ತುಮಕೂರು:ಸಹಕಾರಯೂನಿಯನ್ ವತಿಯಿಂದ ಪ್ರಸಕ್ತ ಸಾಲಿನ ಸಹಕಾರರತ್ನ ಪ್ರಶಸ್ತಿ ಪಡೆದ ಜಿಲ್ಲೆಯ ಏಳು ಜನ ಹಿರಿಯ ಸಹಕಾರಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಡಿಸೆಂಬರ್ 06 ಬೆಳಗ್ಗೆ 11 ಗಂಟೆಗೆಡಾ.ಗುಬ್ಬಿ ವೀರಣ್ಣಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಯೂನಿಯನ್ ತುಮಕೂರು ಜಿಲ್ಲಾಧ್ಯಕ್ಷ ವೆಂಕಟೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕರ್ನಾಟಕರಾಜ್ಯ ಸಹಕಾರ ಮಹಾಮಂಡಳ ನಿಯಮಿತ,ಬೆಂಗಳೂರು, ತುಮಕೂರುಜಿಲ್ಲಾ ಸಹಕಾರಿ ಯೂನಿಯನ್, ತುಮಕೂರು, ತುಮಕೂರುಜಿಲ್ಲಾ ಸಹಕಾರಕೇಂದ್ರ ಬ್ಯಾಂಕ್.ನಿ, ತುಮಕೂರುಜಿಲ್ಲಾ ಸಹಕಾರಿ ಹಾಲು ಉತ್ಪಾಧಕರ ಸಂಘಗಳ ಒಕ್ಕೂಟ.ನಿ. ತುಮಕೂರುಇವರ ಸಹಯೋಗದಲ್ಲಿ,ಸಹಕಾರ ಇಲಾಖೆಯ ಮಾಜಿ ಮಂತ್ರಿಗಳಾದ ಕೆ.ಎನ್.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಅಭಿನಂದನಾ ಕಾರ್ಯಕ್ರಮ ಸಹಕಾರ ಕ್ಷೇತ್ರಕ್ಕೆ ತಮ್ಮನ್ನು ತಾವು ಆರ್ಪಿಸಿಕೊಂಡವರಿಗೆ ನೀಡುವ ಗೌರವವಾಗಿದೆ ಎಂದರು.
ಡಿಸೆಂಬರ್ 06ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಸಹಕಾರರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಹಕಾರ ದ್ವಜಾರೋಹಣವನ್ನು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ನೆರವೇರಿಸಲಿದ್ದಾರೆ. ಕಾರ್ಯಕ್ರಮವನ್ನು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಉದ್ಘಾಟಿಸುವರು. ಅಧ್ಯಕ್ಷತೆ ಮತ್ತು ಸಹಕಾರರತ್ನ ಪ್ರಶಸ್ತಿ ಪ್ರಧಾನವನ್ನು ಸಹಕಾರ ಇಲಾಖೆ ಮಾಜಿ ಮಂತ್ರಿಕೆ.ಎನ್.ರಾಜಣ್ಣ ನೆರವೇರಿಸುವರು. ಸಹಕಾರಿಕ್ಷೇತ್ರದ ಪಿತಾಮಹರಿಗೆ ಶಾಸಕರು ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ,ದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ಶಾಸಕರಾದ ಟಿ.ಬಿ.ಜಯಚಂದ್ರ, ಶಾಸಕರು, ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷರಾದಎಸ್.ಆರ್.ಶ್ರೀನಿವಾಸ್, ಶಾಸಕರು ಹಾಗೂ ತುಮುಲ್ಅಧ್ಯಕ್ಷ ಹೆಚ್.ವಿ.ವೆಂಕಟೇಶ್ ಪುಪ್ಪಾರ್ಚನೆ ನೆರವೇರಿಸುವರು.
ಕಳೆದ ಬಾರಿಜಿಲ್ಲೆಯ 20 ಜನರಿಗೆ ಸಹಕಾರರತ್ನ ಪ್ರಶಸ್ತಿ ಲಭಿಸಿತ್ತು. ಈ ಬಾರಿ 7 ಜನರಿಗೆದೊರೆತ್ತಿದೆ.ಸಮಾರಂಭದಲ್ಲಿ ಸಹಕಾರರತ್ನ ಪ್ರಶಸ್ತಿ ಪಡೆದ ಟಿ.ಕೆ.ನಂಜುಂಡಪ್ಪ, ಡಿ.ನಾಗರಾಜಯ್ಯ, ಕೆ.ಎ.ದೇವರಾಜು(ಕಲ್ಲಹಳ್ಳಿ), ಕೆ.ಎನ್.ಗೋವಿಂದರಾಜು, ಎಂ.ಎಸ್. ವಿಶ್ವನಾಥ್, ಕೆ.ಜಿ.ಜಗದೀಶ್, ಹೆಚ್.ಆರ್.ರೇವಣ್ಣ ಅವರುಗಳನ್ನು ಅಭಿನಂದಿಸಲಾಗುವುದುಎಂದರು.
ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕರಾದ ಜಿ.ಬಿ.ಜೋತಿಗಣೇಶ್,ಪಿಕಾರ್ಡ್ ಬ್ಯಾಂಕ್ಅಧ್ಯಕ್ಷರು, ಶಾಸಕರಾದ ಕೆ.ಷಡಕ್ಷರಿ, ವಿಧಾನಪರಿಷತ್ ಸದಸ್ಯಆರ್.ರಾಜೇಂದ್ರ, ಶಾಸಕರಾದ ಚಿದಾನಂದ ಎಂ.ಗೌಡ, ಎಂ.ಟಿ.ಕೃಷ್ಣಪ್ಪ, ಬಿ.ಸುರೇಶಗೌಡ, ಸಿ.ಬಿ.ಸುರೇಶಬಾಬು, ಡಿ.ಟಿ.ಶ್ರೀನಿವಾಸ್, ಡಾ.ಹೆಚ್.ಡಿ.ರಂಗನಾಥ್, ಕರ್ನಾಟಕರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷಎನ್.ಗಂಗಣ್ಣ, ಸಹಕಾರಯೂನಿಯನ್ಜಿಲ್ಲಾಧ್ಯಕ್ಷ ಬಿ.ಜಿ.ವೆಂಕಟೇಗೌಡ, ಸಹಕಾರಇಲಾಖೆಯ ಕಾರ್ಯದರ್ಶಿ ಎಸ್.ಬಿ.ಶೆಟ್ಟೆಣ್ಣವರ, ಸಹಕಾರ ಸಂಘಗಳ ನಿಬಂಧಕರಾದ ಟಿ.ಹೆಚ್.ಎಂ.ಕುಮಾರ್, ಹಿರಿಯ ಸಲಹೆಗಾರರಾದಜಿ.ಎಸ್.ರಮಣರೆಡ್ಡಿ, ಸಹಕಾರ ಮಹಾಮಂಡಳದ ಎಂ.ಡಿ. ಕೆ.ಎಸ್.ನವೀನ್ ಮತ್ತಿತರರು ಉಪಸ್ಥಿತರಿರುವರು ಎಂದು ಬಿ.ಜಿ.ವೆಂಕಟೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಹಳ್ಳಿ ರಾಜಕುಮಾರ್, ನಾರಾಯಣಗೌಡ, ಕೆ.ಎ.ದೇವರಾಜು, ಗಂಗಣ್ಣ, ನಿಸಾರ್ಅಹಮದ್ ಮತ್ತಿತರರು ಉಪಸ್ಥಿತರಿದ್ದರು.