ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ ಅ.23ರಂದು ತೆರೆಗೆ ಕಾದಿಹಳು “ಶಬರಿ”

ರಾಮನು ಬರುವನೆಂದು ಶಬರಿಯು ಕಾಡಿನ ಹಣ್ಣುಗಳನ್ನು ಇಟ್ಟುಕೊಂಡು ಕಾಯುತ್ತಿದ್ದಳಂತೆ, ಹಾಗೆಯೇ ತಂದೆ-ಮಗಳ ಸಂಬಂಧ ಹೇಗಿರಬೇಕೆಂಬ ಸಿನಿಮಾವೊಂದು ಇದೇ ಅಕ್ಟೋಬರ್ 23ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಾ ಇದೆ.

ಅದೇ ಶಬರಿ ಎಂಬ ಚಲನ ಚಿತ್ರವು ತೆರೆಗೆ ಬರುತ್ತಲಿದೆ, ಶಬರಿ ಚಿತ್ರವನ್ನು ಯಶಸ್ವಿ ಚಲನ ಚಿತ್ರ ಒರಟ ಚಲನ ಚಿತ್ರದ ಒರಟ ಶ್ರೀ ನಿರ್ದೇಶಿಸಿದ್ದು, ಶಬರಿ ಪಾತ್ರದಲ್ಲಿ ಕಲರ್ಸ್ ಕನ್ನಡವಾಹಿನಿ ‘ರಾಣಿ’ ಧಾರಾವಾಹಿಯ ರಾಣಿ ಪಾತ್ರ ಮಾಡಿದ್ದು, ನಾಯಕಿಯಾಗಿ ಕೃತಿಕಾ ಗೌಡ, ಚಿತ್ರದ ನಾಯಕನಾಗಿ ಸಮರ್ಥ್ ಮತ್ತು ಖಡಕ್ ಪೊಲೀಸ್ ಅಧಿಕಾರಿಯಾಗಿ ಯೋಗೀಶ್ ವೀರ್ ನಟಿಸಿದ್ದಾರೆ.

ನಾಯಕ ನಟಿ ಕೃತಿಕಾ ಗೌಡ ಅವರು ಮೈತ್ರಿನ್ಯೂಸ್ ನೊಂದಿಗೆ ಮಾತನಾಡಿ ನಾನು ಶಬರಿ ಸಿನಿಮಾದಲ್ಲಿ ನಟಿಸಿರುವುದಕ್ಕೆ ತುಂಬಾ ಖುಷಿಯಾಗುತ್ತದೆ, ಮೊದಲ ಬಾರಿಗೆ ನಾನು ನಾಯಕಿಯಾಗಿ ನಟಿಸುರುವ ಸಿನಿಮಾ ಇದಾಗಿದ್ದು, ಈ ಚಿತ್ರದ ನಿದೇಶಕರಾದ ಶ್ರೀ ಅವರು ಈ ಚಿತ್ರದಲ್ಲಿ ನಟಿಸುವ ಪರ್ ಫಾರ್ಮೆನ್ಸ್ ಇದೆ ಬಾ ಎಂದು ನಾಯಕಿಯ ಪಾತ್ರ ನೀಡಿದ್ದಾರೆ, ಒಂದು ಹಳ್ಳಿ ಹುಡುಗಿ ಪಾತ್ರ, ಈ ಸಿನಿಮಾದಲ್ಲಿ ಅಪ್ಪ-ಮಗಳ ಎಮೋಷನ್ ಎಲ್ಲಾರಿಗೂ ತಟ್ಟುತ್ತದೆ, ಈ ಚಿತ್ರದಲ್ಲಿ ಅಪ್ಪ-ಮಗಳ ಭಾಂದವ್ಯ, ಜನರು ನೋಡುವಂತಹ ಸಿನಿಮಾ ಇದಾಗಿದೆ ಜನರು ಬಂದು ಸಿನಿಮಾ ನೋಡಬೇಕು, ನಾನು ಸಾರ್ಟ್ ಸ್ಟೋರಿ ಯು-ಟ್ಯೂಬರ್ ಆಗಿ ಕೆಲಸ ಮಾಡಿದ್ದೇನೆ, ಈ ಸಿನಿಮಾ ಮಕ್ಕಳಿಂದ ಹಿಡಿದು ದೊಡ್ಡವರು ನೋಡುವಂತಹ ಸಿನಿಮಾವಾಗಿದೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಶಬರಿ ನಾಯಕಿ ಕೃತಿಕಾಗೌಡ ಮತ್ತು ಅವರ ತಂದೆ-ತಾಯಿಯರ ಜೊತೆ ಮೈತ್ರಿನ್ಯೂಸ್ ಸಂಪಾದಕರಾದ ವೆಂಕಟಾಚಲ.ಹೆಚ್.ವಿ.

ಚಿತ್ರ ನಿರ್ದೇಶಕ ಒರಟ ಶ್ರೀ ಮಾತನಾಡಿ ಒರಟ ಸಿನಿಮಾಕ್ಕೆ ನನಗೆ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿ ಬಂದ ನಂತರ ಬಹಳ ವರ್ಷಗಳ ಕಾಲ ನಾನು ಯಾವ ಸಿನಿಮಾವನ್ನೂ ನಿರ್ದೇಶಿಸಿರಲಿಲ್ಲ, ಈಗ ಶಬರಿ ಎಂಬ ಸಿನಿಮಾವನ್ನು ನಿರ್ದೇಶಿಸಿದು ಚಿತ್ರವು ತಂದೆ-ಮಗಳ ಕಥೆಯಾಗಿದ್ದು ಮನಕಲಕುವ ಚಲನ ಚಿತ್ರ ಇದಾಗಿದ್ದು, ಈ ಸಿನಿಮಾ ಪ್ರೇಕ್ಷಕರನ್ನು ಚಿತರ ಮಂದಿರಗಳಿಗೆ ಕರೆ ತರಲಿದೆ ಎಂಬ ನಂಬಿಕೆಯಿಂದೆ, ಬಹಳ ಜನ ಕನ್ನಡ ಸಿನಿಮಾಕ್ಕೆ ಥಿಯೇಟರ್ ಗಳು ಸಿಗುವುದಿಲ್ಲ ಎನ್ನುತ್ತಾರೆ, ಒಂದು ಒಳ್ಳೆಯ ಸಿನಿಮಾ ಮಾಡಲು ದೊಡ್ಡ ಬಜೆಟ್ ಬೇಕಾಗಿಲ್ಲ, ಕಥೆ, ಹಾಡುಗಳು, ನಿರೂಪಣೆ ಚೆನ್ನಾಗಿದ್ದಾರೆ, ಜನ ಲಾಂಗು, ಕತ್ತಿ ಸಿನಿಮಾಗಳಿಗಿಂತ ಬಂಗಾರದ ಮನುಷ್ಯ ಸಿನಿಮಾದಂತಹ ಮನುಷ್ಯ ಸಂಬಂಧಗಳನ್ನು ಬೆಸೆಯುವ ಸಿನಿಮಾವನ್ನು ಬಯಸುತ್ತಿದ್ದು, ನಮ್ಮ ‘ಶಬರಿ’ ಸಿನಿಮಾದಲ್ಲಿ ಮನುಷ್ಯ ಸಂಬಂಧದ ಎಳೆಯು ಇದ್ದು, ಈ ಸಿನಿಮಾ ಜನರಿಗೆ ಇಷ್ಟವಾಗಲಿದೆ ಎಂಬ ನಂಬಿಕೆಯಿದೆ, ಸಿನಿಮಾಕ್ಕೆ ಹೇಮಂತ್‍ಕುಮಾರ್ ಅವರು ಸಂಗೀತ ನಿರ್ದೇಶನ ಮಾಡಿದ್ದು ಹಾಡುಗಳು ಸಹ ತುಂಬಾ ಸೊಗಸಾಗಿ ಮೂಡಿ ಬಂದಿವೆ ಎಂದು ತಿಳಿಸಿದರು.

ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗ ಶ್ರೀಗಳ ಆಶೀರ್ವಾವನ್ನೂ ಸಹ ಪಡೆಇದಿದ್ದು, ಸಿನಿಮಾ ತುಮಕೂರು, ಮಂಡ್ಯ ಮತ್ತು ಹಾಸನದಲ್ಲಿ ಗೆದ್ದರೆ ಇಡೀ ರಾಜ್ಯದಲ್ಲಿ ಗೆಲ್ಲುತ್ತದೆ, ಈ ಸಿನಿಮಾ ಗೆಲ್ಲಲಿದೆ ಎಂಬ ಆಶಯ ನಮಗಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಶಬರಿ ಪಾತ್ರದ ಪುಟಾಣಿ ರಾಣಿ ಮಾತನಾಡಿ ಈ ಶಬರಿಯ ಪಾತ್ರವನ್ನು ಕಣ್ತುಂಬಿಕೊಳ್ಳಲು ಥಿಯೇಟರಿಗೆ ಬಂದು ಸಿನಿಮಾ ನೋಡಬೇಕು, ಈ ಸಿನಿಮಾವನ್ನು ಸಣ್ಣ ಮಕ್ಕಳಿಂದ ದೊಡವರು, ವಯಸ್ಕರು ಸೇರಿದಂತೆ ಎಲ್ಲಾರೂ ನೋಡಬಹುದು ಎಂದು ತಿಳಿಸಿದರು.

