ನಮ್ಮ ಜನರು ಎಂದಿಗೂ ತಂದೆ, ತಾಯಿಯಲ್ಲಿ,ಗುರುಗಳಲ್ಲಿ ದೇವರನ್ನು ಕಾಣಲಿಲ್ಲ.ಒಂದು ವೇಳೆ ಹಾಗೇ ದೇವರನ್ನು ಕಂಡಿದ್ದರೆ,ಇಂದು ದೇಶದಲ್ಲಿ ವೃದ್ದಾಶ್ರಮಗಳೇ ಇರುತ್ತಿರಲಿಲ್ಲ.ಬುದ್ದ,ಬಸವಣ್ಣ,ಅಂಬೇಡ್ಕರ್ ಅವರನ್ನು ಮರೆತಿದ್ದೇ ಇಂದಿನ ದುಸ್ಥಿತಿಗೆ ಕಾರಣ ಎಂದ ಶ್ರೀನಿಜಗುಣಾನಂದಶ್ರೀಗಳು,ಈ ದೇಶದ ಭವಿಷ್ಯವಿರುವುದೇ ಬುದ್ದ,ಬಸವಣ್ಣ, ಅಂಬೇಡ್ಕರ್ ಅವರ ತತ್ವಗಳ ಮೇಲೆ ನಿಂತಿದೆ. ಆ ದಿಕ್ಕಿನತ್ತ ನಾವೆಲ್ಲರೂ ಸಾಗೋಣ,ಸ್ವಾತಂತ್ರ ತಲೆಗಳಾಗಿ ಬದುಕೋಣ ಎಂದು ಕಿವಿ ಮಾತು ಹೇಳಿದರು.
ಅವರು ಮೇ 1ರ ಭಾನುವಾರ ನಗರದ ಏಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ವಿವಿಧ ಪ್ರಗತಿಪರ,ದಲಿತ ಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಮ್ಮ ಕಷ್ಟಗಳಿಗೆ ದೇವರು ಪರಿಹಾರ ನೀಡುತ್ತಾನೆ ಎಂಬುದಾಗಿದ್ದರೆ, ಸಾಲ ಮಾಡಿಕೊಂಡ ರೈತರು,ಸಾಲ ಮನ್ನಾಕ್ಕಾಗಿ ದೇವರ ಮುಂದೆ ಬೇಡುವ ಬದಲು ಸರಕಾರಗಳಿಗೆ ಮನವಿ ಸಲ್ಲಿಸುವ ಅಗತ್ಯವೆನ್ನಿತ್ತು ಎಂದು ಪ್ರಶ್ನಿಸಿದರು.
ಇಂದು ದೇವರು ಎಂಬುದು ಒಂದು ಉದ್ಯೋಗವಾಗಿದೆ.ಜನತೆಗೆ ಇನ್ನಿಲ್ಲದ ಭಯ ಹುಟ್ಟಿಸಿ, ಅವರಿಂದು ಒಂದಿಲೊಂದು ಪೂಜೆ ಮಾಡಿಸಿ, ತಾವು ಹೊಟ್ಟೆ ಹೊರೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ.ಇದನ್ನು ಅರಿಯದೆ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ,ಪುನಸ್ಕಾರಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.ಮೈಮೇಲೆ ಬರುವ ದೇವರುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ.ಅದರಲ್ಲಿಯೂ ಕೆಳವರ್ಗದವರ ಮೇಲೆ ದೇವರುಗಳ ಬರುತ್ತಿರುವುದು ದುರದೃಷ್ಟಕರ ಎಂದರು.
ರಾಜ್ಯ ಸಭಾ ಸದಸ್ಯರಾದ ಎಲ್. ಹನುಮಂತಯ್ಯ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ದೊರೆರಾಜು ವಹಿಸಿದ್ದರು.ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರÀ್ಪ,ಶಿವಶಂಕರ್,ಇಕ್ಬಾಲ್ ಅಹಮದ್, ನರಸೀಯಪ್ಪ, ಪ್ರಭಾವತಿ ಸುಧೀರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು