ಗುಬ್ಬಿ ಹೆಚ್‍ಎಎಲ್ ಯುಪಿಎ ಸರ್ಕಾರದ ಅವಧಿಯಲ್ಲಿ ಮಂಜೂರಾತಿ: ಜಿ.ಎಸ್.ಬಸವರಾಜು

ಗುಬ್ಬಿ ಹೆಚ್‍ಎಎಲ್ ಹೆಲಿಕ್ಯಾಪ್ಟರ್ ಘಟಕದ ಮಂಜೂರಾತಿಯನ್ನು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಪ್ರಮುಖರು ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಂಸದನಾಗಿದ್ದಾಗ ಹೆಚ್‍ಎಎಲ್ ನೀಡುವಂತೆ ಮನವಿ ಮಢಿದ ಹಿನ್ನಲೆಯಲ್ಲಿ ಎ.ಕೆ.ಆಂಟನಿಯವರು ಮಂಜೂರು ಮಾಡಿದರು, ಅವರಿಗೆ ನಾಣು ಅಭಿನಂದಿಸುವುದಾಗಿ ತಿಳಿಸಿದರು.

ಆ ನಂತರ ಬಂದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ 610 ಎಕರೆ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಹೆಲಿಕ್ಯಾಪ್ಟರ್ ತಯಾರಿಕಾ ಘಟಕದ ಶಂಕುಸ್ಥಾಪನೆಯ ಭೂಮಿ ಪೂಜೆಯನ್ನು 2016ರಂದು ಪ್ರಧಾನಿ ನರೇಂದ್ರಮೋದಿರವರು ಮಾಡಿದ್ದರು. ಈ ಘಟಕದಲ್ಲಿ ಇಂಡೋ-ರಷ್ಯನ್ ಜಂಟಿ ಯೋಜನೆಯಾಗಿರುವ ಕೆಎ 226ಟಿ ಅವಳಿ ಇಂಜಿನ್ ಹೆಲಿಕ್ಯಾಪ್ಟರ್ ಮತ್ತು 3 ಟನ್ ಸಾಮಥ್ಯದ ಹೊಸ ಪೀಳಿಗೆ ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್ (ಎಲ್‍ಯುಎಚ್)ಗಳನ್ನು “ಮೇಕ್ ಇನ್ ಇಂಡಿಯಾ” ಮತ್ತು “ವೋಕಲ್ ಫಾರ್ ಲೋಕಲ್” ಎಂಬ ಘೋಷಣೆಯ ಅಡಿಯಲ್ಲಿ ತಯಾರಿಸುವ ಯೋಜನೆ ಇದಾಗಿದೆ. ಇಲ್ಲಿ ಮುಂದಿನ 15 ವರ್ಷಗಳಲ್ಲಿ 600 ಹೆಲಿಕ್ಯಾಪ್ಟರ್ ಉತ್ಪಾದನೆಯ ಗುರಿ ಇದೆ. ಈಗಾಗಲೇ ಊಂಐ ರಕ್ಷಣಾ ಇಲಾಖೆ ಹಾಗೂ ವಿವಿಧ ದೇಶ-ವಿದೇಶಗಳ ಖಾಸಗಿ ಕಂಪನಿಗಳಿಂದ ಮುಂಗಡವಾಗಿ ಆಡರ್Àರ್ ಪಡೆದಿರುವುದು ಸಂತಸದ ವಿಷಯವಾಗಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಹೇಳಿದರು.

 ಗುಬ್ಬಿ ಸ್ಥಾವರವು ಜಿಲ್ಲೆ ಮತ್ತು ರಾಜ್ಯಾದ್ಯಾಂತ ಕೈಗಾರಿಕಾ ಬೆಳವಣಿಗೆಯನ್ನು ವಿಕೇಂದ್ರಿಕರಿಸುವ ಗುರಿಯನ್ನು ಹೊಂದಿದ್ದು, ಅಭಿವೃದ್ಧಿ-ಉದ್ಯೋಗ ಸೃಷ್ಟಿಯ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಕೌಶಲ್ಯ ಪೂರ್ಣ ಕಾರ್ಮಿಕ ಹಾಗೂ ತಾಂತ್ರಿಕ ಪರಿಣತಿಯ ಬಳಕೆಯನ್ನು ಉತ್ತೇಜಿಸಿ, ಸ್ಥಳೀಯ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುತ್ತದೆ. ಸ್ಥಳೀಯ ಪ್ರದೇಶದ ವ್ಯಾಪ್ತಿಯಲ್ಲಿ ಆರ್ಥಿಕತೆಯ ಬೆಳವಣಿಗೆ ಹೊಂದಿ, ಜನ ಸಮಾನ್ಯರಿಗೆ ಅನುಕೂಲಕರ ವಾತಾವರಣ ಸೃಷ್ಠಿಯಾಗುತ್ತದೆ ಎಂದು ತಿಳಿಸಿದರು.

 ಈ ಹೆಲಿಕ್ಯಾಪ್ಟರ್ ಘಟಕದಿಂದ ಎಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ ಶಿಕ್ಷಣ ಅಥವ ಕೋರ್ಸ್‍ನಿಂದ ಹೊರ ಬರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಪಡೆದ ಸ್ಕಿಲ್‍ಡ್ ವೃತ್ತಿಪರರಿಗೆ ಅನುಕೂಲವಾಗಲಿದೆ. ಹೊಸ ತಂತ್ರಜ್ಞಾನದ ಹರಿವಿನೊಂದಿಗೆ, ನಿರಂತರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ಘಟಕದಲ್ಲಿ ವಿಶೇಷ ತಾಂತ್ರಿಕ ಪರಿಣಿತಿ, ಅರ್ಹತೆ ಇರುವುವವರಿಗೆ ಆದ್ಯತೆ ಸಿಗಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *