ತುಮಕೂರು : ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಮತ್ತು ತುಮಕೂರು ಜನಪರ ಚಳುವಳಿಗಳ ಒಕ್ಕೂಟದ ಸಹಯೋಗದಲ್ಲಿ ಪಠ್ಯಪುಸ್ತಕ ಪರಿಸ್ಕರಣೆ ಕುರಿತು ಸಂವಾದವನ್ನು ಜುಲೈ ೯ರಂದು ಸಂಜೆ ೪ ಗಂಟೆಗೆ ಬಿ.ಹೆಚ್.ರಸ್ತೆಯ ಸಿದ್ದಗಂಗಾ ಆಸ್ಪತ್ರೆ ಎದುರಿನ ದ್ವಾರಕ ರೆಸಿಡೆನ್ಸಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಪ್ರೊ.ಎಲ್.ಎನ್.ಮುಕುಂದರಾಜ್, ಲೇಖಕಿ ಡಾ.ಬಿ.ಸಿ.ಶೈಲಾ ನಾಗರಾಜ್, ಕುವೆಂಪು ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಡಾ|| ಹೆಚ್.ಎನ್.ರವೀಂದ್ರ, ಕುವೆಂಪು ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜು ವಿಷಯ ಮಂಡನೆಯನ್ನು ಮಾಡಲಿದ್ದು, ಚಿಂತಕ ಪ್ರೊ.ಕೆ.ದೊರೈರಾಜ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.