“ಕನ್ನಡ ಪದ ಹಾಡೋಣ, ಕನ್ನಡ ಪದ ಕೇಳೋಣ”

ತುಮಕೂರು.ಸ್ವರಸಿಂಚನ ಸುಗಮ ಸಂಗೀತ, ಜನಪದ ಕಲಾ ಸಂಸ್ಥೆ ತುಮಕೂರು ಇವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ 2024ರ ಜನವರಿ 03ರ ಮದ್ಯಾಹ್ನ 1 ಗಂಟೆಗೆ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಶಿವಮೂರ್ತಿ ಮುರುಘಾ ರಾಜೇಂದ್ರ ಸಭಾಂಗಣದಲ್ಲಿ “ಕನ್ನಡ ಪದ ಹಾಡೋಣ, ಕನ್ನಡ ಪದ ಕೇಳೋಣ” ಎಂಬ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡದ ಪದ ಹಾಡೋಣ, ಕನ್ನಡದ ಪದ ಕೇಳೋಣ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ ಅವರು ಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ಅನನ್ಯ ಇನ್‍ಸ್ಟಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್‍ಮೆಂಟ್ ಇದರ ಅಧ್ಯಕ್ಷರಾದ ಸಿ.ಎ.ವಿಶ್ವನಾಥ್ ವಹಿಸಲಿದ್ದಾರೆ.ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ.ಕರಾಳೆ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ.ಲಕ್ಷ್ಮಣದಾಸ್ ಗೌರವ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಅನನ್ಯ ಇನ್‍ಸ್ಟಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್‍ಮೆಂಟ್‍ನ ಉಪಾಧ್ಯಕ್ಷರಾದ ಬಿ.ಆರ್.ಉಮೇಶ್,ಎಪಿಎಂಸಿಯ ಮಾಜಿ ಅಧ್ಯಕ್ಷರಾದ ಕೊಂಡಜ್ಜಿ ವಿಶ್ವನಾಥ್,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್,ಸಾ.ಚಿ.ರಾಜಕುಮಾರ್, ಸಿ.ಸಿ.ಪಾವಟೆ ಅವರುಗಳು ಭಾಗವಹಿಸುವರು. ಕಾರ್ಯಕ್ರಮವನ್ನು ನಿರೂಪಕಿ ಹಾಗೂ ಗಾಯಕಿ ಶ್ರೀಮತಿ ಅಶ್ವಿನಿ ಅವರು ನಿರೂಪಿಸುವರು.

ಕನ್ನಡ ಪದ ಹಾಡೋಣ, ಕನ್ನಡ ಪದ ಕೇಳೋಣ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರೀಸಾಯಿರಾಮ ನೃತ್ಯಕೇಂದ್ರದ ಶ್ರೀಮತಿ ರತಿಕಾ ಸಾಗರ್ ಅವರಿಂದ ಸುಗ್ಗಿ ಸಂಭ್ರಮ ನೃತ್ಯ, ದಿಶಾ ಜೈನ್, ಶ್ರೀಮತಿ ಅಶ್ವಿನಿ ಮತ್ತು ಬಳಗದಿಮದ ಸುಗಮ ಸಂಗೀತ ಗಾಯನ, ಮಧುಗಿರಿ ತಾಲೂಕು ಮಲ್ಲನಾಯಕನಹಳ್ಳಿಯ ದ್ಯಾವರಪ್ಪ ಮತ್ತು ಬಳಗದಿಂದ ತತ್ವಪದಗಳು, ಗಾಯಕಿ ಮೀರಾ ಕೇಶವರಾಜ್ ಅವರಿಂದ ಜಾನಪದ ಗಾಯನ, ಕಲಾಶ್ರೀ ಡಾ.ಲಕ್ಷ್ಮಣದಾಸ್ ಅವರಿಂದ ರಂಗಗೀತೆ, ವೀರೇಂದ್ರ ತಂಬಾಡಿ ಅವರಿಂದ ಮ್ಯಾಂಡೋಲಿನ್ ವಾದನ, ಕೇಶವರಾಜ್ ಅವರಿಂದ ಕೊಳಲು ವಾದನ ನಡೆಯಲಿದೆ ಎಂದು ಸ್ವರಸಿಂಚನ ಸುಗಮ ಸಂಗೀತ, ಜನಪದ ಕಲಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಕೆಂಕೆರೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *