ತುಮಕೂರು:ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ವಿಪ್ ಆಶ್ರಯದಲ್ಲಿ ಇದೇ 24 ಮತ್ತು 25 – ರಂದು ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಮಾದರಿ ಪ್ರದರ್ಶನ ಟೆಕ್ನೋಡಿಯಾ-22 ಹಾಗೂ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಜೇತರಿಗೆ 1.5 ಲಕ್ಷ ನಗದು ಬಹುಮಾನ ದೊರೆಯಲಿದೆ.
ಈ ಸ್ಪರ್ಧೆಯು ಇಂಜಿನಿಯರಿಂಗ್ ಪದವಿ(ಬಿ-ಟೆಕ್), ಸ್ನಾತಕೋತ್ತರ ಪದವಿ (ಎಂ-ಟೆಕ್) ಹಾಗೂ ಎಸಿಎ ವಿದ್ಯಾರ್ಥಿಗಳಿಗಾಗಿ 3 ವಿಭಾಗಗಳಲ್ಲಿ ನಡೆಯಲಿದೆ. ಎಥೋಪಿಯ ದೇಶ ಹಾಗೂ ಕೇರಳ, ತಮಿಳನಾಡು, ಆಂದ್ರಪ್ರದೇಶ ರಾಜ್ಯಗಳು ಸೇರಿದಂತೆ ಅನೇಕ ಇಂಜಿನಿಯರಿಂಗ್ ಕಾಲೇಜಿನಿಂದ ಸುಮಾರು 250ಕ್ಕೂ ಹೆಚ್ಚು ತಾಂತ್ರಿಕ ಪ್ರಾಜೆಕ್ಟ್ ಮಾದರಿಗಳೊಂದಿಗೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಹಿಸುತ್ತಿದ್ದಾರೆ. ಸ್ಪರ್ಧೆವಿಜೇತರಿಗೆ 1.5 ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ.
2 ದಿನಗಳ ಈ ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ಪ್ರದರ್ಶನದ ಜೊತೆಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಪಿಯು ವಿದ್ಯಾರ್ಥಿಗಳಿಗಾಗಿ ಕಾಲೇಜು ಕುರಿತು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಟೆಕ್ನೋಡಿಯಾ-22ದ ಅಧ್ಯಕ್ಷರು ಹಾಗೂ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಅಧ್ಯಕ್ಷರಾದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಮತ್ತು ಸಂಯೋಜಕರಾದ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಲ್.ಸಂಜಿವ್‍ಕುಮಾರ್, ಅವರು ತಿಳಿಸಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ಸಂಚಾಲಕರಾದ ಡಾ.ಚಿದಾನಂದಮೂರ್ತಿ ಡಾ.ಬಿ.ಕೆ.ಚೇತನ್ ಮತ್ತು ಗುರುಪ್ರಸಾದ್ ಅವರನ್ನು 9844457597 ಹಾಗೂ 9980300800 ಅವರನ್ನು ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.