ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಬಿಜೆಪಿಯ ಅಮಾನತುಗೊಂಡ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ದೇಶದ ಕ್ಷಮೆಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಕಟು ಮಾತುಗಳಲ್ಲಿ ಹೇಳಿದೆ.
ಅಲ್ಲದೇ ದೇಶಾದ್ಯಂತ ನಡೆಯುತ್ತಿರುವ ಎಲ್ಲಾ ಕೋಲಾಹಲಗಳಿಗೆ ಈ ಮಹಿಳೆಯೇ ಕಾರಣ ಎಂದು ಎಂದು ಸುಪ್ರೀಂಕೋರ್ಟ್ ಕಾರವಾಗಿ ಹೇಳಿದೆ.
ಈ ರೀತಿಯ ಟೀಕೆಯನ್ನು ಮಾಡುವ ನೂಪುರ್ ಶರ್ಮಾ ಉದ್ದೇಶವಾದರೂ ಏನಿತ್ತು..? ಈ ಮಹಿಳೆಯು ನೀಡಿದ ಹೇಳಿಕೆಯು ದೇಶಾದ್ಯಂತ ಕೋಮು ಗಲಭೆಯನ್ನು ಹುಟ್ಟು ಹಾಕಿದೆ. ಇಂದು ದೇಶದಲ್ಲಿ ಏನಾಗುತ್ತಿದೆಯೋ ಇವೆಲ್ಲದ್ದಕ್ಕೂ ಈ ಏಕೈಕ ಮಹಿಳೆ ಹೊಣೆಯಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೆಪಿ ಪರ್ದಿವಾಲಾ ನೇತೃತ್ವದ ನ್ಯಾಯಪೀಠ ಹೇಳಿದೆ. ತಮ್ಮ ಮೇಲಿರುವ ಎಲ್ಲಾ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ನೂಪುರ್ ಶರ್ಮಾ ಸಲ್ಲಿಸಿರುವ ಮನವಿಯನ್ನು ಆಲಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೂಪುರ್ ಶರ್ಮಾ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನೂಪುರ್ ಶರ್ಮಾ ನಾಲಿಗೆ ಮೇಲೆ ಹಿಡಿತ ಕಳೆದುಕೊಂಡ ಪರಿಣಾಮ ಇಂದು ಇಡೀ ದೇಶ ಹೊತ್ತಿ ಉರಿಯುತ್ತಿದೆ. ಉದಯಪುರದಲ್ಲಿ ಹಾಡ ಹಗಲೇ ಇಬ್ಬರು ವ್ಯಕ್ತಿಗಳು ಟೈಲರ್ನ್ನು ಬರ್ಬರವಾಗಿ ಕೊಲೆಯಾಗಿರುವುದು ಇದೇ ಮಹಿಳೆ ನೀಡಿರುವ ಹೇಳಿಕೆಯಿಂದ ಎಂಬುದು ದುರದೃಷ್ಟಕರ ಎಂದು ಸುಪ್ರೀಂ ಕೋರ್ಟ್ ಅಸಮಾಧನ ವ್ಯಕ್ತೊಡಿಸಿದೆ.
ನೂಪುರ್ ಶರ್ಮಾ ಸುಪ್ರೀಂ ಕೋರ್ಟ್‌ನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿದ್ದರು ಮತ್ತು “ನಿರಂತರ ಬೆದರಿಕೆಗಳಿಂದ ತಮ್ಮ ಜೀವಕ್ಕೆ ಅಪಾಯವಿದೆ” ಎಂದು ತಮ್ಮ ವಿರುದ್ಧದ ವಿವಿಧ ರಾಜ್ಯಗಳಲ್ಲಿನ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲು ಒತ್ತಾಯಿಸಿದ್ದರು. ವಿವಿಧ ರಾಜ್ಯಗಳಿಂದ ನನಗೆ ನಿರಂತರವಾಗಿ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ ಎಂದೂ ನೂಪುರ್ ಶರ್ಮಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ .