ಗಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷ ರು ಹಾಗೂ ಸದಸ್ಯರು ಗಳ ಮಾಸಿಕ ಗೌರವ ಧನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಇತ್ತೀಚೆಗಷ್ಟೇ ಗೌರವ ಧನ, ಕೋವಿಡ್ ನಿಂದ ಮೃತಪಟ್ಟ ಗ್ರಾ.ಪಂ. ನೌಕರರಿಗೆ ಪರಿಹಾರವನ್ನು ಸರ್ಕಾರ ದಿಂದಲೇ ನೀಡುವಂತೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು ಚಲೋ ಮಾಡಲಾಗಿತ್ತು.
ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಳಗಾವಿ ಚಲೋ ಹಮ್ಮಿ ಕೊಳ್ಳುವುದಾಗಿ ಹೇಳಲಾಗಿತ್ತು.
ಅಧ್ಯಕ್ಷರಿಗೆ 3000 ದಿಂದ 6000, ಉಪಾಧ್ಯಕ್ಷ ರುಗಳಿಗೆ 2000ದಿಂದ 4000, ಸದಸ್ಯರು ಗಳಿಗೆ 1000ದಿಂದ 2000 ರೂ.ಗಳಗೆ ಗೌರವಧನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಜಂಟಿ ಕಾರ್ಯದರ್ಶಿ ತಿಳಿಸಿದ್ದಾರೆ.
ಅಭಿನಂದನೆ :-
ಮೈತ್ರಿನ್ಯೂಸ್ ನೊಂದಿಗೆ ಮಾತನಾಡಿದ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ಅವರು, ಕೇರಳ ಮಾದರಿಯನ್ನು ಗ್ರಾ.ಪಂ. ಸದಸ್ಯರ ಗೌರವ ಧನ ಹೆಚ್ಚಿಸಲು ಒತ್ತಾಯಿಸುವುದಾಗಿ ತಿಳಿಸಿದರು.
ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.