ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಸತ್ವವನ್ನು ಕೋಟಿಗಳಲ್ಲಿ ಅಳೆಯುವ ಆಡಂಬರವಾಗಬಾರದು-ಪ್ರೊ.ಬರಗೂರು ರಾಮಚಂದ್ರಪ್ಪ

ತುಮಕೂರು : ಸಾಹಿತ್ಯ ಸಮ್ಮೇಳನವನ್ನು 25ರಿಂದ 30ಕೋಟಿ ಖರ್ಚು ಮಾಡಿ ಸಾಹಿತ್ಯದ ಸತ್ವವನ್ನು ಕೋಟಿಗಳಲ್ಲಿ ಅಳೆಯಲು ಸಾಧ್ಯವಿಲ್ಲ, ಸಾಹಿತ್ಯದ ಸತ್ವ ಅಳೆಯಬೇಕಾಗಿರುವುದು ಹೃದಯಸ್ಥವಾಗಿರುವ ಸಾಂಸ್ಕøತಿಯ ಕಾಳಜಿಯ ಮುಖಾಂತgವಾಗಿ, ವಿಶೇಷ ಏನೆಂದರೆ ನಿಜವಾದ ಹೃದಯಸ್ಥವಿದ್ದಲ್ಲಿ ಸಾಹಿತ್ಯ, ಸಂಸ್ಕøತಿ, ನಮ್ಮ ಭಾಷೆ ಇರುತ್ತದೆ, ಈ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಸರಳವಾಗಿ, ಸಾರ್ಥಕವಾಗಿ ಆಚರಿಸುವ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಿದೆ, ಸಮ್ಮೇಳನ ನಡೆಯುವುದೇ ಒಂದು ಸಾಂಸ್ಕøತಿಕ ಜಾಗ್ರತೆಯನ್ನು ಮೂಡಿಸುವುದಕ್ಕೆ,ಕನ್ನಡದ ವಿವೇಕವನ್ನು ಮೂಡಿಸುವುದಕ್ಕೆ ಏನು ಕೆಲಸ ಮಾಡಬೇಕೆಂಬುದು ಮುಖ್ಯವಾಗಬೇಕು, ಆಡಂಬರದಿಂದ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕಲ್ಲ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಸಾಪವತಿಯಿಂದ ಆಯೋಜಿಸಿದ್ದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕನ್ನಡ ಸಾಹಿತ್ಯ ಸಮಗ್ರವಾದದ್ದು,ಕನ್ನಡ ವಿವೇಕ ಬಹಳ ದೊಡ್ಡದು, ವಿವೇಕದ ಜಾಗದಲ್ಲಿ ಅವಿವೇಕ,ಸತ್ಯದ ಜಾಗದಲ್ಲಿ ಅಸತ್ಯ ಅವರಿಸಿ ಕೋಳ್ಳುತ್ತಿದೆ,ಮಾನವೀಯತೆ ಬದಲು ಮತಿಯತೆ ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಂಪನಿಂದ ಹಿಡಿದು ಇಂದಿನ ದಲಿತ,ಬಂಡಾಯದವರೆಗೆ ಕನ್ನಡ ಬಹು ದೊಡ್ಡ ವಿವೇಕವನ್ನು ಸಮಾಜಕ್ಕೆ ನೀಡಿದೆ.ಅದನ್ನು ಜನಸಾನಮಾನ್ಯರ ಮಧ್ಯೆ ತೆಗೆದುಕೊಂಡು ಹೋಗುವ ಕೆಲಸ ಇಂತಹ ಸಮ್ಮೇಳನಗಳ ಮೂಲಕ ಅಗಬೇಕಾಗಿದೆ ಎಂದು ಹೇಳೀದರು.

ಕನ್ನಡ ಭಾμÉ ಧಾರ್ಮಿಕ, ರಾಜಕೀಯ, ಸಾಹಿತಿಕ,ಸಾಮಾಜಿಕ,ಅರ್ಥಿಕ ವಿವೇಕಗಳನ್ನು ಕಲ್ಪಸಿರುವ ಭಾμÉಯಾಗಿದೆ.ಕನ್ನಡ ಸಾಹಿತ್ಯದ ವಿವೇಕ ಬಹಳ ಪ್ರಾಚೀನವಾದದ್ದು ಪಂಪ ರನ್ನರ ಕಾಲಕ್ಕಿಂತಲ್ಲೂ ಮುಂಚಿನಿಂದಲ್ಲೂ ಆಗಿದೆ.ಪುರಾಣ, ಜನಪದ, ಸಾಂಸ್ಕøತಿಕವು ಸೇರಿದಂತೆ ಸ್ಥಳೀಯ ಪ್ರಾದೇಶೀಕ,ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರಗಳನ್ನು ಸಹ ಕನ್ನಡ ಸಾಹಿತ್ಯ ಒಳಗೊಂಡಿದೆ ಎಂದರು.

