ಇವರೇನು ಪಾಪ ಮಾಡಿದ್ದಾರೆ, ಕೂತು ದಸರಾ ಸಂಭ್ರಮ ಪಡುವ ಆಶೆಯಿಲ್ಲವೇ—ಇವರ ಶಾಪ ಯಾರಿಗೆ, ಪೌರಕಾರ್ಮಿಕರಿಗೆ ಅವಮಾನ—! ಇದೇನು ಆಂಜನೇಯ ಚರ್ಪೇ—

ತುಮಕೂರು : ಈ ಚಿತ್ರದಲ್ಲಿರುವವರ ಮುಖವನ್ನೊಮ್ಮೆ ನೋಡಿ ಸ್ವಲ್ಪ ದುಃಖ ಹುಮ್ಮಳಿಸಿ ಬರುತ್ತದೆ, ಇಲ್ಲಿ ನಿಂತಿರುವವರು ಯಾವ ಪಾಪ ಮಾಡಿದ್ದಾರೆ, ಅವರಿಗೂ ಕೂತು ದಸರಾ ಸಾಂಸ್ಕøತಿಕ ಕಾರ್ಯಕ್ರಮ ನೋಡಬೇಕೆಂಬ ಆಸೆ ಇಲ್ಲವೆ, ಇವರ ಶಾಪ ಯಾರಿಗೆ ತಟ್ಟಲಿದೆ.

ನೋಡಿ ಪಾಪ ಅವರ ಕಣ್ಣುಗಳಲ್ಲಿರುವ ಆಸೆಗೋಪುರಕ್ಕೆ ಬಂಗಾರದ ತೇರು ಕಟ್ಟುವವರ್ಯಾರು, ಒಂದು ಕಡೆ ಆಸೆಗಣ್ಣಿನ ನೋಟ, ಇನ್ನೊಂದು ಕಡೆ ಕುರ್ಚಿಗಳಲ್ಲಿ ಕೂತಿರುವವರನ್ನು ನೋಡಿ ಅಳುವಂತೆ ಮುಖ ಮಾಡಿಕೊಂಡು ನಿಂತವರನ್ನು ನೋಡಿದಾಗ ಎಂತವರಿಗೂ ಹೃದಯ ಕಲಕುತ್ತದೆ. ಇಂತಹ ದೃಶ್ಯಗಳೆ ಕಣ್ರಿ ಮನುಷ್ಯನ ಹೃದಯ ಕಲಕೋದು, ಇವರು ಕೂಡ ತಮ್ಮ ಹೆಂಡತಿ ಮಕ್ಕಳನ್ನು ಬನ್ನಿ ದಸರಾ ಸಾಂಸ್ಕøತಿಕ ಕಾರ್ಯಕ್ರಮ ನೋಡಲು ಅಂತ ಕರೆ ತಂದಾಗ ಈ ರೀತಿ ಬೀದಿಪಾಲಾಗಿ ಹೆಂಡತಿ ಮಕ್ಕಳು ನೂಕುನುಗ್ಗಿನಲ್ಲಿ ಅಪ್ಪಚ್ಚಿಯಾಗುವಾಗ ಅವರ ಮನಸ್ಸಿನ ಸ್ಥಿತಿ ಏನಾಗಬೇಡ.

ಯಾರೋ ರಾಜಕಾರಣಿಗಳ ಚೇಲಗಳಿಗೆ, ಅಧಿಕಾರಿಗಳ ಕುಟುಂಬಸ್ಥರಿಗೆ ಚೇಲಾಗಳಿಗೆ ಸಲೀಸಾಗಿ ಪಾಸ್ ಗಳು ಸಿಗುತ್ತವೆ, ಇಂತಹ ಮುಗ್ಧ ಮನಸ್ಸುಗಳಿಗೇಕೆ ಸಿಗುತ್ತಿಲ್ಲ, ಪಾಸ್ ಗಳಿಗೆ ಧರ ನಿಗದಿ ಮಾಡಿ ಮಾರಟ ಮಾಡಲಿ ಬಿಡಿ, ಮುಂದಿನ ಸೀಟುಗಳಿಗೆ ಇಷ್ಟು, ಹಿಂದಿನ ಸೀಟುಗಳಿಗೆ ಇಷ್ಟು ದುಡ್ಡು ಎಂದು ನಿಗದಿ ಮಾಡಲಿ.

ಅದನ್ನು ಮಾಡುವುದು ಬಿಟ್ಟು ಜಿಲ್ಲಾಡಳಿತ ಪುಗಸಟ್ಟೆ ಪಾಸುಗಳನ್ನು ಮಾಡಿ ಅವರ ಸಂಬಂಧಿಕರಿಗೆ, ನೆಂಟರಿಗೆ, ಗೆಳೆಯರಿಗೆ, ರಾಜಕಾರಿಗಳ ಚೇಲಾಗಳಿಗೆ ಹಂಚಲು ಇದೇನು ಆಂಜನೇಯಸ್ವಾಮಿ ಚರ್ಪೇ ಸ್ವಾಮಿ, ಈ ದಸರಾ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಬರುವ ಅತಿಥಿಗಳು ಪುಗಸಟ್ಟೆ ಬಂದಿದ್ದಾರೆಯೇ, ಜಿಲ್ಲಾಡಳಿತಕ್ಕೆ ಸಲಹೆ ಕೊಡಲು ಯಾವ ಬುದ್ದಿವಂತ, ಪ್ರಜ್ಞಾವಂತ ಆಧಿಕಾರಿಗಳು ಇಲ್ಲವೆ.

ಹೋಗಲಿ ಇವರೇನೋ ಬಡಪಾಯಿಗಳು ಕೊನೆಗೆ ಅತ್ತುಕೊಂಡು, ಕಣ್ಣೀರು ಒರೆಸಿಕೊಂಡು ಅಲ್ಲೆಲ್ಲೋ ಪಾನಿಪೂರಿ ತಿಂದು ಮನೆಗೆ ಹೋಗುತ್ತಾರೆ.

ಪ್ರತಿ ದಿನ ಇವರನ್ನು ತಲೆ ಮೇಲೆ ಹೊತ್ತುಕೊಂಡು, ಮಳೆ, ಬಿಸಿಲು, ಗಾಳಿ, ಊಟ, ನಿದ್ದೆಯಿಲ್ಲದೆ ಸುದ್ದಿ ಮಾಡುವ ಪತ್ರಕರ್ತರ ಈ ದಸರಾದಲ್ಲಿ ಕಾಲಿನ ಕಸಕ್ಕಿಂತ ಕಡೆಯಾಗಿ ಜಿಲ್ಲಾಡಳಿತ ನಡೆಸಿಕೊಂಡಿದೆ, ಹೊತ್ತು ಗೊತ್ತಿಲ್ಲದೆ ಸುದ್ದಿ ಮಾಡುವ ಅವರ ಮನೆಯವರಿಗೆ, ಮಕ್ಕಳಾದರೂ ಈ ದಸರಾದಲ್ಲಿ ಒಂದು ವ್ಯವಸ್ಥಿತವಾಗಿ ವ್ಯವಸ್ಥೆ ಮಾಡಿ ಅವರ ಸಂಬಂಧಿಕರಿಗೆ ಸಾಂಸ್ಕøತಿಕ ಕಾರ್ಯಕ್ರಮ ನೋಡಲು ಅನುವು ಮಾಡಿಕೊಟ್ಟಿದ್ದೀರಾ ಇಲ್ಲ—

ಪಾಸ್ ಗಾಗಿ ಜಿಲ್ಲಾಡಳಿತದ ಬಳಿ ಪತ್ರಕರ್ತರು ಭಿಕ್ಷೆ ಬೇಡಬೇಕಾ—? ಇದಲ್ಲದೆ ಪೌರಕಾರ್ಮಿಕರಿಗೆ,ಪತ್ರಕರ್ತರಿಗೆ ದಸರಾ ಸಮಿತಿಯಲ್ಲಿ ಸನ್ಮಾನ ಎಂದು ನಿಕೃಷ್ಠವಾಗಿ ನಡೆದುಕೊಂಡು ಸನ್ಮಾನಿಸದೇ ಅವಮಾನ ಮಾಡಿ ಕಳಿಸಿದ್ರಲ್ಲ, ಅಂದರೆ ಈ ಮಾಸಲು ಪೌರಕಾರ್ಮಿಕರಿಗೆ ನಮ್ಮ ಕೈಗಳಿಂದ ದಸರಾ ಫಲಕ ನೀಡಿದರೆ ಅವರು ದಿನಾ ಬಾಚುವ ಹೇಲು-ಉಚ್ಚೆ ನಮ್ಮ ಕೈಗೆ ಅಂಟಿಕೊಂಡು ಬಿಡುತ್ತದೆ, ಆ ಗಲೀಜು ಜನರ ಕೈ ಮುಟ್ಟಿಸಿಕೊಳ್ಳದ ಮೇಲೆ ಯಾಕೆ ಕರೆದು ಅವಮಾನ ಮಾಡಿದ್ರೀ—

ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ, ದಸರಾ ದರಬಾರಿನಲ್ಲಿ ಬಡವರ, ಪೌರಕಾರ್ಮಿಕರ, ಪತ್ರಕರ್ತರ ಕಣ್ಣಲ್ಲಿ ನೀರು ತರಿಸಿದ್ದೀರ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಕಾದು ನೋಡಬೇಕಾಗಿದೆ, ಅದೇ ಹೇಳುತ್ತಾರಲ್ಲ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವಂತಾಗಿದೆ ಈ ವರ್ಷದ ದಸರಾ ಕಥೆ– ನಾಡದೇವತೆ ಚಾಮುಂಡಿ ಇದನ್ನೆಲ್ಲಾ ನೋಡುತ್ತಿದ್ದಾಳೆ ಸ್ವಾಮಿ—ಮುಂದಿನ ದಿನಗಳಲ್ಲಿ ದೊಡ್ಡ ದಸರಾವಿದೆ— ಜೈ ಚಾಮುಂಡೇಶ್ವರಿ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *