ಕೆಂಪಣ್ಣ ಅಂಗಡಿ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ , ಪರದಾಡಿದ ಪ್ರಯಾಣಿಕರು, ಕಾಣೆಯಾದ ಪೊಲೀಸರು

ತುಮಕೂರು : ಎಸ್ ಐ.ಟಿ.ಕೆಂಪಣ್ಣ ಅಂಗಡಿ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಶೆಟ್ಟಿಹಳ್ಳಿ ಅಂಡರ್ ಪಾಸ್ ನಲ್ಲಿ ಕಾರುಗಳು ಸಾಲುಗಟ್ಡಿ ನಿಂತಿದ್ದವು.

ಸಂಜೆಯ ವೇಳೆಯಲ್ಲಿ ಹಲವಾರು ಸಲ ಕೆಂಪಣ್ಣ ಅಂಗಡಿ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಗಂಟೆಗಟ್ಟಲೆ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಕಿರಿ ಕಿರಿ ಮತ್ತು ಪರದಾಡುವಂತಾದರೂ ಟ್ರಾಫಿಕ್ ಪೊಲೀಸರು ಪರಿಹಾರ ಹುಡುಕಿಲ್ಲ.

ಇಂದು  ಸಂಜೆ 7 .30 ರಿಂದ ಕೆಂಪಣ್ಣ ಅಂಗಡಿ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದರೂ ಸ್ಥಳದಲ್ಲಿ ಯಾವ ಟ್ರಾಫಿಕ್ ಪೊಲೀಸರು ಇರಲಿಲ್ಲ, ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡಿದ್ದ ಜನರು ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದರು.

ಯಾವ ಸರ್ಕಲ್ ನಲ್ಲಿ ಪೈನ್ ಹಾಕುತ್ತಿದ್ದಾರೋ ಜನ ಸತ್ತರು ಪರವಾಗಿಲ್ಲ, ಇವರು ಪೈನ್ ಹಾಕೋದು ಬಿಡಲ್ಲ, ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡವರ ಮಾತುಗಳು.

ಅಂಡರ್ ಪಾಸ್ ನಲ್ಲಿ ಕಾರಗಳು, ದ್ವಿಚಕ್ರ ವಾಹನಗಳು  ಹಾರನ್ ಮಾಡುತ್ತಾ ಕಿವಿ ಚಿಟ್ ಹಿಡಿಸುತ್ತಿದ್ದವು. ಇಷ್ಟಾದರೂ ಪೊಲೀಸರು ಬರಲೇ ಇಲ್ಲ, ಕೆಲವರು ನಾಳೆ ಮುಖ್ಯಮಂತ್ರಿ ಬರೋದಕ್ಕೆ ಈಗಲೇ ಬಂದೋಬಸ್ತ್ ಗೆ ಹೋಗಿರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು.

ಒಂದರ ಮೂತಿಗೆ ಇನ್ನೊಂದು ಮೂತಿ ಇಟ್ಟುಕೊಂಡು ನಾಲ್ಕು ದಿಕ್ಕುಗಳಲ್ಲೂ ಜಾಗವಿಲ್ಲದೆ ಕಾರುಗಳು ನಿಂತಿದ್ದರಿಂದ ಇಷ್ಟೊಂದು ಟ್ರಾಫಿಕ್ ಜಾಮ್ ಆಗಲು ಕಾರಣವಿರಬಹುದು.

Leave a Reply

Your email address will not be published. Required fields are marked *