ತುಮಕೂರು : ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳಿಕಾವಲ್ ನಲ್ಲಿರುವ ಹೆಲಿಕಾಪ್ಟರ್ ಘಟಕಕ್ಕೆ ಹಾಗೂ ಬೆಂಗಳೂರಿನ ಎಚ್.ಎ.ಎಲ್ ಕೇಂದ್ರ ಕಚೇರಿಗೆ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ರವರ ನೇತೃತ್ವದ ನಿಯೋಗವು ಎರಡು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಥಳೀಯರಿಗೆ ಉದ್ಯೋಗವನ್ನು ನೀಡುವಂತೆ ಒತ್ತಾಯಿಸಿರುವುದಾಗಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನೇತೃತ್ವದ ಸರ್ಕಾರದಲ್ಲಿ ಮೂಲ ನಕ್ಷೆ ಸಿದ್ಧತೆಯಾಗಿ, ಉದ್ಘಾಟನೆಯ ಹಂತದಲ್ಲಿ ಈ ಎಚ್.ಎ.ಎಲ್ ಘಟಕದಲ್ಲಿ ತುಮಕೂರು ಜಿಲ್ಲೆಯ ನಿರುದ್ಯೋಗಿಗಳು, ತಾಂತ್ರಿಕ, ಐಟಿಐ, ಡಿಪೆÇ್ಲಮಾ, ಇನ್ನಿತರೆ ಪದವಿ ಶಿಕ್ಷಣ ಪಡೆದವರಿಗೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಣಿ ಮಾಡಿಕೊಂಡವರಿಗೆ ಪ್ರಮುಖ ಆದ್ಯತೆ ನೀಡಿ ಉದ್ಯೋಗ ಕಲ್ಪಸಿಬೇಕೆಂದು ಒತ್ತಾಯಿಸಿಲಾಗಿತ್ತು ಎಂದು ತಿಳಿಸಿದ್ದಾರೆ.
ಜಿಲ್ಲೆಯ ರಸ್ತೆ, ನೀರು ಹಾಗೂ ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡು, ಸ್ಥಳೀಯ ರೈತರ ನೂರಾರು ಎಕರೆ ಭೂಮಿಯನ್ನು ಬಳಕೆ ಮಾಡಿಕೊಂಡಿರುವ ಈ ಯೋಜನೆ ಜಿಲ್ಲೆಯ ನಿರುದ್ಯೋಗ ಯುವಕರಿಗೆ ಪ್ರಯೋಜನವಾಗಬೇಕೆಂಬ ಉದ್ದೇಶದಿಂದ ಎಚ್.ಎ.ಎಲ್ & ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸ್ಥಳೀಯ ರೈತರ ತ್ಯಾಗದಿಂದ, ತುಂಬಾ ನಿರೀಕ್ಷೆಯಿರುವ ಈ ಘಟಕವು ರಾಜ್ಯ ಹಾಗೂ ತುಮಕೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದರ ಮೂಲಕ ಅನುಕೂಲಕವಾಗಬೇಕಾಗಿದೆ. ರಾಜ್ಯದ ಪ್ರತಿμÉ್ಠಯಾಗಿರುವ, ಈ ಯೋಜನೆಯ ಸಂಪೂರ್ಣ ಫಲಾನುಭ ರಾಜ್ಯದ ಹಾಗೂ ತುಮಕೂರು ಜಿಲ್ಲೆಯ ಯುವಕರಿಗೆ ಸಿಗಬೇಕೆಂಬುದು ಒತ್ತಾಸೆ. ಇದಕ್ಕಾಗಿ ಸಹಸ್ರಾರು ಮಂದಿ ಯುವಕರು ಆಶಾಭಾವನೆಯಿಂದ ಬಹು ನಿರೀಕ್ಷೆಯಿಂದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಇದ್ದಂತಹ ಎಚ್.ಎಂ.ಟಿ ಘಟಕ ಮುಚ್ಚಲ್ಪಟ್ಟಿದ್ದು ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸಿರುವ, ಈ ಘಟಕದ ಮೂಲಕ ಉದ್ಯೋಗ ಹಾಗೂ ಆ್ಯನ್ಸಿಲರಿ ಉಪಘಟಕಗಳು, ಕಚ್ಚಾ ಪದಾರ್ಥಗಳ ವರ್ಗಾವಣೆ ಹಾಗೂ ಸ್ಥಳೀಯ ಪ್ರದೇಶದಲ್ಲಿ ಅಂಗಡಿ – ಮುಗ್ಗಟ್ಟುಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಮತ್ತು ವಾಣಿಜ್ಯ ವಹಿವಾಟುಗಳಿಗೆ ಅನುಕೂಲವಾಗುವುದು ಎಂದಿರುವ ಅವರು ಈಗಾಗಲೇ, ಬೆಂಗಳೂರು ಘಟಕದಿಂದ 400ಕ್ಕೂ ಹೆಚ್ಚೂ ನೌಕರರನ್ನು ಗುಬ್ಬಿ ಘಟಕಕ್ಕೆ ವರ್ಗಾವಣೆ ಮಾಡಿದ್ದು ಹಾಗೂ 800ಕ್ಕೂ ಹೆಚ್ಚು ಐಟಿಐ ಮತ್ತು ಗ್ರೂಪ್ ಡಿ ನೌಕರರನ್ನು ನಿಯೋಜನೆ ಮೇರೆಗೆ ಆಯ್ಕೆಮಾಡಲಾಗಿದೆ ಎಂದು ತಿಳಿಸಿದ್ದಾರೆ.