ಬೇಕರಿ-ಬ್ಯಾಂಗಲ್ಸ್‍ಗೆ ಲಾರಿ ನುಗ್ಗಿ ಇಬ್ಬರ ಸಾವು

ತುಮಕೂರು : ಪ್ರತ್ಯೇಕ ಎರಡು ಅಪಘಾತಗಳು ಸಂಭವಿಸಿ ಮೂವರು ಸಾವನ್ನಪ್ಪದ ಘಟನೆ ನಡೆದಿದೆ.

ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಸರ್ಕಲ್‍ನಲ್ಲಿ ಗೊಬ್ಬರ ತುಂಬಿದ್ದ ಲಾರಿಯ ಬ್ರೇಕ್ ವಿಫಲವಾಗಿ ಬ್ಯಾಂಗಲ್ ಸ್ಟೋರ್ ಮತ್ತು ಬೇಕರಿಗೆ ನುಗ್ಗಿದ ಪರಿಣಾಣ ಕಾಟೇನಹಳ್ಳಿ ಗ್ರಾಮದ (65) ರಂಗಸ್ವಾಮಯ್ಯ, ಪುರದಹಳ್ಳಿಯ ಬೈಲಪ್ಪ(65) ಸ್ಥಳದಲ್ಲೇ ಸಾವನ್ನಪ್ಪಿದ್ದು,

ಕಾಂತರಾಜು, ಜಯಣ್ಣ, ಸಿದ್ದಗಂಗಮ್ಮ, ಮೋಹನಕುಮಾರ್ ಅವರು ಗಾಯಗೊಂಡಿದ್ದು ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕೋಳಾಲ ಪೊಲೀಸರು ಕೇಸು ದಾಖಲಿಸಿದ್ದರೆ.

ಅಪಘಾತ ಪಿಡಿಓ ಸಾವು.

ಸಾರಿಗೆ ಸಂಸ್ಥೆ ಬಸ್‍ವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಆಡಳಿತಾಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳ್ಳಿ ಬಳಿ ನಡೆದಿದೆ.

ಗುಬ್ಬಿ ತಾಲ್ಲೂಕಿನ ಮೂಕನಾಯಕನಹಳ್ಳಿ ಗ್ರಾಮದ ನಿವಾಸಿ ಹಾಗೂ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿಯ ಪರ್ತಿಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಎಂ.ಹೆಚ್. ಮಹೇಶ್(31) ಎಂಬುವರೇ ಮೃತಪಟ್ಟಿರುವ ದುರ್ದೈವಿ.

ಗ್ರಾಮ ಆಡಳಿತಾಧಿಕಾರಿ ಮಹೇಶ್ ಅವರು ಇಂದು ಬೆಳಗ್ಗೆ ತುಮಕೂರಿನಿಂದ ತಮ್ಮ ಸ್ವಗ್ರಾಮ ಮೂಕನಾಯಕನಹಳ್ಳ ಪಟ್ಟಣಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಗೊಲ್ಲಹಳ್ಳಿ ಸಮೀಪ ಸಾರಿಗೆ ಬಸ್ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಗ್ರಾಮ ಆಡಳಿತಾಧಿಕಾರಿ ಮಹೇಶ್ ಅವರ ಪತ್ನಿಗೆ ಕಳೆದ 13 ದಿನಗಳ ಹಿಂದೆಯಷ್ಟೇ 2ನೇ ಮಗುವಿಗೆ ಜನ್ಮ ನೀಡಿದ್ದು, ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಗ್ರಾಮ ಆಡಳಿತಾಧಿಕಾರಿ ಮಹೇಶ್ ಅವರು ಪತ್ನಿ ಸಂಧ್ಯಾ, ಇಬ್ಬರು ಪುತ್ರಿಯರು ತಂದೆ-ತಾಯಿ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಗ್ರಾಮ ಆಡಳಿತಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಹಾಗೂಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣಾ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *