ತುಮಕೂರು: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜುರವರು ತುಮಕೂರು ಕ್ಯಾತ್ಸಂದ್ರ ದಿಂದ ಗುಬ್ಬಿ ಗೇಟ್ ವರೆಗಿನ ರಿಂಗ್ ರಸ್ತೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಹೆಸರು ನಾಮಕರಣ ಮಾಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ನೀಡಿದರು.
ನಗರಾಧ್ಯಕ್ಷರಾದ ಕೆ.ಟಿ.ವಿಜಯ್ ಗೌಡ ರವರು ಜೆಡಿಎಸ್ ಜಿಲ್ಲಾ ವಕ್ತಾರರು ಮೆಡಿಕಲ್ ಮಧುರವರು ಸಿದ್ರಾಜು ಕಾರ್ಪೋರೇಟರ್ ಧರಣೇಂದ್ರರವರು ಮಾಜಿ ಕಾರ್ಪೊರೇಟರ್ ಟಿ.ಜಿ.ನರಸಿಂಹರಾಜು ರವರು ಜೆಡಿಎಸ್ ಯುವ ಮುಖಂಡರಾದ ಪ್ರತ್ವಿಗೌಡ ರವರು ಶ್ರೀಧರ್ ಗೌಡ ರವರು ಜೆಡಿಎಸ್ ರೈತ ಘಟಕ ಜಿಲ್ಲಾಧ್ಯಕ್ಷರಾದ ಎಸ್.ರಂಗನಾಥ್ ಉಪಸ್ಥಿತರಿದ್ದರು