ತುಮಕೂರು : ಮುಂಬರುವ 2023 ಚುನಾವಣೆಗೆ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾನೇ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ತಿಳಿಸಿದರು
ತುಮಕೂರಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಐವತ್ತೈದು ಸಾವಿರ ಮತ ಪಡೆದು ಸೋತಿದ್ದೇನೆ, ಮುಂಬರುವ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಜನತಾ ಜಲಧಾರ ನಡೆದ ಕಾರ್ಯಕ್ರಮದ ಸಮಯದಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ ಎಂದರು.
ಇನ್ನು ಮುಂಬರುವ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಹಲವರು ಅಭ್ಯರ್ಥಿಗಳಿದ್ದಾರೆ ಅದರಲ್ಲಿ ತಪ್ಪೇನಿಲ್ಲ ಆದರೆ ಮುಂಬರುವ ಚುನಾವಣೆಗೆ ತುಮಕೂರು ವಿಧಾನಸಭಾ ಕ್ಷೇತ್ರ 1 ನನಗೆ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ ಅದರಂತೆ ನಾನು ಕ್ಷೇತ್ರದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ 55,000 ಮಹ ಅದರ ಆಧಾರದ ಮೇಲೆ ಮತ್ತೊಂದು ಬಾರಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದರು.
ಇನ್ನು ತುಮಕೂರು ಜಿಲ್ಲೆಗೆ ಪಂಚರತ್ನ ಯಾತ್ರೆ, ನವಂಬರ್ 15ರಂದು ಜಿಲ್ಲೆಗೆ ಆಗಮಿಸ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಿ.ಎಂ. ಇಬ್ರಾಹಿಂ ಸೇರಿದಂತೆ ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಹಾಜರಿರಲಿದ್ದಾರೆ ಎಂದು ತಿಳಿಸಿದರು.
2023ರಲ್ಲಿ ನಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು, ನಾನು ಶಾಸಕನಾದರೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಗೊಳಿಸಲಾಗುವುದು ಹಾಗೂ ಚರಂಡಿ ಹಾಗ ಒಳಚರಂಡಿ ಮತ್ತು ಸುಸಜ್ಜಿತವಾದ ರಸ್ತೆಗಳ ನಿರ್ಮಾಣ. ವಿದ್ಯುತ್ ಇಲಾಖೆಯು ಖಾಸಗೀಕರಣಗೊಳ್ಳುತ್ತಿರುವುದನ್ನು ನಿಲ್ಲಿಸಿ, ಸರ್ಕಾರದ ಹಿಡಿತದಲ್ಲಿರುವ ನೋಡಿಕೊಳ್ಳಲಾಗುವುದು. ತುಮಕೂರು ನಗರದ ಪ್ರತಿ ಮನೆ ಮನೆಗೂ ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದರು
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಕ್ಕಳಿಗೆ ಎಲ್ ಕೆಜಿ ಯಿಂದ ದ್ವಿತೀಯ ಪಿಯುಸಿ ವರೆಗೆ ಅಂತರಾ ಗುಣಮಟ್ಟದ ಸರ್ಕಾರದ ವತಿಯಿಂದ ಸ್ಟೇಟ್ /ಸಿಬಿಎಸ್ಸಿ/ಐಸಿಎಸ್ಸಿ ಸಿಲಬಸ್ ವಿದ್ಯಾಭ್ಯಾಸವನ್ನು ಉದ ಒದಗಿಸಲಾಗುವುದು ಎಂದು ತಿಳಿಸಿದರು.
ತುಮಕೂರು ನಗರದ ಪ್ರತಿ ವಾರ್ಡಿನಲ್ಲಿ 24ಘಿ7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು, ಪ್ರತಿ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು, ತುಮಕೂರು ನಗರದ ಪ್ರತಿ ಮನೆಗೂ 200 ಯೂನಿಟ್‍ಗಳ ವರೆಗೆ ಉಚಿತವಾಗಿ ಗೃಹಬಳಕೆ ವಿದ್ಯುತ್ ಒದಗಿಸಲಾಗುವುದು ತುಮಕೂರು ನಗರದ ಪ್ರತಿ ವಾರ್ಡಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದು, ಪ್ರತಿ ಕುಟುಂಬಕ್ಕೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು. ತುಮಕೂರು ನಗರದ ಪ್ರತಿ ಮನೆಗೂ 200 ಯೂನಿಟ್‍ಗಳ ವರೆಗೆ ಉಚಿತವಾಗಿ ಗೃಹಬಳಕೆ ವಿದ್ಯುತ್ ಒದಗಿಸಲಾಗುವುದು, ಯುವಕರು ಮತ್ತು ಯುವತಿಯರಿಗೆ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಉಚಿತ ತರಬೇತಿ ನೀಡುವುದು ಮತ್ತು ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದರು
ಮಹಿಳೆಯರ ಸಬಲೀಕರಣಕ್ಕೆ ಸ್ವಯಂ ಉದ್ಯೋಗಾವಕಾಶಗಳಿಗಾಗಿ ಸರ್ಕಾರಿ ಬ್ಯಾಂಕುಗಳು ಹಾಗೂ ಕೋ-ಆಪರೇಟಿವ್ ಬ್ಯಾಂಕ್ ಗಳ ಮುಖಾಂತರ 0% ಬಡ್ಡಿ ರಹಿತ ಸಾಲಗಳನ್ನು ನೀಡಿ ಸ್ವಯಂ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗುವುದು ಎಂದು ಎಂದರು
ಪತ್ರಿಕಾಗೋಷ್ಠಿಯಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಮನು, ವಕ್ತಾರರಾದ ಮಧುಸೂದನ್, ಪ್ರೆಸ್ ರಾಜಣ್ಣ ಮುಂತಾದವರಿದ್ದರು