ನಾಗರಿಕ ಸಮಾಜದಲ್ಲಿ ಸಾಮಾಜಿಕ ಚಳವಳಿಗಳು : ಸಂವಾದ

ತುಮಕೂರು : ತುಮಕೂರು ನಾಗರಿಕ ವೇದಿಕೆ ವತಿಯಿಂದ ಸದಾ ಜನಪರವಾಗಿ ಚಿಂತಿಸುವ 75 ವಸಂತಗಳನ್ನು ಪೂರೈಸಿದ ಪ್ರೊ. ಕೆ.ದೊರೈರಾಜ್ ಮತ್ತು ಚಳವಳಿಯ ಭಾಗವಾಗಿ ರಾಜ್ಯದಿಂದ ರಾಷ್ಟ್ರಮಟ್ಟಕ್ಕೆ ತೆರಳಿದ ಕೆ.ಎನ್. ಉಮೇಶ್‍ರವರಿಗೆ ಅಭಿನಂದನಾ ಸಮಾರಂಭದ ಅಂಗವಾಗಿ ನಾಗರಿಕ ಸಮಾಜದಲ್ಲಿ ಸಾಮಾಜಿಕ ಚಳವಳಿಗಳು : ಸಂವಾದ ಕಾರ್ಯಕ್ರಮವನ್ನು ಜುಲೈ10ರ ಭಾನುವಾರ ಸಾಯಂಕಾಲ : 4 ಗಂಟೆಗೆ ಟೌನ್‍ಹಾಲ್ ಸರ್ಕಲ್‍ನ ಐ.ಎಂ.ಎ. ಸಂಭಾಗಣ, ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಾ.ಹ. ರಮಾಕುಮಾರಿ, ಅಧ್ಯಕ್ಷರು ನಿವೃತ್ತ ನೌಕರರ ಸಂಘ ಹಾಗೂ ನಿಕಟಪೂರ್ವ ಅಧ್ಯಕ್ಷರು ಕ.ಸಾ.ಪ ಇವರು ನೇರವೇರಿಸುವರು.

ಅನುಭವದ ಮಾತುಗಳನ್ನು ಪ್ರೊ. ಕೆ. ದೊರೈರಾಜ್‍, ನಿವೃತ್ತ ಜಂಟಿ ನಿರ್ದೇಶಕರು, ಪ.ಪೂ.ಶಿಕ್ಷಣ ಇಲಾಖೆ ಮತ್ತು ಕೆ.ಎನ್. ಉಮೇಶ್, ಸಿಐಟಿಯು ಅಖಿಲ ಭಾರತ ಮುಖಂಡರು, ನವದೆಹಲಿ
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಡಾ. ರಮೇಶ .ಎಸ್, ಪ್ರಾಂಶುಪಾಲರು, ಸುಫಿಯಾ ಕಾನೂನು ಕಾಲೇಜು, ತುಮಕೂರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಕೆ.ಎಸ್.ಎಲ್.ಯು, ಹುಬ್ಬಳ್ಳಿ ಇವರು ಭಾಗವಹಿಸುವರು ಅಧ್ಯಕ್ಷತೆಯನ್ನು ಪ್ರೊ. ಡೊಮಿನಿಕ್ ಡಿ, ಕುಲಸಚಿವರು (ಪರೀಕ್ಷಾಂಗ), ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು ವಹಿಸುವರು.

