ವರದಿ:ಸಲಿಂಪಾಶ, ಗುಬ್ಬಿ.
ಗುಬ್ಬಿ : ಕೆ.ಎಸ್.ಆರ್.ಟಿ.ಸಿ. ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಡೊಡ್ಡಗುಣಿ ಸಮೀಪದ ಶಿವಸಂದ್ರ ಗೇಟ್ ಬಳಿ ಸಂಭವಿಸಿದೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ಕಾರಿನಲ್ಲಿದ್ದ ಗಿರೀಶ್(37ವರ್ಷ) ಮತ್ತು ಮಾನ್ಯ (17ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತದ ರಭಸಕ್ಕೆ ಈ ಇಬ್ಬರ ದೇಹಗಳು ಛಿದ್ರ-ಛಿದ್ರಗೊಂಡಿವೆ. ಬಸ್ಸಿನಲ್ಲಿದ್ದ 10 ಮಂದಿಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಗುಬ್ಬಿ ಮತ್ತು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
ಸ್ಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಕೇಸು ದಾಖಲಿಸಿದ್ದಾರೆ.
ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಬಸ್ಸಿನ ಮುಂಭಾಗದ ಚಕ್ರಗಳು ಮುರಿದು ರಸತೆಯಲ್ಲಿ ಬಿದ್ದಿದ್ದರೆ, ಕಾರಿನ ಚೂರೂಗಳು 10ಮೀಟರಿಗೂ ದೂರ ಸಿಡಿದು ಬಿದ್ದಿವೆ. ಅಪಘಾತದಿಂದ ಕೆಲ ಕಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.