ತುಮಕೂರು : ನಮ್ಮ ಪಕ್ಷದ ಪ್ರಣಾಳಿಕೆಯನ್ನು ಆಯಾ ಜಿಲ್ಲೆಗಳ ಸಮಸ್ಯೆಗಳನ್ನೊಳಗೊಂಡಂತೆಯೇ ತಯಾರು ಮಾಡಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಕಮಿಟಿಯ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಪ್ರಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು, ಪ್ರತಿ ದಿನ ಪ್ರಣಾಳಿಕೆ ರಚನೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ, ನಿನ್ನೆಯು ಸಹ ಸುರ್ಜೆವಾಲರವರ ಜೊತೆ ಹಲವಾರು ಗಂಟೆಗಳ ಕಾಲ ಚರ್ಚೆ ನಡೆಯಿತು, ಈಗಾಗಾಲೇ ಕಲ್ಯಾಣ ಕರ್ನಾಟಕ ಮತ್ತು ಮಂಗಳೂರಿಗೆ ಭೇಟಿ ನೀಡಿ ಪ್ರಳಾಣಿಕೆಗೆ ಸ್ಥಳೀಯ ಸಮಸ್ಯೆಗಳನ್ನು ಆಲಿಸಲಾಗಿದೆ, ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸುವುದರ ಬಗ್ಗೆಯೂ ಆಲೋಚನೆಯಿದ್ದು, ಆಯಾ ಜಿಲ್ಲೆಯ 10 ವಿಷಯಗಳನ್ನು ಇಟ್ಟುಕೊಂಡು ಪ್ರಣಾಳಿಕೆ ರಚನೆಯಾಗÀಲಿದೆ ಎಂದು ತಿಳಿಸಿದರು.
ಪ್ರತಿ ಬಡ ಕುಟುಂಬದ ಮಹಿಳೆಗೆ 2000 ರೂ.ಗಳನ್ನು ನೀಡಲು ಪ್ರಣಾಳಿಕೆಯಲ್ಲಿ ಸೇರಿಸಲು ಒಪ್ಪಿದ್ದು, ಇದಕ್ಕೆ ವರ್ಷಕ್ಕೆ 24ಸಾವಿರ ಕೋಟಿ ಹಣಬೇಕು ಇದನ್ನು ಯಾವ ಮೂಲದಿಂದ ಭರಿಸಬೇಕೆಂದು ಸಹ ಚರ್ಚೆಯಾಗಿದೆ, ಇದಲ್ಲದೆ, 1ರಿಂದ 5ನೇ ತರಗತಿಯ ಮಕ್ಕಳಿಗೆ 150ರೂ.ಗಳು ಮತ್ತು 6ರಿಂದ 10ನೇ ತರಗತಿಯಲ್ಲಿನ ಮಕ್ಕಳಿಗೆ ಪ್ರತಿ ತಿಂಗಳು 300ರೂ.ಗಳನ್ನು ನೀಡುವ ಬಗ್ಗೆ ಆಲೋಚನೆಯಿದ್ದು, ಇದನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ತಿಳಿಸಿದರು.
ಅಭ್ಯರ್ಥಿಗಳ ಟಿಕೆಟ್ ಹಂಚಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಕೆಲ ಕ್ಷೇತ್ರಗಳಿಗೆ ಒಬ್ಬರ ಹೆಸರನ್ನು ಮಾತ್ರ ಅಂತಿಮಗೊಳಿಸಲಾಗಿದೆ, ಕೆಲವು ಕ್ಷೇತ್ರಗಳಿಗೆ ಎರಡರಿಂದ ಮೂರು ಹೆಸರುಗಳನ್ನು ಅಂತಿಮಗೊಳಿಸಲಾಗಿದೆ, ಶೀಘ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
110 ಮಂದಿ ಮಹಿಳೆಯರು ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ದು, ಗೆಲ್ಲುವಂತಹ ಮಹಿಳೆಯರಿಗೆ ಟಿಕೆಟ್ ಖಂಡಿತವಾಗಿ ಹೈಕಮಾಂಡ್ ಟಿಕೆಟ್ ನೀಡಲಿದೆ ಎಂದರು.
ಹೆಚ್‍ಎಎಲ್ ಸ್ಥಳೀಯರಿಗೆ ಉದ್ಯೋಗ ನೀಡಲು ಒತ್ತಾಯ: ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲಿನಲ್ಲಿ ಪ್ರಾರಂಭವಾಗುತ್ತಿರುವ ಹೆಚ್‍ಎಎಎಲ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲು ಆದ್ಯತೆ ನೀಡಬೇಕು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಜಿಲ್ಲೆಯ ಉದ್ಯೋಗಿಗಳು ಟೆಕ್ನಿಕಲ್ ಎಕ್ಸ್‍ಪರ್ಟ್ ಇರದಿದ್ದರೆ ನೇಮಕಾತಿ ಮಾಡಿಕೊಂಡು 10ತಿಂಗಳ ತರಬೇತಿಯನ್ನು ಹೆಚ್‍ಎಎಲ್‍ನವರೆ ನೀಡಬೇಕು ಎಂದು ಒತ್ತಾಯಿಸಿದರು.