ಪ್ರೊ. ಕೆ. ದೊರೈರಾಜ್‍

ಬಾಲ್ಯದಲ್ಲಿಯೇ ಶಿಕ್ಷಣ ಸಂಘಟನೆ ಹೋರಾಟದ ಬಗ್ಗೆ ಸಾಕಷ್ಟು ಒಲವನ್ನು ಹೊಂದಿದ್ದ ಪ್ರೊ. ಕೆ ದೊರೈರಾಜ್‍ರವರು, ಬಾಲ್ಯದಲ್ಲಿಯೇ ಹಲವಾರು ಚಳವಳಿಗಳನ್ನು ಮುನ್ನಡೆಸಿದವರು ಮತ್ತು ಶಿಕ್ಷಣಕ್ಕೆ ಅಷ್ಟೆ ಒತ್ತನ್ನು ಕೊಟ್ಟವರು ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು. ನಿವೃತ್ತಿಯ ನಂತರ ಹಲವಾರು ಹುದ್ದೆಗಳು ಇವರನ್ನು ಹುಡಿಕಿಕೊಂಡು ಬಂದರು ಅವುಗಳೆಲ್ಲವನ್ನು ನಯವಾಗಿಯೇ ಪಕ್ಕಕ್ಕಿಟ್ಟು ಸಂವಿಧಾನಬದ್ದ, ನ್ಯಾಯಸಮ್ಮತ ಹೋರಾಟಗಳಲ್ಲಿ ಸದಾ ತೊಡಗಿಸಿಕೊಳ್ಳುತ್ತಿದ್ದಾರೆ.
ಚಳವಳಿಗಳನ್ನು ಮತ್ತಷ್ಟು ವಿಸ್ತಾರಗೊಳಿಸಲು ಪ್ರೊ. ಕೆ. ದೊರೈರಾಜ್‍ರವರ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗಿದೆ.

ಕೆ.ಎನ್. ಉಮೇಶ್
ಕೆ.ಎನ್. ಉಮೇಶ್ ವಿದ್ಯಾರ್ಥಿ ದೆಸೆಯಿಂದಲೇ ಚಳವಳಿಗೆ ದುಮುಕಿದ ಇವರು ವಿದ್ಯಾರ್ಥಿ ಸಂಘಟನೆಯ ರಾಜ್ಯ ನಾಯಕರಾಗಿ ಮತ್ತು ಯುವಜನ ಚಳವಳಿಯ ರಾಜ್ಯ ನಾಯಕರಾಗಿ ಹಲವಾರು ಹೋರಾಟಗಳನ್ನು ನಡೆಸಿದವರು ಅದರಲ್ಲೂ ಗ್ರಾಮೀಣ ಕೃಪಾಂಕ ಶಿಕ್ಷಕರ ಹೋರಾಟವನ್ನು ನಡೆಸುವ ಮೂಲಕ ಗ್ರಾಮೀಣ ಕೃಪಾಂಕ ನೌಕರರಿಗೆ ನ್ಯಾಯ ಒದಗಿಸಿಕೊಟ್ಟವರು.
ಕೆ.ಎನ್. ಉಮೇಶ್‍ರವರು ಎಲ್.ಎಲ್.ಎಂ. ಪದವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿ ರಾಜ್ಯಕ್ಕೆ ಕೀರ್ತಿ ತಂದವರು, ಇವರಿಗೆ ಹಲವಾರು ಕಂಪನಿಗಳು ಉದ್ಯೋಗ ನೀಡುವ ಕಾರು, ಬಂಗಲೆ ನೀಡುವ ಭರವಸೆಗಳನ್ನು ನೀಡಿದರೂ ಸಹ ನಯವಾಗಿ ತಿರಸ್ಕರಿಸಿ ಜನತೆಗಾಗಿ ಹೋರಾಟದ ಹಾದಿಯನ್ನು ಆಯ್ಕೆಮಾಡಿಕೊಂಡವರು ಕೆ.ಎನ್. ಉಮೇಶ್ ಪ್ರಸ್ತುತ ಸಿ.ಐ.ಟಿಯು ಕಾರ್ಮಿಕ ಸಂಘಟನೆಯಲ್ಲಿ ರಾಷ್ಟ್ರೀಯ ಮುಖಂಡರಾಗಿ ಕೆಲಸ ಮಾಡುತ್ತಿದ್ದು ಪ್ರಸ್ತುತ ದೆಹಲಿಯಲ್ಲಿದ್ದಾರೆ.

Leave a Reply

Your email address will not be published. Required fields are marked *