ತುಮಕೂರು : ತುಮಕೂರು ನಗರ ಕ್ಷೇತ್ರಕ್ಕೆ ಜೆಡಿಎಸ್‍ನಿಂದ, ಕಾಂಗ್ರೆಸ್‍ನಿಂದ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವ ಆಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕರಾದ ಆಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಆಟಕ್ಕೆ ಕಾಂಗ್ರೆಸ್‍ನ ಪ್ರಳಾಣಿಕೆ ರಚನಾ ಸಮಿತಿಯ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಅವರು ಆಟಿಕಾಬಾಬು ಕಾಂಗ್ರೆಸ್‍ನಿಂದ ಟಿಕೆಟ್ ಅಕಾಂಕ್ಷಿಯಾಗಿ ಅರ್ಜಿ ಹಾಕಿದ್ದಾರೆ ಎಂದು ಊಹಾ ಪೋಹಗಳಿಗೆ ತೆರೆ ಎಳೆದರು.
ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ, ಶಾಸಕರಾದ ಡಾ.ಜಿ.ಪರಮೇಶ್ವರ್ ಅವರು, ಆಟ್ಟಿಕಾ ಬಾಬು ನನ್ನ ಮನೆಗೂ ಬಂದಿದ್ದರು, ತುಮಕೂರು ನಗರ ಕ್ಷೇತ್ರಕ್ಕೆ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲು ಬಯಸಿದ್ದೇನೆ ಎಂದು ಅವರ ಇಚ್ಛೆಯನ್ನು ಹೇಳಿಕೊಂಡಾಗ, ನಮ್ಮಲ್ಲಿ ಟಿಕೆಟ್ ಬೇಕೆಂದರೆ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರಬೇಕು ಮತ್ತು ಹೈಕಮಾಂಡ್ ಮಾತ್ರ ಟಿಕೆಟ್ ಅಂತಿಮಗೊಳಿಸಲಿದೆ, ನೀವು ಅರ್ಜಿ ಹಾಕಿ, ಅವರಿವರನ್ನು ಭೇಟಿ ಮಾಡಿದ ತಕ್ಷಣ ಟಿಕೆಟ್ ಸಿಗುವುದಿಲ್ಲ ಎಂದು ಹೇಳಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ಅವರು ಆಟ್ಟಿಕಾ ಬಾಬು ಟಿಕೆಟ್ ಆಟಕ್ಕೆ ತೆರೆ ಎಳೆದರು.