾವು ದೇವರಲ್ಲಿ ಒಬ್ಬರಾಗಬಹುದು ಎಂದು ತಿಳಿಸಿದರು.

  ಈ ಕಾರ್ಯಕ್ರಮದಲ್ಲಿ ಸಾಹೇ ಉಪಕುಲಪತಿ ಡಾ.ಲಿಂಗೇಗೌಡ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್.ಪ್ರಭಾಕರ್, ಡಾ.ಗೀತಾ, ಡಾ.ವೀಣಾ ಸೇರಿದಂತೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಯೋಗ ಮಾಡಿದರು.

Leave a Reply

Your email address will not be published. Required fields are marked *