ನಿರ್ದೇಶಕ: ಒರಟ ಶ್ರೀ (Orata Shri)- ಇವರ 5ನೇ ಸಿನಿಮಾ ಇದುನಿರ್ಮಾಣ: ಭರವಿ ಫಿಲ್ಮ್ಸ್ – ರಮೇಶ್ ಬದ್ರಿ, ವಿಷ್ಣುಕಾಂತ್ ಂಹೀರೋ: ಸಮರ್ಥ್ ರಮೇಶ್ (ಇದೇ ಮೊದಲ ಸಿನಿಮಾ, ಇವರ ತಂದೆಯೇ ನಿರ್ಮಾಪಕರು)ಹೀರೋಯಿನ್: ಕೃತಿಕಾ ಗೌಡ, ಜೊತೆಗೆ ಬಾಲ ಕಲಾವಿದೆ ಧನ್ವಿ, ಎಂ.ಕೆ. ಮಠ, ನೀನಾಸಂ ಅಶ್ವತ್, ಯೋಗೇಶ್ ವೀರ್ ಇದ್ದಾರೆ.

ಡೈರೆಕ್ಟರ್ ಅವರು ತಮ್ಮ 9 ವರ್ಷದ ಮಗನ ಡೈನೋಸಾರ್ ಪ್ರೀತಿ ನೋಡಿ ಈ ಕಥೆ ಬರೆದಿದ್ದಾರಂತೆ. ನಮಗೆ ಚಿಕ್ಕಂದಿನಲ್ಲಿ ಗೋಲಿ, ಬುಗುರಿ ಪ್ರೀತಿ ಇರುತ್ತೆ, ಆದ್ರೆ ದೊಡ್ಡವರಾದ ಮೇಲೆ ಬಿಟ್ಟುಬಿಡ್ತೀವಿ, ಅದೇ ಪ್ರೀತಿ ದೊಡ್ಡವನಾದ ಮೇಲೂ ಇದ್ರೆ ಹೇಗಿರುತ್ತೆ ಅನ್ನೋದು ಯೋಚನೆ.ಸಿನಿಮಾದಲ್ಲಿ ಹೀರೋಗೆ ಚಿಕ್ಕಂದಿನಲ್ಲಿ ತಂದೆ ಕೊಟ್ಟ ಹಳೆಯ ಜೀಪ್ ಮೇಲೆ ಅದೇ ತರಹದ ಪ್ರೀತಿ. ತಂದೆ ತೀರಿಕೊಂಡ್ರೂ ಆ ಜೀಪನ್ನು ಬಿಟ್ಟು ಕೊಡಲ್ಲ. ಆಮೇಲೆ ಅವನ ಜೀವನಕ್ಕೆ ಶಬರಿ ಅನ್ನೋ ಒಂದು ಪುಟ್ಟ ಹುಡುಗಿ ಬರ್ತಾಳೆ, ಅವರಿಬ್ಬರ ನಡುವೆ ಅಪ್ಪ-ಮಗಳ ತರಹ ಬಾಂಧವ್ಯ ಬೆಳೆಯುತ್ತೆ. ಆ ಹುಡುಗಿಯ ಹಿಂದಿನ ಕರಾಳ ರಹಸ್ಯವೊಂದು ಬಯಲಾಗಿ ಅವಳಿಗೆ ಅಪಾಯ ಎದುರಾದಾಗ, ತನ್ನ ನೆಚ್ಚಿನ ಜೀಪ್ ಇಟ್ಕೊಂಡು ಅವಳನ್ನು ಹೇಗೆ ಕಾಪಾಡ್ತಾನೆ ಅನ್ನೋದೇ ಕಥೆ. cinemaexpress.com ಫ್ಯಾಮಿಲಿ ಡ್ರಾಮಾ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್ ಕೂಡ ಇದೆ ಅಂತ ಡೈರೆಕ್ಟರ್ ಹೇಳಿದ್ದಾರೆ.ಹಾಡು ‘ತಂದಾನಿ ತಾನೋ’ ಈಗಾಗಲೇ ಲಹರಿ ಮ್ಯೂಸಿಕ್ ನಲ್ಲಿ ಹಿಟ್ ಆಗಿದೆ.

ಇಂತಹ ಸಿನಿಮಾ ಅಕ್ಟೋಬರ್ 23ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಈ ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಅಪ್ಪಿಕೊಳ್ಳಲಿದ್ದಾರೆ ಎಂಬುದು ಸಿನಿಮಾ ಬಿಡುಗಡೆಯಾದ ನಂತರ ತಿಳಿಯಲಿದ್ದು, ಒಟ್ಟಿನಲ್ಲಿ ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾವೊಂದು ನಮ್ಮ ಊರಿಗೆ ಬಂದಾಗ ವೀಕ್ಷಿಸೋಣ, ಪ್ರೋತ್ಸಾಹಿಸೋಣ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *