ತುಮಕೂರು: ತುಮಕೂರು ನಗರಕ್ಕೆ ಎನ್.ಗೋವಿಂದರಾಜು, ಗುಬ್ಬಿಗೆ ಬಿ.ಎಸ್.ನಾಗರಾಜು ಸೇರಿದಂತೆ ತುಮಕೂರು ಜಿಲ್ಲೆಯ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಜೆಡಿಎಸ್ ವರಿಷ್ಠರಾದ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ತಿಪಟೂರು ಮತ್ತು ಶಿರಾ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ತುಮಕೂರು ನಗರ ಎನ್.ಗೋವಿಂದರಾಜು, ತುಮಕೂರು ಗ್ರಾಮಾಂತರ ಕ್ಷೇತ್ರ ಡಿ.ಸಿ.ಗೌರಿಶಂಕರ್, ಗುಬ್ಬಿ ಬಿ.ಎಸ್.ನಾಗರಾಜು, ಕುಣಿಗಲ್ ಡಿ.ನಾಗರಾಜಯ್ಯ, ತುರುವೇಕೆರೆ ಎಂ.ಟಿ,ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ ಸಿ.ಬಿ.ಸುರೇಶ್‍ಬಾಬು, ಕೊರಟಗೆರೆ ಪಿ.ಸುಧಾಕರ್ ಲಾಲ್, ಮಧುಗಿರಿ ವೀರಭದ್ರಯ್ಯ ಮತ್ತು ಪಾವಗಡಕ್ಕೆ ಕೆ.ಎಂ.ತಿಮ್ಮರಾಯಪ್ಪ ಅವರುಗಳ ಹೆಸರನ್ನು ಘೋಷಣೆ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲು ಇನ್ನೂ 3 ತಿಂಗಳು ಇರುವಾಗಲೇ 9 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಕುತೂಹಲದ ಜೊತೆಗೆ ಅಭ್ಯರ್ಥಿಗಳು ಚುನಾವಣೆ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಈ ಘೋಷಣೆಯನ್ನು ಮಾಡಲಾಗಿದೆ.
ಈ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಅನುಮೋದನೆಯನ್ನು ಪಡೆದು ಜೆಡಿಎಲ್‍ಪಿ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಡಿಸೆಂಬರ್ 19ರ ಸೋಮವಾರ ಬಿಡುಗಡೆ ಮಾಡಿದ್ದಾರೆ.
ಈ ಪಟ್ಟಿಯೇ ಅಂತಿಮ ಎಂದು ಹೇಳಲಾಗಿದ್ದು, ಇವರನ್ನು ತುಮಕೂರು ಜಿಲ್ಲೆಯ 2023ರ ಚುನಾವಣೆಯ
ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳೆಂದು ಟಿಕೆಟ್ ನೀಡಲಾಗಿದೆ ಎನ್ನಲಾಗುತ್ತಿದೆ.