ಸಾಹಿತ್ಯ ಸಮ್ಮೇಳನಗಳು ಆಡಂಬರಕ್ಕಿಂತ ಅರ್ಥಪೂರ್ಣವಾದಾಗ ಮಾತ್ರ ಹೆಚ್ಚು ಜನರನ್ನು ತಲುಪಲು ಸಾಧ್ಯ. ಸಾಹಿತ್ಯ ಸಮ್ಮೇಳನಗಳಲ್ಲಿ ನಮ್ಮದೊಂದು ಇರಲಿ ಎಂಬಂತೆ ಮಹಿಳಾ, ದಲಿತ, ರೈತ,ಕಾರ್ಮಿಕ ಚಳವಳಿಗಳ ಬಗ್ಗೆ ಚರ್ಚಿಸುವ ಬದಲು, ಸಾಹಿತ್ಯ ಕೇಂದ್ರೀತವಾಗಿ ದಲಿತರು, ಪ್ರಗತಿಪರರು, ರೈತರು, ಮಹಿಳೆಯರು, ಕಾರ್ಮಿಕರ ವಿಷಯಗಳು ಚರ್ಚೆಯಾಗಬೇಕು.ಆ ಮೂಲಕ ಕನ್ನಡದ ವಿವೇಕವನ್ನು ವಿಸ್ತರಿಸುವ ಕೆಲಸ ಆಗಬೇಕೆಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಕನ್ನಡ ಮಾನವೀಯ,ಸಮಾನತೆಯ,ಜಾತ್ಯಾತೀತ ಕನ್ನಡವು ಆಗಿದೆ,ನಮ್ಮ ಪರಂಪರೆಯಲ್ಲಿ ಸೌಹಾರ್ದತೆಯು ಸಹ ಇದೆ ,ಜನಸಾಮಾನ್ಯರ ಬಗ್ಗೆ ಗೌರವ ಇದ್ದಾಗ ಮಾತ್ರ ಸಾಹಿತ್ಯವು ಉತ್ಕೃಷ್ಟ ವಾಗಿರುತ್ತದೆ.ಬರೆಯದವರ ಬಗ್ಗೆ ಬರೆಯುವವರು ಗೌರವವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯದಲ್ಲಿ 10ನೇ ಶತಮಾನದಿಂದ 21ನೇ ಶತಮಾನದವರೆಗೆ ಜಾತಿ ನಿರಾಕರಣೆ ಮಾಡುತ್ತಲೇ ಸಾಹಿತ್ಯವನ್ನು ವಿಸ್ತರಿಸುವ ಕೆಲಸ ಆಗಿದೆ. ಆದರೆ ಇತ್ತೀಚಿನ ಬೆಳೆವಣಿಗೆಗಳು ಆತಂಕಕಾರಿಯಾಗಿವೆ. ಜಾತಿಯತೆ ಮತ್ತಷ್ಟು ಕಠಿಣ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.ಕುಮಾರವ್ಯಾಸರ ಅರಸು ಮೊರೆವ ಹುಲಿ ಎಂಬ ಹೇಳಿಕೆಗಳು ಇಂದಿಗೂ ಪ್ರಸ್ತುತವಾಗಿದೆ.ಬಡವರ ಭಿನ್ನಪ್ಪವ ಕೇಳುವವರೇ ಇಲ್ಲದಂತಾಗಿದೆ ಎಂದು ಇಂದಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರು.

1914ರಲ್ಲಿ ಮೈಸೂರು ಕಾನ್ಫೆರೆನ್ಸ್ ಅಂತ ನಡೆಯುತ್ತದೆ, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಆಶಯದ ಮೇರೆಗೆ ಒಂದು ಸಮಿತಿ ರಚಿಸಿ ಸಾಹಿತ್ಯಕ್ಕೆ ಒತ್ತು ನೀಡಲಾಗುವುದು, 1915 ರಿಂದ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ಇದದ್ದು 1938ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣ ಮಾಡಲಾಯಿತು. ವಿಶೇಷ ಎಂದರೆ ಹೆಚ್.ವಿ.ನಂಜುಂಡಯ್ಯನವರಿಂದ ಪ್ರಾರಂಭವಾಗಿ ಇಲ್ಲಿಯವರೆವಿಗೆ ಕೇಂದ್ರ ಕನ್ನಡ ಪರಿಷತ್‍ಗೆ 26 ಜನ ಅಧ್ಯಕ್ಷರಾಗಿದ್ದಾರೆ, 26 ಜನರಲ್ಲಿ ನಮ್ಮ ಜಿಲ್ಲೆಯವರೆ 3 ಜನ ಅಧ್ಯಕ್ಷರಾಗಿದ್ದರು ಎಂಬುದು ಹೆಮ್ಮೆಯ ಸಂಗತಿ, ಶೀವಮೂರ್ತಿ ಶಾಸ್ತ್ರಿಗಳು, ಜಿ.ಎಸ್.ಸಿದ್ದಲಿಂಗಯ್ಯ, ಸಾ.ಶಿ.ಮರುಳಯ್ಯನವರು ಈ ಮೂವರು ನಮ್ಮ ತುಮಕೂರು ಜಿಲ್ಲೆಯಿಂದ ಅಧ್ಯಕ್ಷರಾಗಿದ್ದರು ಎಂಬುದಕ್ಕೆ ಹೆಮ್ಮೆ ಪಡಬೇಕು, ಏಕೆಂದರೆ ಅಧ್ಯಕ್ಷ ಸ್ಥಾನ ಅಲಂಕರಿಸಿದವರಲ್ಲಿ ಕಂಠೀರವ ನರಸಿಂಹರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್, ತೀತಾಶರ್ಮರವರು, ಎ.ಎನ್.ಮೂರ್ತಿರಾಯರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇದ್ದಂತಹ ಸ್ಥಾನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ, ನಮ್ಮ ಜಿಲ್ಲೆಯವರು 3ಜನ ಆಗಿದ್ದರು ಎಂಬುದರ ಅರ್ಥ ಏನೆಂದರೆ ತುಮಕೂರು ಜಿಲ್ಲೆ ಸಾಂಸ್ಕøತಿಕವಾಗಿ ಬಹಳ ಸಮೃದ್ಧವಾಗಿದೆ, ಶಕ್ತಿಯುತವಾಗಿದೆ ಎಂಬುದರ ಸಂಕೇತ ಎಂಬುದರ ಭಾವೆನೆಯಾಗಿದೆ ಎಂದರು.

Leave a Reply

Your email address will not be published. Required fields are marked *