ತುಮಕೂರು : ರಾಜ-ಮಹಾರಾಜರು ಹಿಂದೆ ಸಂದೇಶದ ಪತ್ರ ಕಳಿಸುತ್ತಿದ್ದ ರೀತಿಯಲ್ಲಿ ಕಣ್ಮನ ಸೆಳೆಯುವಂತಹ ಮದುವೆಯ ಕರೆಯೋಲೆಯನ್ನು ಮುದ್ರಿಸಿರುವುದನ್ನು ಒಮ್ಮೆ ನೋಡಲೇ ಬೇಕಿದೆ.

ಇತ್ತೀಚಿನ ದಿನಗಳಲ್ಲಿ ಸರಳವಾಗಿ ಮದುವೆಯ ಕರೆಯೋಲೆಗಳನ್ನು ಮುದ್ರಿಸುವುದೇ ಅಪರೂಪವಾಗಿರುವ ಕಾಲ ಇದು, ಕೆಲವರು ಮದುವೆಯ ಕರೆಯೋಲೆಯೇ ಗ್ರಾಂಡಾಗಿರಬೇಕೆಂದು ಒಂದು ಕರೆಯೋಲೆಗೆ ಸಾವಿರಾರು ರೂಪಾಯಿ ಖರ್ಚು ಮಾಡುವ, ಡಿಜಿಟಲ್ ಕರೆಯೋಲೆ, ಬಂಗಾರದ ಲೇಪನದ ಕರೆಯೋಲೆ ಮಾಡಿಸಿ ತಮ್ಮ ಅಂತಸ್ತು, ಘನತೆಯನ್ನು ಈ ಕರೆಯೋಲೆ ಮೂಲಕವೇ ತಿಳಿಸಲು ಮುಂದಾಗುತ್ತಾರೆ.

ಸಾಮಾನ್ಯವಾಗಿ ಮದುವೆಯ ಕರೆಯೋಲೆ ಎಂದರೆ ಕವರ್ ನಲ್ಲಿಟ್ಟು ಸಂಪ್ರದಾಯಕ ಆಹ್ವಾನ ಪತ್ರಿಕೆಯನ್ನು ಬಹುತೇಕರು ಮಾಡಿಸುತ್ತಾರೆ. ಬಹುತೇಕರು ಮಾಡಿಸುವ ಮದುವೆಯ ಆಹ್ವಾನ ಪತ್ರಿಕೆಯು ಎರಡು ಭಾಗದ ಮಡುಚುವ ಆಹ್ವಾನ ಪತ್ರಿಕೆಯಾಗಿರುತ್ತದೆ.
ಈ ಆಹ್ವಾನ ಪತ್ರಿಕೆಗಳು ಮದುವೆಗಾಗಿಯೇ ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಿರಲಾಗಿರುತ್ತದೆ, ಡಿಜಿಟಲ್ ಬದ ಮೇಲೆ ಆಹ್ವಾನ ಪತ್ರಿಕೆಗಳ ಡಿಸೈನ್ ಸಹ ಆಕರ್ಷಕವಾಗಿರುತ್ತದೆ. ಈ ಡಿಸೈನ್ ಮೇಲೆ ಆಹ್ವಾನ ಪತ್ರಿಕೆಯ ಬೆಲೆ ನಿರ್ಧಾರವಾಗುತ್ತದೆ.
ಇತ್ತೀಚೆಗೆ ಕೆಲವರು ಸರಳವಾಗಿ ಒಂದೇ ಭಾಗದ ಹಳೆ ಡಿಸೈನ್ ಆಹ್ವಾನ ಪತ್ರಿಕೆಗಳನ್ನು ಸಹ ಮಾಡಿಸುತ್ತಾರೆ.
ಆದರೆ ಅನುರಾದ ಮತ್ತು ಗೋಪಾಲಕೃಷ್ಣ ದಂಪತಿಗಳು ತಮ್ಮ ಮಗಳು ಜಿ.ಎ.ವೈಭವಿಕೃಷ್ಣರವರ ಮದುವೆಗೆ ಸರಳವಾದ, ಸುಂದರವಾದ ಮಹರಾಜರ ಕಾಲದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕಳಿಸುತ್ತಿದ್ದ ಸಂದೇಶದ ಓಲೆಯಂತೆ ಬಟ್ಟೆಯಲ್ಲಿ ಮುದ್ರಿಸಿರುವ ಆಹ್ವಾನ ಪತ್ರಿಕೆಯ ಕವರ್ ಸಹ ತುಂಬಾ ಸರಳವಾಗಿ ಕರೆಯೋಲೆಯನ್ನು ಇಡಲು ಊದುಬತ್ತಿ ಕವರ್ನಂತೆ ಕಣ್ಮನ ಸೆಳೆಯುವಂತಿದೆ.

ಇದುವರೆವಿಗೂ ನನಗೆ ಬಂದ ಮದುವೆಯ ಆಹ್ವಾನ ಪತ್ರಿಕೆಗಳಲ್ಲಿ ನನ್ನನ್ನು ತುಂಬಾ ಆಕರ್ಷಣೆಗೆ ಒಳಪಡಿಸಿ ನನಗೆ ತುಂಬಾ ಖುಷಿ ನೀಡಿದ ಮದುವೆಯ ಕರೆಯೋಲೆ ಇದಾಗಿದೆ, ಇದುವರೆವಿಗೂ ಇಂತಹ ಆಹ್ವಾನ ಪತ್ರಿಕೆಯನ್ನು ನಾನು ಕಂಡಿರಲಿಲ್ಲ.
ಆಹ್ವಾನ ಪತ್ರಿಕೆಯ ಕವರನ್ನು ತೆರೆದ ಕೂಡಲೇ ರಾಜರ ಕಾಲದ ಓಲೆಯೊಂದು ಕಾಣಿಸುತ್ತದೆ, ಅದನ್ನು ಬಿಚ್ಚಿದರೆ ಮದುವೆಯ ಆಹ್ವಾನದ ವಿವರ ನಮಗೆ ಕಾಣಿಸುತ್ತದೆ.
ಅದ್ದೂರಿ ಆಹ್ವಾನ ಪತ್ರಿಕೆಗಳ ಕಾಲದಲ್ಲಿ ಹಿಂದಿನ ಸಂಪ್ರಾದಾಯಕ ಮತ್ತು ಸರಳವಾದ ಆಹ್ವಾನ ಪತ್ರಿಕೆಯನ್ನು ಗೋಪಾಲಕೃಷ್ಣ ಅವರು ಮಾಡಿಸಿರುವ ಮದುವೆಯ ಕರೆಯೋಲೆ ಮನ ಸೆಳೆಯುವಂತೆ ಮತ್ತು ಕೈಯಲ್ಲಿ ಅಥವಾ ಜೇಬಿನಲ್ಲಿಯೇ ಸುಲಭವಾಗಿ ಒಯ್ಯಬಹುದಾಗಿರುತ್ತದೆ.