ಕಾಂಗ್ರೆಸ್ ಪಕ್ಷಕ್ಕೆ ಚ್ಯುತಿ ತರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ-ಕಾಂಗ್ರೆಸ್‍ನಿಂದ ಪ್ರತಿಭಟನೆ


ತುಮಕೂರು:ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಷೇರು ವಿಕ್ರಯ ಪ್ರಕರಣವನ್ನು ಮುಂದಿಟ್ಟುಕೊಂಡು ಐ.ಟಿ, ಈಡಿಗಳ ಮೂಲಕ ಕೆದಕಿ,ಕಾಂಗ್ರೆಸ್ ಪಕ್ಷಕ್ಕೆ ಚ್ಯುತಿ ತರುವ ಕೆಲಸವನ್ನು ಕೇಂದ್ರದ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿ,ರಾಷ್ಟ್ರಪತಿಗಳ ಮದ್ಯಪ್ರವೇಶಕ್ಕೆ ಒತ್ತಾಯಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ,ನಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲ.ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ನಡೆದು,ಇತ್ಯರ್ಥವಾಗಿದ್ದರೂ ಸಹ ಪದೇ ಪದೇ ನೋಟಿಷ್ ನೀಡಿ,ಜನರ ಮನಸ್ಸಿನಲ್ಲಿ ಕಾಂಗ್ರೆಸ್ ನಾಯಕರ ವಿರುದ್ದು ತಪ್ಪು ಭಾವನೆ ಬರುವಂತೆ ನಡೆದುಕೊಳ್ಳುತ್ತಿದೆ.ಇದು ಖಂಡನೀಯ.ರಾಹುಲ್‍ಗಾಂಧಿ ಯಾವುದೇ ಅತ್ಯಾಚಾರ,ಅನಾಚಾರದಂತಹ ಕೃತ್ಯಗಳನ್ನು ಎಸೆಗಿಲ್ಲ.ದಿನೇ ದಿನೆ ಜನಸಾಮಾನ್ಯರಲ್ಲಿ ಅವರ ಬಗ್ಗೆ ಒಳ್ಳೆಯ ಭಾವನೆಗಳು ಮೂಡುತ್ತಿರುವುದನ್ನು ಸಹಿಸಲಾಗದೆ ಬಿಜೆಪಿ ಕುತಂತ್ರದ ಮೂಲಕ ಹಣಿಯಲು ಹೊರಟಿದೆ.ಇಡಿ,ಐಟಿ ದುರ್ಬಳಕೆಯನ್ನು ಖಂಡಿಸಿ,ಇಂದು ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಂಡಿದ್ದು,ಮುಂದಿನ ದಿನಗಳಲ್ಲಿ ಇದೇ ರೀತಿ ಕಿರುಕುಳ ಮುಂದುವರೆದರೆ ಮತ್ತಷ್ಟು ಹೋರಾಟ ತೀವ್ರಗೊಳ್ಳಲಿದೆ ಎಂದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ನ್ಯಾಷನಲ್ ಹೆರಾಲ್ಡ್‍ಗೂ ಕಾಂಗ್ರೆಸ್ ಪಕ್ಷಕ್ಕೂ ಒಂದು ಸಂಬಂಧವಿದೆ.ಇದು ನಮ್ಮ ಮನೆಯ ವ್ಯವಹಾರ.ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಹಾಗಿದ್ದರೂ ಸರಕಾರದ ವೈಫಲ್ಯಗಳನ್ನು ಮುಚ್ಚಿಡಲು ಈ ರೀತಿಯ ತಂತ್ರಗಾರಿಕೆಯನ್ನು ಬಳಸುತ್ತಿದೆ.ಸಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿಯನ್ನು ದುಬರ್ಳಕೆ ಮಾಡಿಕೊಂಡು,ದಿನಕ್ಕೆ 18 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನೆಪದಲ್ಲಿ ಟಾರ್ಚರ್ ಮಾಡಿ,ನಮ್ಮ ನಾಯಕರ ಮನಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲು ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಮುರುಳೀಧರ ಹಾಲಪ್ಪ,ಸ್ವಾತಂತ್ರ ಹೋರಾಟದ ವಿಚಾರಗಳು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ನೆಹರು ಸೇರಿದಂತೆ ಹಲವು ಮುಖಂಡರು ಸ್ಥಾಪಿಸಿದ್ದರು.ಇಂದು ಸಂಕಷ್ಟದ ಸ್ಥಿತಿ ಎದುರಿಸಿದಾಗ 90 ಕೋಟಿ ರೂಗಳ ಸಹಾಯವನ್ನು ಕಾನೂನು ರೀತಿಯಲ್ಲಿ ಒದಗಿಸಲಾಗಿತ್ತು.ಇದನ್ನೇ ತಪ್ಪು ಎಂದು ಹೇಳುತ್ತಿರುವ ಬಿಜೆಪಿ ಪದೇ ಪದೇ ಇಡಿ,ಐಟಿ ಮೂಲಕ ರಾಹುಲ್‍ಗಾಂಧಿ,ಸೋನಿಯಾಗಾಂಧಿ ಸೇರಿದಂತೆ ಹಲವು ನಾಯಕರಿಗೆ ಕಿರುಕುಳ ನೀಡುವ ಮೂಲಕ ಅವರ ವಚ್ರ್ಚಸ್ಸು ಕಡಿಮೆ ಮಾಡಲು ನೋಡುತ್ತಿದೆ.ಅಲ್ಲದೆ ಎಲ್ಲಾ ರಂಗದಲ್ಲಿಯೂ ವಿಫಲವಾಗಿರುವ ಬಿಜೆಪಿ ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಎದುರಿಸಲು ಶಕ್ತಿ ಇಲ್ಲದೆ, ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಆರೋಪಿಸಿದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಲು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ,ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಕೆಂಚಮಾರಯ್ಯ, ಎಸ್.ಷಪಿ ಅಹಮದ್,ಮುಖಂಡರಾದ ನರಸೀಯಪ್ಪ,ಆಟೋರಾಜು,ಸಂಜೀವಕುಮಾರ್,ಮೆಹಬೂಬ್ ಪಾಷ,ಪಾಲಿಕೆ ಸದಸ್ಯರು ಗಳಾದ ನಯಾಜ್ ಅಹಮದ್,ಜೆ.ಕುಮಾರ್,ಓಬಿಸಿ ಸೆಲ್ ಅಧ್ಯಕ್ಷ ಪುಟ್ಟರಾಜು, ತರುಣೇಶ್, ನಟರಾಜಶೆಟ್ಟಿ,ಚಂದ್ರಶೇಖರಗೌಡ, ರೇವಣ ಸಿದ್ದಯ್ಯ,ಸಿಮೆಂಟ್ ಮಂಜುನಾಥ್,ಕೆಂಪಣ್ಣ,ಎಂ.ವಿ.ರಾಘವೇಂದ್ರ,ಸುಮುಖ್ ಕೊಂಡವಾಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *