ಆಟಿಕೆ ಮಾರಾಟ ನೆಪದಲ್ಲಿ ಬೀಗ ಹಾಕಿದ ಮನೆಗಳ ದೋಚುತ್ತಿದ್ದ ಕಳ್ಳರು ಸೇರಿದಂತೆ ೧೫ ಮಂದಿ ಕಳ್ಳರ ಬಂಧನ

ತುಮಕೂರು : ಆಟಿಕೆಗಳ ಮಾರಾಟಗಾರರಂತೆ ಮನೆಗಳ್ಳತನ ಮಾಡಿದವರು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಡವೆ ಹಣ ಕಳ್ಳತನ ಮಾಡಿದವರು ಮತ್ತು ಒಡವೆ ಅಂಗಡಿಗೆ ಒಡವೆ ತರುತ್ತಿದ್ದವರೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಕಳ್ಳರು ಸೇರಿದಂತೆ ನಗರ ಪೊಲೀಸ್ ಠಾಣೆ, ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮತ್ತು ಜಯನಗರ ಪೊಲೀಸ್ ಠಾಣೆಯ ಪೊಲೀಸರು ೧೫ಜನರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಆವರು ತಿಳಿಸಿದರು.

ವೆಂಕಟೇಶ ಅಲಿಯಾಸ್ ವೆಂಕಿ ಮತ್ತು ಹರೀಶ್ ಅಲಿಯಾಸ್ ಹರಿ

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶೆಟ್ಟಿಹಳ್ಳಿಯ ರಿಂಗ್ ರಸ್ತೆಯಲ್ಲಿರುವ ಸಿಮೆಂಟ್ ಮನೆಯ ಬೀಗ ಮುರಿದು ೩ ಲಕ್ಷ ನಗದು, ೨,೨೦,೫೦೦ ರೂಗಳ ಒಡವೆ ಕಳ್ಳತನ ಮಾಡಿದ್ದ ಬೆಂಗಳೂರಿನ ವೆಂಕಟೇಶ ಅಲಿಯಾಸ್ ವೆಂಕಿ ಮತ್ತು ಹರೀಶ್ ಅಲಿಯಾಸ್ ಹರಿ ಎಂಬುವವರನ್ನು ತಿಲಕ್ ಪಾರ್ಕ್ ಸಿಪಿಐ ಬಿ.ನವೀನ್ ನೇತೃತ್ವದಲ್ಲಿ ಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟ್ರ್ ಬಿ.ಸಿ ಮಂಜುನಾಥ್ ನೇತೃತ್ವದ ತಂಡ ಬಂಧಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆಟಿಕೆಗಳನ್ನು ಮಾರುತ್ತಿದ್ದ ರಾಜಸ್ಥಾನದವರು ಮಹಿಳೆಯರನ್ನು ಬಿಟ್ಟು ಯಾರು ಮನೆಗಳಿಗೆ ಬೀಗ ಹಾಕಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡು ಹಗಲು ವೇಲೆಯಲ್ಲಿಯೆ ಬೀಗ ಹೊಡೆದು ಕಳ್ಳತನ ಮಾಡುತ್ತಿದ್ದ ೮ ಮಂದಿ ರಾಜಸ್ಥಾನಿಗಳನ್ನು ತಿಲಕ್ ಪಾರ್ಕ್ ಸಿಪಿಐ ಬಿ.ನವೀನ್ ನೇತೃತ್ವದಲ್ಲಿ ಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟ್ರ್ ಬಿ.ಸಿ ಮಂಜುನಾಥ್ ನೇತೃತ್ವದ ತಂಡ ಬಂಧಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆಟಿಕೆಗಳನ್ನು ಮಾರುತ್ತಿದ್ದ ರಾಜಸ್ಥಾನದವರು

ಬಂಧಿತರನ್ನು ರಾಜಸ್ಥಾನದ ಕಾಲು, ಶಂಕರ್, ಮುಖೇಶ್, ನಂದನ್, ಜಗದೀಶ್, ರಾಮ್‌ದಾಸ್, ಸೀತಾ, ಹಾಗೂ ಕಾಂತಾ ಬಾಯಿ ಎಂದು ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇವರು ತುಮಕೂರು ನಗರದ ಶಾಂತಿ ನಗರದ ಪುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದರು.

ಇವರಿಂದ ೪೮ ಗ್ರಾಂ ಚಿನ್ನದ ಒಡವೆಗಳನ್ನು ಮತ್ತು ೩ಕೆ.ಜಿ. ೫೬೦ ಗ್ರಾಮ ಬೆಳ್ಳಿಯ ವಡವೆಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸದರು.

ಮೇ ೫ರಂದು ರಾತ್ರಿ ೧೦.೨೦ರ ಸಮಯದಲ್ಲಿ ಎಂ.ಜಿ.ರಸ್ತೆಯ ೩ನೇ ಕ್ರಾಸ್‌ನಲ್ಲಿ ಸಿದ್ದರಾಜು ಎಂಬುವವರು ಬೆಂಗಳೂರಿನಿಂದ ಆರ್ಡರ್ ಕೊಟ್ಟಿದ್ದ ಒಡವೆಗಳನ್ನು ತರುತ್ತಿದ ವೇಳೆ ಬೈಕಿನಲ್ಲಿ ಬಂದ ಮಹಾರಾಷ್ಟç ಸಾಂಗ್ಲಿಯ ದಿಗಂಬರ್ ಕಿರಣ್ ಕುಂಡ್ಲಿಕ್ ಸುಳೆ, ಸಿದ್ದನಾಥ ರಾಮಚಂದ್ರ ಪಡಲ್ಕರ್, ಹರ್ಷವರ್ಧನ್ ಬಾಳಿರಾ ಮಾನೆ , ವಿವೇಖ್ ದೌಲತ್ ರಾವ್ ಮೆಟ್ ಕರಿ ಮತ್ತು ಮತ್ತೊಬ್ಬ ಬಾಲಕನನ್ನು ಬಂಧಿಸಿ ದೋಚಿದ್ದ ಒಡವೆಗಳನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.

ಈ ಮೂರು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಪೊಲೀಸ್ ಸಿಬ್ಬಂದಿಯನ್ನು ಕೇಂದ್ರ ವಲಯದ ಐ.ಜಿ.ಪಿ.ಯವರು ಅಭಿನಂದಿಸಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ಜೆ.ಉದೇಶ್, ನಗರ ಡಿವೈಎಸ್ಪಿ ಹೆಚ್.ಶ್ರೀನಿವಾಸ್ ಇದ್ದರು.

Leave a Reply

Your email address will not be published. Required fields are marked *