ತುಮಕೂರು: ಅಧುನಿಕತೆ,ಪಾಶ್ಚಾತ್ಯೀಕರಣಕ್ಕೆ ಮಾರು ಹೋಗಿರುವ ಭಾರತೀಯ ಯುವಜನತೆ, ಆದರಲ್ಲಿ ಮಹಿಳೆಯರ ಅವತಾರಗಳನ್ನು ಪ್ರತಿವರ್ಷದ ಡಿಸೆಂಬರ್ 31,ಜನವರಿ 01ರಂದು ನೋಡಬೇಕು.ಕುಡಿದು ಎದ್ದು ಓಡಾಡಲು ಆಗದ ಸ್ಥಿತಿಯನ್ನು ಗಮನಿಸಿದರೆ,ಮಹಿಳಾ ಸಬಲೀಕರಣ,ಲಿಂಗಸಮಾನತೆ ಎಂಬುದು ಎತ್ತ ಸಾಗಿದೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಪ್ರೊ.ಟಿ.ಆರ್.ಲೀಲಾವತಿ ನುಡಿದರು.
ನಗರದ ಮರಳೂರಿನ ಪ್ರಗತಿ ಬಡಾವಣೆಯಲ್ಲಿರುವ ಡಾ.ಬಿ.ಸಿ.ಶೈಲಾನಾಗರಾಜ್ ಸಾಹಿತ್ಯ ಭವನದಲ್ಲಿ ತುಮಕೂರು ಜಿಲ್ಲಾ ಮಹಿಳಾ ಸಂಘಟನೆ,ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ-2025 ಮತ್ತು ಜಿಲ್ಲಾ ಮಹಿಳಾ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,ತುಮಕೂರಿನ ಮೊದಲ ಶಾಸಕಿಯಾಗಿದ್ದ ಶ್ರೀಮತಿ ಭಾಗಿರಥಮ್ಮ ಅವರು ಮದುವೆಯಾದ ಮಾರನೇ ದಿನವೇ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಬಂಧನಕ್ಕೆ ಒಳಗಾಗುತ್ತಾರೆ, ಹಲವಾರು ದಿನಗಳ ಕಾಲ ಗಂಡ ಒಂದು ಜೈಲಿನಲ್ಲಿ, ಹೆಂಡತಿ ಒಂದು ಜೈಲಿನಲ್ಲಿ ಬಂಧಿಯಾಗಿದ್ದರು. ಮಹಿಳೆಯರು ಪ್ರಾತಿನಿಧ್ಯವನ್ನು ಪ್ರತಿಪಾದಿಸುವ ಇಂತಹ ಅನೇಕ ಉದಾಹರಣೆಗಳು ನಮಗೆ ಸ್ವಾತಂತ್ರ ಪೂರ್ವದಲ್ಲಿ, ಸ್ವಾತಂತ್ರ ನಂತರದಲ್ಲಿಯೂ ಸಿಗುತ್ತವೆ ಎಂದರು.
ಮಹಿಳೆಯರು ಇಂದು ಎಲ್ಲ ರಂಗದಲ್ಲಿಯೂ ಮುಂದಿದ್ದಾಳೆ ಎಂಬ ಮಾತುಗಳನ್ನು ಆಗಾಗ್ಗೆ ಕೇಳುತ್ತೇವೆ.ಆದರೆ ಮಹಿಳೆಯ ಎಲ್ಲಾ ರಂಗದಲ್ಲಿಯೂ ಅಂದು,ಇಂದು, ಎಂದೆಂದು ಮುಂದಿದ್ದಾಳೆ,ಸ್ವಾತಂತ್ರ ಹೋರಾಟದಲ್ಲಿಯೂ ಹೆಣ್ಣು ಮಕ್ಕಳು ಗಂಡಿಗೆ ಸರಿಸಮನಾಗಿ ದುಡಿದಿರುವುದನ್ನು ಕಾಣಬಹುದು. ತುಮಕೂರಿನ ಮೊದಲ ಎಂ.ಎಲ್.ಎ ಶ್ರೀಮತಿ ಭಾಗಿರಥಮ್ಮ ಅವರ ಜೀವನವೇ ಇದಕ್ಕೆ ಉದಾಹರಣೆ ಎಂದು ಲೇಖಕಿ ಪ್ರೊ.ಟಿ.ಆರ್.ಲೀಲಾವತಿ ತಿಳಿಸಿದ್ದಾರೆ.
ಭಾರತೀಯ ಮಹಿಳೆಯರಿಗೆ ಇಡೀ ವಿಶ್ವದಲ್ಲಿಯೇ ಅತ್ಯಂತ ಉನ್ನತ ಸ್ಥಾನವಿದೆ. ಬಸವಣ್ಣನವರ ಅನುಭವ ಮಂಟಪದಿಂದ ಇಂದಿನವರೆಗೂ ಮಹಿಳೆಯರನ್ನು ಪೂಜ್ಯ ಭಾವನೆಯಿಂದಲೇ ನೋಡಲಾಗುತ್ತಿದೆ.ಇದನ್ನು ವಿದೇಶ ಮಹಿಳೆಯರು ಸಹ ಒಪ್ಪಿಕೊಂಡಿರುವ ನಾವು ಕಾಣಬಹುದು.
ಅಧುನಿಕತೆ,ಪಾಶ್ಚಾತ್ಯೀಕರಣಕ್ಕೆ ಮಾರು ಹೋಗಿರುವ ಭಾರತೀಯ ಯುವಜನತೆ, ಆದರಲ್ಲಿ ಮಹಿಳೆಯರ ಅವತಾರಗಳನ್ನು ಪ್ರತಿವರ್ಷದ ಡಿಸೆಂಬರ್ 31,ಜನವರಿ 01ರಂದು ನೋಡಬೇಕು.ಕುಡಿದು ಎದ್ದು ಓಡಾಡಲು ಆಗದ ಸ್ಥಿತಿಯನ್ನು ಗಮನಿಸಿದರೆ,ಮಹಿಳಾ ಸಬಲೀಕರಣ,ಲಿಂಗಸಮಾನತೆ ಎಂಬುದು ಎತ್ತ ಸಾಗಿದೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಪ್ರೊ.ಟಿ.ಆರ್.ಲೀಲಾವತಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಮಹಿಳಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷೆ ಡಾ.ಬಿ.ಸಿ.ಶೈಲಾ ನಾಗರಾಜು ಮಾತನಾಡಿ, ಮಹಿಳಾ ದಿನಾಚರಣೆ ಎಂಬುದು ಸ್ತ್ರೀ ಕುಲದ ಆತ್ಮವಿಶ್ವಾಸದ ಪ್ರತೀಕ.ನೂರ್ಯಾಕ್ ಬಟ್ಟೆ ಗಿರಣಿಯಲ್ಲಿ ಸಮಾನ ಕೆಲಸಕ್ಕೆ ಸಮಾನವೇತನ,ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆರಂಭವಾದ ಮಹಿಳಾ ಹೋರಾಟ ಇಡೀ ವಿಶ್ವಕ್ಕೆ ಮಾದರಿಯಾಯಿತು.1975ರಲ್ಲಿ ವಿಶ್ವಸಂಸ್ಥೆ ಮಹಿಳಾ ಸಮಾನತೆ, ಆಕೆಯ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ವಿಶ್ವ ಮಹಿಳಾ ದಿನವನ್ನು ಘೋಷಣೆ ಮಾಡಿತ್ತು.ಇದರಿಂದ ಮಹಿಳೆಯರನ್ನು ನೋಡುವ ದೃಷ್ಟಿಕೋನವೇ ಬದಲಾಯಿತು ಎಂದರು.
ಒಂದು ಕುಟುಂಬ ನೆಮ್ಮದಿಯಾಗಿದೆ ಎಂದರೆ ಅದಕ್ಕೆ ಆ ಮನೆಯಲ್ಲಿ ಮಹಿಳೆಯರು ಕಾರಣ.ತಾಯಿ ಅಂತಕರಣದಿಂದ ಇಡೀ ಸಮಾಜವನ್ನು ನೋಡುವುದು ಮಹಿಳೆ ಮಾತ್ರ. ತಾಳ್ಮೆ, ಕರುಣೆ, ಪ್ರೀತಿಯ ಪ್ರತೀಕವೇ ಹೆಣ್ಣು. ಹಾಗೆಂದ ಮಾತ್ರಕ್ಕೆ ಆತ್ಮವಿಶ್ವಾಸ ಕಡಿಮೆ ಮಾಡಬೇಕಾದ ಪ್ರಮಯವಿಲ್ಲ.ಪುರುಷರಿಗಿಂತ ಒಂದು ಶತಮಾನದ ತರುವಾಯ ಜ್ಞಾನದ ಪ್ರತೀಕವಾದ ಅಕ್ಷರ ಮಹಿಳೆಯರಿಗೆ ದಕ್ಕಿದರೂ,ಇಂದು ಪುರುಷರಿಗೆ ಸಮಾನವಾಗಿ ಎಲ್ಲ ರಂಗದಲ್ಲಿಯೂ ಗುರುತಿಸಿ ಕೊಂಡಿದ್ದಾಳೆ.ಅಧ್ಯಯನದ ಪ್ರಕಾರ ಪುರುಷರಿಗಿಂತ ಎಂಟು ಪಟ್ಟು ಹೆಚ್ಚು ಆತ್ಮಶಕ್ತಿ ಮಹಿಳೆಯರಲ್ಲಿದೆ. ಹಾಗಾಗಿಯೇ ಮನೆಯ ಹೊರಗು, ಒಳಗು ಎರಡನ್ನು ನಿಭಾಯಿಸುವ ಜಾಣ್ಮೆ ಮತ್ತು ತಾಳ್ಮೆ ಹೆಣ್ಣಿಗಿದೆ.ಅದನ್ನು ಜಾಗೃತಿಗೊಳಿಸಲು ಇಂತಹ ಮಹಿಳಾ ದಿನಾಚರಣೆಗಳು ಸಾಕ್ಷಿಯಾಗಿವೆ ಎಂದು ಡಾ.ಬಿ.ಸಿ.ಶೈಲಾನಾಗರಾಜು ತಿಳಿಸಿದರು.
ವಿಶ್ವ ಮಹಿಳಾ ದಿನದ ಅಂಗವಾಗಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಹಾಗೂ ಮಹಿಳಾ ಸಂಘಟಕರಾದ ಶ್ರೀಮತಿ ಮಂಜುಳಾದೇವಿ ಅವರಿಗೆ ಜಿಲ್ಲಾ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ವರದಕ್ಷಿಣೆ ವಿರೋಧಿ ವೇದಿಕೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಜೀವರತ್ನ, ಸಮಾಜ ಸೇವಕರಾದ ಶ್ರೀಮತಿ ಎಂ.ಪಿ.ಸುಶೀಲ, ಪೊಲೀಸ್ ಅಧಿಕಾರಿಯಾದ ಶ್ರೀಮತಿ ಪುಪ್ಪಾವತಿ.ಎಂ.ಬಿ, ಇಲ್ಲಾ ಮಹಿಳಾ ಸಂಘಟನೆಯ ಖಜಾಂಚಿ ಶ್ರೀಮತಿ ಪಿ.ಜಿ.ಶಂಕುತಲ, ಎಂ.ಪ್ರವೀಣಾ, ನಿರ್ಮಲ ಗೂಳರಿವೆ ಉಪಸ್ಥಿತರಿದ್ದರು.
ಇದೇ ವೇಳೆ ಶೈಲಾ ಮಂಜುನಾಥ್,ಸರಳ, ಶೈಲಜಾಬಾಬು, ಸುಶೀಲಮ್ಮ, ಗಂಗೂಬಾಯಿ, ಸರ್ವಮಂಗಳಮ್ಮ, ಚಂದ್ರಕಲ, ಶಾಂತಕುಮಾರಿ, ಲಕ್ಷ್ಮಿದೇವಮ್ಮ, ಪ್ರಮೀಳ, ವೀಣಾ ಇಡಕನಹಳ್ಳಿ ಮತ್ತು ತಂಡದವರಿಂದ ಮಹಿಳಾ ಜಾಗೃತಿ ಗೀತ ಗಾಯನ ಮತ್ತು ಮೇಳೆಹಳ್ಳಿಯ ಡಮರುಗ ರಂಗಸಂಪನ್ಮೂಲ ಕೇಂದ್ರದ ಕಲಾವಿದರಿಂದ ಮುಟ್ಟಾದಳೇ ಪುಟ್ಟಿ ಎಂಬ ಮಹಿಳಾ ಜಾಗೃತಿ ನಾಟಕವನ್ನು ಹಿರಿಯ ರಂಗ ನಿರ್ದೇಶಕ ಮೇಳೆಹಳ್ಳಿ ದೇವರಾಜು ಅವರ ನಿರ್ದೇಶಕನದಲ್ಲಿ ಪ್ರದರ್ಶನ ಗೊಂಡಿತ್ತು.